ನೈರುತ್ಯ ಭಾಗಕ್ಕೆ ಚಲಿಸಿದ ಮೌಂಟ್ ಎವರೆಸ್ಟ್
ಬೀಜಿಂಗ್: ವಿಶ್ವದ ಅತೀ ಎತ್ತರ ಪರ್ವತ ಮೌಂಟ್ ಎವರೆಸ್ಟ್ 3 ಸೆಂಟಿ ಮೀಟರ್ ನಷ್ಟು ನೈರುತ್ಯ ದಿಕ್ಕಿಗೆ ಚಲಿಸಿದೆ. ಇದಕ್ಕೆ ಕಾರಣ ಕಳೆದ ಏಪ್ರಿಲ್ ತಿಂಗಳಲ್ಲಿ ನೇಪಾಳದಲ್ಲಿ ಸಂಭವಿಸಿದ ಭಾರೀ ಭೂಕಂಪ ಅಂತ ಚೀನಾದ ಮಾಧ್ಯಮ ವರದಿ ಮಾಡಿದೆ.
ರಿಕ್ಟರ್ ಮಾಪಕದಲ್ಲಿ 7.8 ಸಾಂದ್ರತೆಯ ಭೂಕಂಪ ಸಂಭವಿಸಿದ್ದು, ಈಶಾನ್ಯ ದಿಕ್ಕಿನಲ್ಲಿದ್ದ ಪರ್ವತ ನೈರುತ್ಯ ದಿಕ್ಕಿಗೆ ತಿರುಗಿದೆ ಎಂದು ಹೇಳಿದೆ. ಭೂಕಂಪ ಸಂಭವಿಸುವ ಮೊದಲು ಕಳೆದ ಒಂದು ದಶಕದಿಂದ ಪ್ರತಿವರ್ಷ 4 ಸೆಂಟಿ ಮೀ ಟರ್ ಗಳಂತೆ ಈಶಾನ್ಯ ದಿಕ್ಕಿಗೆ 40 ಸೆಂಟಿ ಮೀಟರ್ ನಷ್ಟು ಬೆಳೆದಿದೆ.
ಭೂಕಂಪ ಉಂಟಾದ ಸಂದರ್ಭದಲ್ಲಿ ಪರ್ವತ ಏರಲು ಹೊರಟಿದ್ದ 18 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ ಪರ್ವತದ ಮೂಲ ಶಿಬಿರವನ್ನು ಪರ್ವತಾರೋಹಿಗಳಿಗೆ ಬಿಡಲು ಸೂಚಿಸಲಾಗಿದೆ. ಚೀನಾ ಮತ್ತು ನೇಪಾಳ ರಾಷ್ಟ್ರಗಳು ಈ ವರ್ಷ ಪರ್ವತಾರೋಹಣವನ್ನು ರದ್ದುಪಡಿಸಿವೆ. ಮೌಂಟ್ ಎವರೆಸ್ಟ್ ಈ ಎರಡು ರಾಷ್ಟ್ರಗಳನ್ನು ವ್ಯಾಪಿಸಿದೆ.
ಕಳೆದ ಏಪ್ರಿಲ್ 25 ಹಾಗೂ ಮೇ 12ರಂದು ಸಂಭವಿಸಿದ ಭೂಕಂಪಗಳಲ್ಲಿ ನೇಪಾಳದಲ್ಲಿ 8 ಸಾವಿರದ 700ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ನಿರ್ಗತಿಕರಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ