ಜನಾಂಗೀಯ ದ್ವೇಷದ ಬಗ್ಗೆ ನಾಜಿ ಪ್ರಚಾರ 'ಬಹಳ ಪರಿಣಾಮಕಾರಿ'ಯಾಗಿತ್ತು: ಅಧ್ಯಯನ

ಜನಾಂಗೀಯ ದ್ವೇಷಕ್ಕಾಗಿ ಮಾಡಿದ ನಾಜಿ ಪ್ರಚಾರ ಮತ್ತು ಸಿದ್ಧಾಂತದ ತೀವ್ರ ಬೋಧನೆ 'ಬಹಳ ಪರಿಣಾಮಕಾರಿ' ಫಲಿತಾಂಶ ನೀಡಿತ್ತು ಎಂದು ಕ್ಯಾಲಫೋರ್ನಿಯಾ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್: ಜನಾಂಗೀಯ ದ್ವೇಷಕ್ಕಾಗಿ ಮಾಡಿದ ನಾಜಿ ಪ್ರಚಾರ ಮತ್ತು ಸಿದ್ಧಾಂತದ ತೀವ್ರ ಬೋಧನೆ 'ಬಹಳ ಪರಿಣಾಮಕಾರಿ' ಫಲಿತಾಂಶ ನೀಡಿತ್ತು ಎಂದು ಕ್ಯಾಲಫೋರ್ನಿಯಾ ವಿಶ್ವವಿದ್ಯಾಲಯ ಪ್ರಕಟಿಸಿರುವ ಅಧ್ಯಯನ ಹೇಳುತ್ತದೆ.

೧೯೩೦ ರಲ್ಲಿ ಹುಟ್ಟಿದ್ದ ೫೩೦೦ ಜರ್ಮನ್ ನಾಗರಿಕರೊಂದಿಗೆ ೧೯೯೬ ರಿಂದ ೨೦೦೬ ರ ನಡುವೆ ನಡೆಸಿದ ಸಂದರ್ಶನಗಳ ಅಧ್ಯಯನ ಮಾಡಿದ್ದು, ನಾಜಿ ಆಡಳಿತದಲ್ಲಿ ಬೆಳೆದವರು ನಂತರ ಹುಟ್ಟಿ ಬೆಳೆದವರಿಗಿಂತಲೂ ಹೆಚ್ಚು ಜ್ಯೂ ಧರ್ಮದ ವಿರೋಧಿಗಳಾಗಿದ್ದರು  (ಸೆಮಿಟಿಕ್ ವಿರೋಧಿ) ಎಂದು ಅಧ್ಯಯನ ಸಾಬೀತುಪಡಿಸುತ್ತದೆ ಎಂದು ಎಫೆ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

"೧೯೩೩ ರಿಂದ ೧೯೪೫ರ ಮಧ್ಯೆ ಜರ್ಮನಿಯ ಯುವ ಜನರು ಸೆಮಿಟಿಕ್ ವಿರೋಧಿ ಸಿದ್ಧಾಂತಕ್ಕೆ ಶಾಲೆಗಳಲ್ಲಿ, ರೇಡಿಯೋ ಮೂಲಕ, ಬರವಣಿಗೆ, ಸಿನೆಮಾಗಳ ಮೂಲಕ ಪ್ರಭಾವಿತರಾಗುತ್ತಿದ್ದರು" ಎಂದು ಅಧ್ಯಯನ ತಿಳಿಸಿದೆ.

ಸರ್ಕಾರದ ನೀತಿಗಳಿಂದ ನಾಗರಿಕರ ನಂಬಿಕೆಗಳನ್ನು ತಿದ್ದಬಹುದು ಎನ್ನುತ್ತದೆ ಅಧ್ಯಯನ.

ರೇಡಿಯೋ ಮತ್ತು ಸಿನೆಮಾಗಳಿಗಿಂದ ಶಿಕ್ಷಣ ಮತ್ತು ಯುವ ಸಂಘಟನೆಗಳು ಜರ್ಮನಿಯ ಸಿದ್ಧಾಂತದ ಮೇಲೆ ಆ ಸಮಯದಲ್ಲಿ ಹೆಚ್ಚು ಪರಿಣಾಮ ಬೀರಿವೆ ಎಂದು ಅಧ್ಯಯನ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com