
ಇತ್ತೀಚಿನ ದಿನಗಳಲ್ಲಿ ಅಂಧ ಧರ್ಮ ಪರಿಪಾಲನೆ ಹೆಚ್ಚುತ್ತಿದೆ. ವಿಶಾಲ ಮನೋಭಾವದ ಸ್ಥಿಮಿತ ಕಳೆದುಕೊಂಡು ತಾವೇ ಶ್ರೇಷ್ಠ ಎಂಬ ಪ್ರಜ್ಞೆಯಿಂದ ಹೊರ ಬಂದು ತತ್ವಜ್ಞಾನಿ, ಆಧ್ಯಾತ್ಮಿಕ ನಾಯಕ ಶ್ರೀ ಎಂ ಎಂದೇ ಖ್ಯಾತರಾಗಿರುವ ಮುಮ್ತಾಜ್ ಅಲಿ ಅವರ ದಾರಿ ನಿರಂತರವಾದದ್ದು...
ಮುಸ್ಲಿಂರ ಪವಿತ್ರ ಗ್ರಂಥ ಕುರಾನ್ ಹಾಗೂ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಎರಡನ್ನು ಪಠಿಸಿರುವ ಅವರು, ಆಧ್ಯಾತ್ಮಿಕ ಚಿಂತನೆಗಳನ್ನು ತಮ್ಮ ಜೀವನದ ಆಸು ಹೊಕ್ಕಾಗಿ ಮಾಡಿಕೊಂಡು ದಾರ್ಶನಿಕ ದಾರಿಯಲ್ಲಿ ನಡೆಯುತ್ತಿದ್ದಾರೆ.
ನಾನು ಮುಸ್ಲಿಂನಲ್ಲ, ಹಿಂದೂನಲ್ಲ ನಾನೊಬ್ಬ ಮನುಷ್ಯ ಎಂಬ ಮನೋಭಾವ ಅವರದ್ದು, ಇದೇ ಉದ್ದೇಶದೊಂದಿಗೆ ಜನತೆಯಲ್ಲಿ ಜಾಗತಿ ಮೂಡಿಸುವ ಕೆಲಸಕ್ಕಾಗಿ ಪಾದಯಾತ್ರೆ ಕೈಗೊಂಡಿರುವುದು ಎಲ್ಲರಿಗೂ ತಿಳಿದ ವಿಚಾರವೇ.. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಮಾಜ ಸುಧಾರಕ ಶ್ರೀ ಎಂ ಅವರು ಮಾನವ ಏಕತಾ ಮಿಷನ್ ಮೂಲಕ ಜನವರಿ 12 ರಿಂದ ಪಾದಯಾತ್ರೆ ಕೈ ಗೊಂಡಿದ್ದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 15ರಿಂದ 18 ತಿಂಗಳ ಕಾಲ ದೇಶದ 11 ರಾಜ್ಯಗಳಲ್ಲಿ ಸುಮಾರು 6,500 ಕಿ.ಮೀ. ದೂರ ಪಾದಯಾತ್ರೆ ಕೈಗೊಂಡಿದ್ದಾರೆ. ಅದೇ ರೀತಿ ದಿನಕ್ಕೆ 25 ಕಿ.ಮೀ ಕ್ರಮಿಸುವ ಮೂಲಕ ಇಲ್ಲಿಯವರೆಗೂ 2,500 ಕಿ. ಮೀ ಕ್ರಮಿಸಿದ್ದು, ಇದೀಗ ಪುಣೆ ತಲುಪಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮಾನವೀಯತೆಗಿಂತ ಯಾವುದೇ ಧರ್ಮ ದೊಡ್ಡದಲ್ಲ ಎಂದು ನಂಬಿರುವ ಅವರು ಜನತೆಯಲ್ಲಿ ಜಾಗತಿ ಮೂಡಿಸುವ ಉದ್ದೇಶ ಅವರದ್ದಾಗಿದೆ. ಅಲ್ಲದೆ ಅವರ ಪಾದಯಾತ್ರೆ ಕೊನೆಯಾಗುವ ಮುನ್ನ ಅಖಂಡ ಭಾರತವನ್ನು ಕಾಣುವ ಮಹಾದಾಸೆ ಅವರದ್ದಾಗಿದೆ.
ವಿವೇಕಾನಂದರ ಜನ್ಮ ಜಯಂತಿಯಂದು ಕನ್ಯಾಕುಮಾರಿಯ ಗಾಂಧಿ ಸ್ಮಾರಕದಿಂದ ಪಾದಯಾತ್ರೆ ಆರಂಭಿಸಿದ್ದರು. ಭಾರತದ ಹಲವಾರು ನಗರ, ಗ್ರಾಮಗಳನ್ನು ಸಂಚರಿಸಲಿದ್ದು ಜನತೆಯಲ್ಲಿ ಜಾಗತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಪಾದಯಾತ್ರೆ ಯಾವುದೇ ಒಂದು ಧರ್ಮ, ಕೋಮು, ಜಾತಿ, ಪಕ್ಷಕ್ಕೆ ಸೇರದ ಕಾರಣ ಎಲ್ಲ ವರ್ಗದ ಜನತೆ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ. ಪಾದಯಾತ್ರೆಯಲ್ಲಿ ಭಾಗವಹಿಸುವರಿಗೆ ಶಾಂತಿ ಮತ್ತು ಪ್ರಗತಿ, ಸಂತೋಷ ಮತ್ತು ಸ್ವಾಸ್ಥ್ಯ ಇವುಗಳನ್ನು ಹೊರತು ಬೇರೆ ಯಾವುದೇ ಬೇಡಿಕೆಗಳಿಲ್ಲ. ಒಟ್ಟಿನಲ್ಲಿ ಜಾಗತಿ ಮೂಡಿಸಿ ಸಮಾಜದಲ್ಲಿ ಶಾಂತಿ ಮೂಡಿಸುವುದು ಪಾದಯಾತ್ರೆಯ ಉದ್ದೇಶವಾಗಿದೆ.
ಶ್ರೀ ಎಂ ಅವರು ಪರಸ್ಪರ ಸೌಹಾರ್ದತೆ, ಸರ್ವರಿಗೂ ಸಮಾನತೆ, ಸುಸ್ಥಿರ ಜೀವನ, ಮಹಿಳಾ ಸಬಲೀಕರಣ, ಸಮುದಾಯ ಆರೋಗ್ಯ, ಶಿಕ್ಷಣ ಮತ್ತು ಯುವಜನ ಅಭಿವದ್ಧಿಯ ಬಗ್ಗೆ ಜನತೆಯಲ್ಲಿ ಜಾಗತಿ ಮೂಡಿಸುವ ದೃಷ್ಟಿಯಿಂದ ಮುನ್ನಡೆಯುತ್ತಿದ್ದಾರೆ.
Advertisement