ಫನ್‍ಟೂಟ್ : ‘ಕಲಿಕಾ ಅಂತರ’ದ ಸವಾಲನ್ನು ಸರಿಪಡಿಸುವ ಭರವಸೆ

ಭಾರತೀಯ ಪ್ರಾಥಮಿಕ ಶಿಕ್ಷಣ ಮಟ್ಟದ ವಿದ್ಯಾರ್ಥಿಗಳ ಕಳಪೆ ಕಲಿಕಾ ಮಟ್ಟ ನಮ್ಮ ಬೋಧನಾ ವ್ಯವಸ್ಥೆಯ ಬಹು ದೊಡ್ಡ ವೈಫಲ್ಯವಾಗಿದೆ.
ಫನ್‍ಟೂಟ್
ಫನ್‍ಟೂಟ್

ಬೆಂಗಳೂರು: ಭಾರತೀಯ ಪ್ರಾಥಮಿಕ ಶಿಕ್ಷಣ ಮಟ್ಟದ ವಿದ್ಯಾರ್ಥಿಗಳ ಕಳಪೆ ಕಲಿಕಾ ಮಟ್ಟ ನಮ್ಮ ಬೋಧನಾ ವ್ಯವಸ್ಥೆಯ ಬಹು ದೊಡ್ಡ ವೈಫಲ್ಯವಾಗಿದೆ. ತರಗತಿ ಬೋಧನೆಗಳಲ್ಲಿ, ವಿದ್ಯಾರ್ಥಿಗಳ ಕಲಿಕಾ ಮಟ್ಟದಲ್ಲಿರುವ ಕಲಿಕಾ ವ್ಯತ್ಯಾಸಗಳನ್ನು ನಿರ್ಲಕ್ಷಿಸಿದ, ಏಕರೂಪ ಬೋಧನಾ ವಿಧಾನವೇ ಇದಕ್ಕೆ ಕಾರಣ. ಈ ಪದ್ಧತಿಯು ಕಲಿಕೆಯ ಆನಂದವನ್ನು ಪ್ರೋತ್ಸಾಹಿಸುವುದಿಲ್ಲ ಮತ್ತು ಇದು ಗ್ರಾಮೀಣ ಶಾಲೆಗಳಲ್ಲಿ ಕಳವಕಳಕಾರಿ ಪ್ರಮಾಣದಲ್ಲಿ ಶಾಲೆಯಿಂದ ಹೊರಗುಳಿಯುವ ಹಾಗೂ ಕಡಿಮೆ ಅಂಕಗಳನ್ನು ಪಡೆಯುವ ಮಕ್ಕಳ ಪ್ರಮಾಣ ಹಾಗೂ ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಖಿನ್ನತೆಗೊಳಗಾಗಲು ಕಾರಣವಾಗುತ್ತಿದೆ. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ 100%ನಷ್ಟು ಪ್ರಮಾಣದಲ್ಲಿ ದೊರೆಯುತ್ತಿದ್ದರೂ ಸಹ, ‘ಚೀಫ್ ರೈಟ್ಸ್ ಅಂಡ್ ಯೂ’ (ಕ್ರೈ) ಎಂಬ ಸರ್ಕಾರೇತರ ಸಂಸ್ಥೆ ಕೈಗೊಂಡಿರುವ ಒಂದು ಅಧ್ಯಯನ, ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣ ಕಳವಳಕಾರಿ 40%ರಷ್ಟಿದೆ ಎಂಬುದನ್ನು ತೋರಿಸುತ್ತದೆ.

ಶಿಕ್ಷಣದ 10ನೇ ವಾರ್ಷಿಕ ವರದಿಯು (ಎಎಸ್‍ಇಆರ್ 2014), 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೈಕಿ 50%ನಷ್ಟು ವಿದ್ಯಾರ್ಥಿಗಳು ಮಾತ್ರ 2ನೇ ತರಗತಿಯ ಪಠ್ಯವನ್ನು ಓದಬಲ್ಲರು ಮತ್ತು ಗಣಿತದಲ್ಲಿ ಮಕ್ಕಳ ಕಲಿಕಾ ಕ್ಷಮತೆ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂಬ ಗಂಭೀರ ಅಂಶಗಳನ್ನು ವರದಿ ಮಾಡಿದೆ. 2012ರಲ್ಲಿ ಗ್ರಾಮೀಣ ಭಾರತದಲ್ಲಿ, 3ನೇ ತರಗತಿಯ ವಿದ್ಯಾರ್ಥಿಗಳ ಪೈಕಿ 26.3%ನಷ್ಟು ವಿದ್ಯಾರ್ಥಿಗಳು ಮಾತ್ರ 2 ಅಂಕಿಗಳ, ಕಳೆಯುವ ಲೆಕ್ಕವನ್ನು ಮಾಡುವ ಸಾಮರ್ಥ್ಯ ಹೊಂದಿದ್ದರು. 2014ರ ವೇಳೆಗೆ ಈ ಅಂಕಿಗಳು 25.3%ಕ್ಕೆ ಇಳದಿದೆ! ಇದು ಇಡ್ರೀಮ್‍ನ ‘ವ್ಯಕ್ತಿಗತ ತರಬೇತಿ & ಕ್ರಿಯಾಶೀಲ’ ಕಾರ್ಯಾಗಾರದ ಪ್ರಮುಖ ಚರ್ಚಾ ವಿಷಯವಾಗಿತ್ತು. ಬೆಂಗಳೂರಿನ ಲಾ ಮೆರಿಡಿಯನ್‍ನಲ್ಲಿ ನಡೆದ ಈ ಚರ್ಚೆಯಲ್ಲಿ ಗ್ಲೋಬಲ್ ಎಜುಕೇಷನ್ ಅಂಡ್ ಲೀಡರ್‍ಷಿಪ್ ಫೌಂಡೇಷನ್‍ನ ಸಿಇಒ ಪದ್ಮಶ್ರೀ ಗೌರಿ ಈಶ್ವರನ್ ಸೇರಿದಂತೆ ಭಾರತದ ಪ್ರಮುಖ ಶಿಕ್ಷಣ ತಜ್ಞರು ಪಾಲ್ಗೊಂಡರು.

ಬುದ್ಧಿವಂತ ಯಂತ್ರಗಳ ಮೂಲಕ ಗುಣಮಟ್ಟದ ಕಲಿಕಾ ಪರಿಹಾರಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ‘ಇಡ್ರೀಮ್ಸ್ ಎಜುಸಾಫ್ಟ್ ಸಲ್ಯೂಷನ್ಸ್’, 2010ರಲ್ಲಿ ‘ಫನ್‍ಟೂಟ್’ನ್ನು ಬುದ್ಧಿವಂತಿಕೆ ಹಾಗೂ ಸರಿಹೊಂದುವಂತಹ ವೈಯಕ್ತಿಕ ತರಬೇತಿ ಪರಿಕರವಾಗಿ ಪರಿಚಯಿಸಿತು. ತಡೆಯುಂಟು ಮಾಡುವಂತಹ ತಾಂತ್ರಿಕ ಕ್ರಿಯಾಶೀಲತೆಗಳ ಮೂಲಕ ಪ್ರತಿಯೊಂದು ಮಗುವಿನ ಜೀವನವನ್ನು ಸುಧಾರಿಸುವ ಗುರಿ ಹಾಗೂ ಈ ಮೂಲಕ ಬೋಧನಾ ವಿಧಾನಗಳನ್ನು ಸುಧಾರಿಸುವ ಅಂಶಗಳನ್ನು ಈ ಪರಿಕರ ಹೊಂದಿದೆ. ಪ್ರಸ್ತುತ ಇದು 2-9ನೇ ತರಗತಿಗಳ ಗಣಿತ ಹಾಗೂ 2-5ನೇ ತರಗತಿಗಳವರೆಗಿನ ವಿಜ್ಞಾನ ವಿಷಯಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿದೆ. ಈ ತರಬೇತಿ ಸಂಪನ್ಮೂಲದ ಪಠ್ಯಕ್ರಮ, ಹೊಸ ಪಠ್ಯಕ್ರಮಕ್ಕೆ ಪೂರಕವಾಗಿ ಸರಿಹೊಂದುವ ಸಾಮರ್ಥ್ಯವನ್ನೂ ಹೊಂದಿದೆ. ಪರಿಚಯಿಸಿದಾಗಿನಿಂದ ಈವರೆಗೆ ಇದು ಸ್ವಯಂಚಾಲಿತವಾಗಿ 4 ದಶಲಕ್ಷ ಕಲಿಕಾ ಅಂತರಗಳನ್ನು ಗುರುತಿಸಿ, ಪರಿಹರಿಸಿದೆ ಹಾಗೂ 6 ದಶಲಕ್ಷ ಕಲಿಕಾ ಮಧ್ಯಸ್ಥಿಕೆಗಳನ್ನು ಮಾಡಿದೆ. ಪ್ರಸ್ತುತ 100 ಅತ್ಯುತ್ತಮ ಶಾಲೆಗಳು ಇದನ್ನು ಬಳಸುತ್ತಿದ್ದು, ಭಾರತದಾದ್ಯಂತ 50 ನಗರಗಳು/ಪಟ್ಟಣಗಳಲ್ಲಿ 50,000ಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದಿದ್ದಾರೆ.

ಫನ್‍ಟೂಟ್ ಬಗ್ಗೆ ಮಾತನಾಡಿದ ಇಡ್ರೀಮ್ಸ್ ಎಜುಸಾಫ್ಟ್ ಪ್ರೈ. ಲಿ.ನ ಅಧ್ಯಕ್ಷ ಹಾಗೂ ವಿಪ್ರೊದ ಹಿಂದಿನ ಸಿಇಒ ಶ್ರೀ ಗಿರೀಶ್ ಪರಂಜಪೆ ಅವರು, “ಫನ್‍ಟೂಟ್‍ನಂತಹ ಪರಿಣಾಮಕಾರಿ ತಂತ್ರಜ್ಞಾನದ ಜೊತೆಗೆ ಭವಿಷ್ಯಸೂಚಕ ಕ್ರಮಾವಳಿಗಳಿರುವ ತಂತ್ರಜ್ಞಾನವು, ಮಕ್ಕಳಿಗೆ ವಿಷಯದ ಬಗ್ಗೆ ಮೂಲಭೂತ ಜ್ಞಾನದ ಮೇಲೆ ಹಿಡಿತವನ್ನು ಒದಗಿಸುವಂತಹ ವ್ಯಕ್ತಿಗತ ಕಲಿಕೆಯ ಮೂಲಕ ಮಗುವಿನ ಪ್ರದರ್ಶನ ಸಂಬಂಧಿತ ಸಾಮರ್ಥ್ಯವನ್ನು ಮಹತ್ತರವಾಗಿ ಹೆಚ್ಚಿಸುತ್ತದೆ. ನಮ್ಮ ಕಾರ್ಯಕ್ರಮವು ಕ್ರಿಯಾತ್ಮಕ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಬಲಿಷ್ಠ ಅಡಿಪಾಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ,” ಎಂದರು.

ಈ ಉಪಕ್ರಮದ ಬಗ್ಗೆ ಮಾತನಾಡಿದ ಫನ್‍ಟೂಟ್‍ನ ಸ್ಥಾಪಕ ಹಾಗೂ ಸಿಇಒ ಶ್ರೀ ರಾಜೀವ್ ಪಾಠಕ್ ಅವರು, “ನಮ್ಮ ಈ ಉಪಕ್ರಮವು, ಗುಣಮಟ್ಟದ ಕಲಿಕೆ ಎಂಬ ಅತೀ ದೊಡ್ಡ ಸವಾಲನ್ನು ಎದುರಿಸುವ ಸಲುವಾಗಿ ಹಾಗೂ ವ್ಯಕ್ತಿಗತ ಕಲಿಕಾ ಪದ್ಧತಿಯು ಮಗುವಿನ ಜೀವನವನ್ನು ಹೇಗೆ ಸುಧಾರಿಸಬಲ್ಲದು ಎಂದು ತಿಳಿಸಿಕೊಡುವ ಸಲುವಾಗಿ ಪೋಷಕರು, ಶಿಕ್ಷಕರು, ಶಾಲಾ ಆಡಳಿತಗಾರರು ಹಾಗೂ ಸರ್ಕಾರಿ ಪ್ರಾಧಿಕಾರಿಗಳನ್ನು ಜೊತೆಗೂಡಿಸುವ ಉದ್ದೇಶವನ್ನು ಹೊಂದಿದೆ. ಈ ಬಹಿರಂಗ ಚರ್ಚೆ ಹಾಗೂ ಕಾರ್ಯಾಗಾರಗಳು, ದೇಶದಾದ್ಯಂತ ಇರುವಂತಹ ವಿದ್ಯಾರ್ಥಿಗಳಿಗೆ ಸಮಾನ ಕಲಿಕಾ ಅವಕಾಶಗಳನ್ನು ಸೃಷ್ಟಿಸಲು, ದೇಶದಾದ್ಯಂತ ನಡೆಸಲಾಗುವ ನಮ್ಮ ಶೈಕ್ಷಣಿಕ ಸರಣಿ ಕಾರ್ಯಕ್ರಮಗಳ ಭಾಗವಾಗಿವೆ,” ಎಂದು ವಿವರಿಸಿದರು.

ಈ ಕುತೂಹಲವನ್ನು ಹುಟ್ಟಿಸಿದಂತಹ ಕಾರ್ಯಾಗಾರವು, ಫನ್‍ಟೂಟ್ ತನ್ನ ವಿವರಾತ್ಮಕ ವಿಶ್ಲೇಷಣೆಗಳ ಮೂಲಕ ವಿದ್ಯಾರ್ಥಿಗಳ ಪ್ರಗತಿ, ಕಲಿಕಾ ಅಂತರಗಳು, ಪರಿಹಾರಗಳು ಹಾಗೂ ಪ್ರಮುಖ ವಿಷಯಗಳ ಬಗ್ಗೆ ಶಿಕ್ಷಕರು ಹಾಗೂ ಪೋಷಕರು ತಿಳಿದುಕೊಳ್ಳಲು ಹೇಗೆ ಸಹಾಯಕಾರಿಯಾಗುತ್ತದೆ ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿತು. ಜೊತೆಗೆ, ಈ ಸಾಫ್ಟ್‍ವೇರ್, ಕೃತಕ ಬುದ್ಧಿವಂತಿಕೆಯ ಸುತ್ತಲಿರುವ ಅನೇಕ ಕ್ರಮಾವಳಿಗಳನ್ನು ಹೇಗೆ ಬಳಸಿಕೊಳ್ಳುತ್ತದೆ, ಯಾಂತ್ರಿಕ ಕಲಿಕೆ ಹಾಗೂ ಜ್ಞಾನವನ್ನು ಶೇಖರಿಸುವ ಸ್ವಾಭಾವಿಕ ಭಾಷಾ ಪ್ರಕ್ರಿಯೆ ಮತ್ತು ವ್ಯಕ್ತಿಗತ ಬೋಧನೆ ಹಾಗೂ ಅದರ ಕೊಡುಗೆಯು ತರಗತಿಯಲ್ಲಿ, ವಿದ್ಯಾರ್ಥಿಗಳಲ್ಲಿ ಹೇಗೆ ಆಸಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಭಾರತೀಯ ವಿದ್ಯಾರ್ಥಿಗಳಲ್ಲಿರುವ ‘ಕಲಿಕಾ ಅಂತರ’ಗಳ ಬಗ್ಗೆ ಒಳನೋಟಗಳನ್ನು ವಿವರಿಸಿತು. ಶಿಕ್ಷಣ ಕ್ಷೇತ್ರದಲ್ಲಿ ತೊಡಗಿರುವ ಬದಲಾವಣೆ ತರುವಂತಹ ವ್ಯಕ್ತಿಗಳು, ವ್ಯಕ್ತಿಗತ ಕಲಿಕೆಯ ಈ ಹೊಸ ಆಯಾಮದಲ್ಲಿ ತಮ್ಮ ಪಾತ್ರಗಳನ್ನು ಹೇಗೆ ಅಳವಡಿಸಿಕೊಳ್ಳಬೇಕೆಂಬ ಬಗ್ಗೆ ಈ ಉಪಕ್ರಮ ಕರೆ ನೀಡಿತು.

ಬಹಿರಂಗ ಚರ್ಚೆಯಲ್ಲಿ ಭಾಗವಹಿಸಿದ, ಭಾರತೀಯ ಶಿಕ್ಷಣ ವ್ಯವಸ್ಥೆಯ ಇತರೆ ಪ್ರಮುಖ ಶಿಕ್ಷಣ ತಜ್ಞರ ಪೈಕಿ ಮುಂಬೈನ ಪೊದಾರ್ ಇಂಟರ್‍ನ್ಯಾಷನಲ್ ಸ್ಕೂಲ್‍ನ ನಿರ್ದೇಶಕಿ ಡಾ. ವಂದನಾ ಲಲ್ಲಾ, ಚಂಢೀಘಡದ ಸೌಪಿನ್ ಸ್ಕೂಲ್‍ನ ಪ್ರಾಂಶುಪಾಲರಾದ ಶ್ರೀ ಎ.ಎಸ್. ಸಿದು, ತೆಲಂಗಾಣದ ಪರಮಿತ ಗ್ರೂಪ್ ಆಫ್ ಸ್ಕೂಲ್ಸ್‍ನ ಅಧ್ಯಕ್ಷ ಡಾ. ಪ್ರಸಾದ್ ರಾವ್ ಮತ್ತು ದೆಹಲಿಯ ಬಾಲ ಭಾರತಿ ಸ್ಕೂಲ್‍ನ ಪ್ರಾಂಶುಪಾಲರಾದ ಶ್ರೀ ಎಲ್.ವಿ. ಸೆಹಗಲ್ ಅವರಿದ್ದರು.

ಶಿಕ್ಷಣ ಸಮುದಾಯವನ್ನು ಜೊತೆಗೂಡಿಸಿ, ಮಕ್ಕಳಿಗಾಗಿ ಕ್ರಿಯಾತ್ಮಕ ಹಾಗೂ ನವೀನ ಆಲೋಚನೆಗಳ ಬಗ್ಗೆ ಗಂಭೀರವಾಗಿ ಯೋಚಿಸುವಂತಹ ಮಾಸಿಕ ಉಪಕ್ರಮದ ಭಾಗವಾಗಿ ಈ ‘ಫನ್‍ಟೂಟ್ ಶೈಕ್ಷಣಿಕ ಸರಣಿ’ಯ ಭಾಗವನ್ನು ಆಯೋಜಿಸಲಾಗಿತ್ತು. ಜೊತಗೆ, ಇದು ಮಗುವಿನ ಸಮಸ್ಯೆ ಪರಿಹರಿಸುವ ಕೌಶಲ್ಯ ವಿಕಸನಗೊಳಿಸಲು ಬೆಂಬಲ ಒದಗಿಸಲು ಹಾಗೂ ಈ ಮೂಲಕ ವಿವಿಧ ವಿಷಯಗಳ ಬಗ್ಗೆ ಮಗುವಲ್ಲಿ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಹೊಸ ತಂತ್ರಜ್ಞಾನದ ಕ್ಷಮತೆಯನ್ನು ಅಳತೆ ಮಾಡುತ್ತದೆ.

ಇಡ್ರೀಮ್ಸ್ ಎಜುಸಾಪ್ಟ್ ಸಲ್ಯೂಷನ್ಸ್

ಇಡ್ರೀಮ್ಸ್ ಎಜುಸಾಫ್ಟ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಮೂಲದ ಶೈಕ್ಷಣಿಕ ತಂತ್ರಜ್ಞಾನ ಕಂಪನಿಯಾಗಿದೆ. 2010ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಅತ್ಯಂತ ಅನುಭವೀ ವ್ಯಕ್ತಿಗಳಿಂದ ಕೂಡಿರುವ ತಂಡವನ್ನು ಹೊಂದಿದೆ. ಇಡ್ರೀಮ್ಸ್ ಎಜುಸಾಫ್ಟ್‍ನ ಉತ್ಪನ್ನಗಳು, ಕೃತಕ ಬುದ್ಧಿವಂತಿಕೆ (ಎಐ), ಯಾಂತ್ರಿಕ ಕಲಿಕೆ, ಎನ್‍ಎಲ್‍ಪಿ ಹಾಗೂ ಮಾನತಾಡುವ ಶಕ್ತಿಯ ಸಂಸ್ಕರಣೆಯಂತಹ ವಿವಿಧ ಕ್ರಿಯಾಶೀಲ ತಂತ್ರಜ್ಞಾನಗಳನ್ನು ಆಧರಿಸಿದೆ. 2011-12ರಲ್ಲಿ ‘ಇಡ್ರೀಮ್ಸ್ ಎಜುಸಾಫ್ಟ್’ ಬ್ಲೂಮ್‍ಬರ್ಗ್ ಪಿಚ್ ಪ್ರಶಸ್ತಿಗೆ ಭಾಜನವಾಗಿತ್ತು ಹಾಗೂ ಮಾರಿಕೊ ಇನ್ನೊವೇಷನ್ ಅವಾರ್ಡ್ 2012ರ ಅಂತಿಮ ಸುತ್ತಿಗೆ ಅರ್ಹತೆಯನ್ನೂ ಪಡೆದಿತ್ತು. ಜೊತೆಗೆ, ಇಡ್ರೀಮ್ಸ್ ಎಜುಸಾಫ್ಟ್‍ನ ಪ್ರಮುಖ ಉತ್ಪನ್ನ ‘ಫನ್‍ಟೂಟ್’ 2013ರಲ್ಲಿ, ನ್ಯಾಸ್ಕಾಮ್ ಸೋಷಿಯಲ್ ಇನ್ನೊವೇಷನ್ ಫೌಂಡೇಷನ್ (ನ್ಯಾಸ್ಕಾಮ್ ಸಾಮಾಜಿಕ ಕ್ರಿಯಾಶೀಲ ಪ್ರತಿಷ್ಠಾಪನೆ) ವತಿಯಿಂದ ಅಂತಿಮ ಸುತ್ತನ್ನು ತಲುಪಿದ 3 ಸಂಸ್ಥೆಗಳ ಪೈಕಿ ಆಯ್ಕೆಯಾಗಿತ್ತು. ಪ್ರಸ್ತುತ ಕಂಪನಿಯು ಭಾರತದ 45 ವಿವಿಧ ನಗರಗಳು ಹಾಗೂ ಪಟ್ಟಣಗಳಲ್ಲಿ ಅಸ್ತಿತ್ವವನ್ನು ಹೊಂದಿದ್ದು, 100ಕ್ಕೂ ಹೆಚ್ಚಿನ ಸಂಖ್ಯೆಯ ಶಾಲೆಗಳಲ್ಲಿ, 50,000ಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಂದ ಬಳಕೆಯಾಗುತ್ತಿದೆ. ಇಡ್ರೀಮ್ಸ್ ಎಜುಸಾಫ್ಟ್, ವಿದ್ಯಾರ್ಥಿ-ಕೇಂದ್ರಿತ ತಡೆಯೊಡ್ಡುವ ತಾಂತ್ರಿಕ ಕ್ರಿಯಾಶೀಲತೆಗಳ ಮೂಲಕ ಪ್ರತಿಯೊಂದು ವಿದ್ಯಾರ್ಥಿಯೂ ಜಾಗತಿಕ ಮಟ್ಟದಲ್ಲಿ ತನ್ನ ಜೀವನ ಸುಧಾರಣೆ ಹೊಂದುವುದನ್ನು ಖಾತ್ರಿಪಡಿಸುತ್ತದೆ. ಕಂಪನಿಯು ಈ ತಂತ್ರಜ್ಞಾನವನ್ನು ‘ಹೈಬ್ರಿಡ್ ಕ್ಲೌಡ್ ಮಾಪನ ಮಾದರಿ’ಯಲ್ಲಿ ಪರಿಚಯಿಸಿದೆ ಹಾಗೂ ಇದನ್ನು ಶಾಲೆಗಳು ಹಾಗೂ ಮನೆಗಳಲ್ಲಿ ಬಳಸಬಹುದಾಗಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com