ಚಾಕೊಲೆಟ್‍ನಲ್ಲಿ ಪುಟಿನ್

ಚಾಕೊಲೆಟ್ ಯಾರಿಗೆ ತಾನೆ ಇಷ್ಟವಿಲ್ಲ. ತಿನ್ನದೇ ಬಿಟ್ಟಾರೆಯೇ? ಆದರೆ ರಷ್ಯಾದ ನಿಕಿಟ ಗ್ಯೂಸೆವ್ ಎಂಬ ಶಿಲ್ಪ ಕಲಾವಿದನಿಗೆ...
ಚಾಕಲೇಟಿನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್  ಅವರ ಶಿಲ್ಪವನ್ನು ತಯಾರಿಸಿದ  ನಿಕಿಟ  ಗ್ಯೂಸೆವ್. ಬಲಚಿತ್ರದಲ್ಲಿ ಪುಟಿನ್ ಶಿಲ್ಪದ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿರುವ ಯ
ಚಾಕಲೇಟಿನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಶಿಲ್ಪವನ್ನು ತಯಾರಿಸಿದ ನಿಕಿಟ ಗ್ಯೂಸೆವ್. ಬಲಚಿತ್ರದಲ್ಲಿ ಪುಟಿನ್ ಶಿಲ್ಪದ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿರುವ ಯ

ಚಾಕೊಲೆಟ್ ಯಾರಿಗೆ ತಾನೆ ಇಷ್ಟವಿಲ್ಲ. ತಿನ್ನದೇ ಬಿಟ್ಟಾರೆಯೇ? ಆದರೆ ರಷ್ಯಾದ ನಿಕಿಟ  ಗ್ಯೂಸೆವ್ ಎಂಬ ಶಿಲ್ಪ ಕಲಾವಿದನಿಗೆ ಚಾಕೊಲೆಟ್ ಜೇಡಿಮಣ್ಣಿನ ಸಮಾನ. `ವೇದಾಂತಿ   ಹೇಳಿದನೂ ಹೊನ್ನೆಲ್ಲ ಮಣ್ಣು ಮಣ್ಣು...' ಎಂಬ ನಮ್ಮ ಜಿಎಸ್‍ಎಸ್‍ರ ಕವಿವಾಣಿಯನ್ನು ಈ  ಕಲಾವಿದ ಬೇರೆ ರೀತಿಯಲ್ಲಿ ಕೇಳಿಸಿಕೊಂಡಿರಬೇಕು.

ಹೀಗೆ ಈ ಕಲಾವಿದ ಚಾಕೊಲೆಟ್‍ನಲ್ಲಿ ಸೃಷ್ಟಿಸಿದ್ದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್  ವರನ್ನು! ಏಕೆಂದರೆ ಅವರು `ಸ್ವೀಟ್ ಪರ್ಸನ್' ಎಂದಿರಬಹುದು. ಆದರೆ ಈ ನಿಕಿಟ ಅವರು ಈ  ಹಿಂದೆ ಕೂಡ ಚಾಕೊಲೆಟ್ ಬಳಸಿ ಶಿಲ್ಪಗಳನ್ನು ಮಾಡಿದ್ದಿದೆ. ಅದು ಹದವಾಗಿದ್ದು ರಚನೆಗೆ  ಉತ್ತಮವೆನ್ನುವುದು ಈ ಕಲಾವಿದನ ಅಭಿಪ್ರಾಯ. ಪುಟಿನ್ ಅವರ ಈ ಶಿಲ್ಪ ಆಳೆತ್ತರವಿದ್ದು  ಅದಕ್ಕೆ 70 ಕೆಜಿ ಚಾಕೊಲೆಟ್ ಖರ್ಚಾಗಿದೆಯಂತೆ! ಶಿಲ್ಪವನ್ನು ಮುಟ್ಟಬಾರದು, ನೆಕ್ಕಬಾರದು,  ಕಚ್ಚಬಾರದಂತೆ! ಸುಮ್ಮನೆ ನೋಡಿ ಆಸ್ವಾದಿಸುವ ಟೇಸ್ಟ್ ಇದ್ದರೆ ಸಾಕಂತೆ! 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com