ಮೊಟ್ಟೆಯಿಡಲು ಬಂತು 64 ವರ್ಷದ ಹಕ್ಕಿ

ನಿಗದಿತವಾಗಿ ಪಥ ದಾಖಲಾತಿಗೆ ಒಳಪಟ್ಟಿದ್ದ ಕಡಲ ಹಕ್ಕಿಯೊಂದು ತನ್ನ 64ನೇ ವಯಸ್ಸಿನಲ್ಲಿ ಮೊಟ್ಟೆಯಿಡಲು ಆಗಮಿಸುವ ಮೂಲಕ ಪಕ್ಷಿ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ...
ಲೇಸನ್ ಅಲ್ಬಟ್ರಾಸ್
ಲೇಸನ್ ಅಲ್ಬಟ್ರಾಸ್
ನ್ಯೂಯಾರ್ಕ್: ನಿಗದಿತವಾಗಿ ಪಥ ದಾಖಲಾತಿಗೆ ಒಳಪಟ್ಟಿದ್ದ ಕಡಲ ಹಕ್ಕಿಯೊಂದು ತನ್ನ 64ನೇ ವಯಸ್ಸಿನಲ್ಲಿ ಮೊಟ್ಟೆಯಿಡಲು ಆಗಮಿಸುವ ಮೂಲಕ ಪಕ್ಷಿ ಪ್ರೇಮಿಗಳಲ್ಲಿ ಸಂತಸ ಮೂಡಿ ಸಿದೆ. 
ಲೇಸನ್ ಅಲ್ಬಟ್ರಾಸ್ ಜಾತಿಯ ವಿಸ್ಡಂ ಹೆಸರಿನ ಈ ಕಡಲಹಕ್ಕಿಗೆ 1956ರಲ್ಲಿ ಮೊದಲ ಬಾರಿ ಪಥ ಸಂವೇದಕ ಅಳವಡಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ನಿಯಮಿತವಾಗಿ ಈ ಹಕ್ಕಿ ಮೊಟ್ಟೆಯಿಡಲು ಶಾಂತಸಾಗರದ ಅಟಾಲ್ ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಧಾಮಕ್ಕೆ ಆಗಮಿಸುತ್ತಿದೆ. ತನ್ನ ಇಳಿವಯಸ್ಸಿನಲ್ಲಿ ವಿಸ್ಡಂ ಮೊಟ್ಟೆಯಿಡಲು ಹಿಂದಿರುಗಿದ್ದನ್ನು ಕಂಡು ತುಂಬಾ ಆನಂದವಾಗಿದೆ ಎಂದು ಸಂರಕ್ಷಣಾ ಧಾಮದ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ. 
ದಾಖಲಾತಿಗೆ ಒಳಪಟ್ಟ ನಂತರ ವಿಸ್ಡಂ ಹಕ್ಕಿ ಇದುವರೆಗೆ 36 ಬಾರಿ ಮೊಟ್ಟೆಯಿಟ್ಟು ಮರಿ ಮಾಡಿದೆ. ಲೇಸನ್ ಅಲ್ಬಟ್ರಾಸ್ ಜಾತಿಯ ಕಡಲಹಕ್ಕಿಗಳು ವರ್ಷಕ್ಕೆ ಒಂದೇ ಮೊಟ್ಟೆಯಿಡುತ್ತವೆ. ಆರು ತಿಂಗಳು ಅಲ್ಲೇ ಇದ್ದು, ಮರಿಗಳನ್ನು ಪೋಷಿಸುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com