ಅಲ್ಲಿದೆ ನಮ್ಮನೆ ರೈಲಿಗೆ ಬಂದೆ ಸುಮ್ಮನೆ

ಇವಳು ಜಗತ್ತಿನ ಅತಿವೇಗದ ವಿದ್ಯಾರ್ಥಿನಿ! ಜರ್ಮನಿಯ 23 ವರುಷದ ಲಿಯೋನೀ ಮುಲ್ಲರ್ ಟ್ರೈನಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಾ ದೊಡ್ಡ ಸುದ್ದಿಗೆ ಕಾರಣಳಾಗಿದ್ದಾಳೆ...
ಚಲಿಸುವ ರೈಲಿನಲ್ಲಿ ಜೀವನ ನಡೆಸುತ್ತಿರುವ ಜರ್ಮನಿಯ ವಿದ್ಯಾರ್ಥಿನಿ ಲಿಯೋನೀ ಮುಲ್ಲರ್
ಚಲಿಸುವ ರೈಲಿನಲ್ಲಿ ಜೀವನ ನಡೆಸುತ್ತಿರುವ ಜರ್ಮನಿಯ ವಿದ್ಯಾರ್ಥಿನಿ ಲಿಯೋನೀ ಮುಲ್ಲರ್

ಇವಳು ಜಗತ್ತಿನ ಅತಿವೇಗದ ವಿದ್ಯಾರ್ಥಿನಿ! ಜರ್ಮನಿಯ 23 ವರುಷದ ಲಿಯೋನೀ ಮುಲ್ಲರ್ ಟ್ರೈನಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಾ ದೊಡ್ಡ ಸುದ್ದಿಗೆ ಕಾರಣಳಾಗಿದ್ದಾಳೆ.

ಬಟ್ಟೆ, ಟ್ಯಾಬ್ ಕಂಪ್ಯೂಟರ್, ಪುಸ್ತಕಗಳು, ಸ್ಯಾನಿಟರಿ ಬ್ಯಾಗ್- ಎಲ್ಲವನ್ನೂ ಪಕ್ಕದಲ್ಲೇ ಇಟ್ಟುಕೊಂಡಿರುತ್ತಾಳೆ. ಈಕೆ ವಾಸಿಸುತ್ತಿದ್ದ ಅಪಾರ್ಟ್‍ಮೆಂಟ್ ಮೇಲೆ ಏನೋ ಕೇಸ್ ನಡೆಯುತ್ತಿದೆಯಂತೆ. ಇನ್ನು ಎಲ್ಲಿ ವಾಸಿಸೋದು ಎಂಬ ಪ್ರಶ್ನೆಯಿಟ್ಟುಕೊಂಡು ಎಲ್ಲೆಡೆಯೂ ವಾಸಿಸಬಹುದೆಂದು ಟ್ರೈನಿನ ಒಂದು ಕಂಪಾರ್ಟ್‍ಮೆಂಟನ್ನೇ ಬುಕ್ ಮಾಡಿದ್ದಾಳೆ.

ತಿಂಗಳಿಗೆ 18,265 ರುಪಾಯಿ ಬಾಡಿಗೆ. ಟ್ರೈನಿನಲ್ಲೇ ಸ್ನಾನ ಮಾಡಿ, ಅಲ್ಲೇ ಬಟ್ಟೆ ಒಗೆದು ಒಣಗಿಸುತ್ತಾಳೆ. ರೈಲು 190 ಕಿ.ಮೀ. ವೇಗದಲ್ಲಿ ಓಡೋವಾಗ ಖಾಲಿ ನೋಟ್‍ಬುಕ್‍ನಲ್ಲಿ ಬರೆಯೋದು ಈಕೆಗೆ ಅಭ್ಯಾಸ ಆಗಿಹೋಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com