ಜಪಾನ್ ಯುವತಿಯರಲ್ಲಿ ಕಾವು ಏರಿಸಿದ ಗೊರಿಲ್ಲಾ!

ಮನುಷ್ಯರಲ್ಲಿರುವುದು ಪ್ರಾಣಿಗಳ ಬಗ್ಗೆ ಕುತೂಹಲ, ಆಕರ್ಷಣೆ ಇರುವುದು ಸಹಜವೇ... ಇಂತ ಮನುಜ ಸಹಜ ಪ್ರೀತಿಯನ್ನು ಥಣಿಸುವ...
ಗೊರಿಲ್ಲಾ
ಗೊರಿಲ್ಲಾ

ಟೋಕಿಯೋ: ಮನುಷ್ಯರಲ್ಲಿರುವುದು ಪ್ರಾಣಿಗಳ ಬಗ್ಗೆ ಕುತೂಹಲ, ಆಕರ್ಷಣೆ ಇರುವುದು ಸಹಜವೇ... ಇಂತ ಮನುಜ ಸಹಜ ಪ್ರೀತಿಯನ್ನು ಥಣಿಸುವ ಸಲುವಾಗಿ ಎಲ್ಲಾ ದೇಶಗಳು ಮೃಗಾಲಯಗಳನ್ನು ತೆರೆದಿವೆ.

ವಿಶೇಷವೆನೆಂದರೇ ಜಪಾನಿನ ನಗೋಯಾದ ಹಿಗಾಶಿಯಾಮ ಪ್ರಾಣಿ ಸಂಗ್ರಹಾಲಯದಲ್ಲಿನ ಗೊರಿಲ್ಲಾವೊಂದು ಯುವತಿಯರನ್ನು ತನ್ನತ್ತ ಸೆಳೆಯುತ್ತಿದೆ. ಇದರಿಂದಾಗಿ ಈ ಗೊರಿಲ್ಲಾವನ್ನು ವೀಕ್ಷಿಸುವ ಹದಿ ಹರೆಯದ ಯುವತಿಯರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಶಬಾನಿ ಎಂಬ ಹೆಸರಿನ ಗಂಡು ಗೊರಿಲ್ಲಾ ತನ್ನ ಲುಕ್, ನಡೆದಾಟ, ಚೇಷ್ಟೆ ಮೂಲಕ ಯುವತಿಯರನ್ನು ಸೆಳೆಯುತ್ತಿದೆ. ಅದರ ಚೇಷ್ಟೆಗೆ ಯುವತಿಯರು ಮರುಳಾಗಿ ಹೋಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಹುಟ್ಟು ಬೆಳೆದ ಈ ಗೊರಿಲ್ಲಾವನ್ನು ಜಪಾನಿಗೆ ತರಲಾಗಿತ್ತು.

ಜಪಾನಿನ ಟ್ವಿಟ್ಟರ್ ಗಳಲ್ಲಿ ಈ ಗಂಡು ಗೊರಿಲ್ಲಾ ಫೋಟೋಗಳು ಮೆರೆದಾಡುತ್ತಿವೆ. ಜಪಾನ್ ಯುವತಿಯರು ತಮ್ಮ ಟ್ವಿಟ್ಟರ್ ಕೌಂಟಿನಲ್ಲಿ ಗೊರಿಲ್ಲಾ ಫೋಟೋ ಹಾಕಿಕೊಂಡು ತಮ್ಮ ಪ್ರೇಮ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com