ಸಿಂಪಲ್ ಟಿಪ್ಸ್: ಸಹೋದ್ಯೋಗಿಯ ಜೊತೆ ಹೇಗಿರಬೇಕು ಗೊತ್ತಾ?

ಕಚೇರಿಯೊಳಗೆ ಫೋನ್ ಕಾಲ್ ಮಾಡಬೇಕಾದ ಸಂದರ್ಭದಲ್ಲಿ, ನಿಮ್ಮ ಅಸುಪಾಸಿನಲ್ಲಿರುವವರ ಬಗ್ಗೆ ಗಮನ ಇರಲಿ. ಪ್ರತ್ಯೇಕ ಕೊಠಡಿಗಳಿದ್ದಲ್ಲಿ ಅದನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

​1.ಸೈಲೆನ್ಸ್ ಪ್ಲೀಸ್: ಕಚೇರಿಯೊಳಗೆ ಫೋನ್ ಕಾಲ್ ಮಾಡಬೇಕಾದ ಸಂದರ್ಭದಲ್ಲಿ, ನಿಮ್ಮ ಅಸುಪಾಸಿನಲ್ಲಿರುವವರ ಬಗ್ಗೆ ಗಮನ ಇರಲಿ. ಪ್ರತ್ಯೇಕ ಕೊಠಡಿಗಳಿದ್ದಲ್ಲಿ ಅದನ್ನು ಉಪಯೋಗಿಸಿಕೊಳ್ಳಿ,

​2.​ ವಾಪಸ್ ಮಾಡಿ: ಸಹೋದ್ಯೋಗಿಯಿಂದ ಪಡೆದಿರುವ ಪೆನ್, ಕತ್ತರಿ, ಸ್ಟ್ಯಾಪ್ಲರ್ ನ್ನು ಅವರು ಕೇಳುವ ಮುಂಚೆಯೇ ವಾಪಸ್ ನೀಡಿ. ಬೇರೆಯವರ ವಸ್ತುಗಳನ್ನು ವಾಪಸ್ ಮಾಡಲು ಮರೆಯುವುದು ಅತ್ಯಂತ ಕೆಟ್ಟ ಗುಣ.

​3.​ ಮಹತ್ವ ನೀಡಿ: ಸಹೋದ್ಯೋಗಿಯೊಂದಿಗೆ ಸಭೆ ಇದ್ದಲ್ಲಿ ಸಮಯಕ್ಕೆ ಮೊದಲೇ ಹಾಜರಾಗಿ, ಸಮಯದ ಮೇಲೆ ನಿಮಗಿರುವ ಗೌರವವನ್ನು ತೋರಿಸಿ. ಸಮಯಕ್ಕೆ ಸರಿಯಾಗಿ ಹೋದಲ್ಲಿ ನಿಮ್ಮ ಮೇಲೆ ಅವರಿಗಿರುವ ಗೌರವ ಹೆಚ್ಚುತ್ತದೆ.

​4. ​ಯಾರನ್ನೂ ನೋಯಿಸಬೇಡಿ: ಕಚೇರಿಯಲ್ಲಿ ಎಲ್ಲ ಜಾತಿಯ, ಧರ್ಮದ ಮೇಲೆ ನಂಬಿಕೆ ಹೊಂದಿರುವವರು ಇರುತ್ತಾರೆ. ಮಾತನಾಡುವ ಸಮಯದಲ್ಲಿ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಅವರ ಮನಸ್ಸಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಿ.

5.ಗಾಸಿಪ್ ಬೇಡ: ಕಚೇರಿಗಳಲ್ಲಿ ಸಹೋದ್ಯೋಗಿಗಳ ಬಗ್ಗೆ ಗಾಸಿಪ್ ಮಾಡುವುದು ಸಾಮಾನ್ಯ. ನೀವು ಅದರಲ್ಲಿ ಭಾಗಿಯಾಗಿ ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಬೇಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com