ನಿರ್ದೇಶಕ ಮಂಸೋರೆ ಅಮ್ಮನ ಪ್ರೀತಿಯ 'ಹರಿವು'

ಪ್ರಶಸ್ತಿ ಗೆಲ್ಲುವ ಮೂಲಕ ಮಗ ಸಾಧನೆ ಮಾಡಿದ್ದಾನೆ. ಅವನು ಇನ್ನಷ್ಟು ಮುಂದೆ ಸಾಗಬೇಕು, ಇನ್ನೂ ಬೆಳೆಯಬೇಕು. ನನ್ನ ಮನಸ್ಸು ಅವನ ಯಶಸ್ಸಿಗೆ....
ಅಮ್ಮನ ಜತೆ 'ಹರಿವು' ಚಿತ್ರದ ನಿರ್ದೇಶಕ ಮಂಸೋರೆ
ಅಮ್ಮನ ಜತೆ 'ಹರಿವು' ಚಿತ್ರದ ನಿರ್ದೇಶಕ ಮಂಸೋರೆ

ಅಮ್ಮ ಅಂದರೆ ಅವಳು ಎಲ್ಲವನ್ನೂ ಅರ್ಥ ಮಾಡಿಕೊಂಡವಳು. ಅವಳು ದೇವರ ಇನ್ನೊಂದು ರೂಪ. ಮನಸ್ಸಲ್ಲಿರುವ ಮಾತುಗಳನ್ನೂ ಅರ್ಥೈಸಿಕೊಂಡು ಮಕ್ಕಳ ಕಷ್ಟ ಸುಖದಲ್ಲಿ ಅವರ ಜತೆಯಾಗಿ ನಿಲ್ಲುವ ಹೆಣ್ಣು ಆಕೆ. ಪ್ರತಿಯೊಬ್ಬ ಸಾಧಕನ ಹಿಂದೆ ಅವನ ಅಮ್ಮನ ಬೆಂಬಲ, ತ್ಯಾಗ ಇದ್ದೇ ಇರುತ್ತದೆ. ಇವತ್ತು ಅಮ್ಮಂದಿರ ದಿನ. ಈ ಪ್ರಯಕ್ತ 62ನೇ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾದ 'ಹರಿವು' ಚಿತ್ರದ ನಿರ್ದೇಶಕ ಮಂಜುನಾಥ್ ಎಸ್ (ಮಂಸೋರೆ) ಅವರ ಅಮ್ಮ ವೆಂಕಟಲಕ್ಷ್ಮಮ್ಮ ಅವರನ್ನು ಕನ್ನಡಪ್ರಭ ಡಾಟ್ ಕಾಮ್ ಗಾಗಿ ಮಾತನಾಡಿಸಿದಾಗ...

ಮಗನ ಸಾಧನೆ ಬಗ್ಗೆ ಹೆಮ್ಮೆ ಪಡುವ ಈ ಕ್ಷಣದಲ್ಲಿ ಹಳೆಯದೆಲ್ಲಾ ಕಾಡುತ್ತಿದೆಯೇ?
ತುಂಬಾ ಸಂತೋಷ ಆಗುತ್ತಿದೆ. ಅವನ ಅಪ್ಪ ಇದ್ದಿದ್ದರೆ  ತುಂಬಾನೇ ಸಂತೋಷ ಪಡುತ್ತಿದ್ದರು. ಅವರ ಅನುಪಸ್ಥಿತಿ ಕಾಡುತ್ತಿದೆ. ಪ್ರಶಸ್ತಿ ಗೆಲ್ಲುವ ಮೂಲಕ ಮಗ ಸಾಧನೆ ಮಾಡಿದ್ದಾನೆ. ಅವನು ಇನ್ನಷ್ಟು ಮುಂದೆ ಸಾಗಬೇಕು, ಇನ್ನೂ ಬೆಳೆಯಬೇಕು. ನನ್ನ ಮನಸ್ಸು ಅವನ ಯಶಸ್ಸಿಗೆ ಹಾರೈಸುತ್ತಿದೆ.

ಸಿನಿಮಾ ಮಾಡುತ್ತೇನೆ ಎಂದಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು?

ಸಿನಿಮಾ ಮಾಡ್ತೀನಿ ಅಂದಾಗ ಭಯ ಆಗಿತ್ತು ನಿಜ, ಆದರೆ ನನಗೆ ಅವನ ಮೇಲೆ ನಂಬಿಕೆ ಇದೆ.  ಅವನು ಯಾವುದಾದಾರೂ ಕೆಲಸಕ್ಕೆ ಕೈ ಹಾಕುತ್ತಾನೆ ಎಂದಾದರೆ ಅದನ್ನು ಯಶಸ್ವಿಯಾಗಿ ಪೂರೈಸುತ್ತಾನೆ ಎಂಬ ಭರವಸೆ ನಮ್ಮಲ್ಲಿತ್ತು. ನಾವು ಅವನಿಗೆ ಬೆಂಬಲ ನೀಡಿದರೆ ಅವನಿಗೆ ಮುಂದೆ ಹೋಗಲು ಸಾಧ್ಯ. ಅವನಿಷ್ಟದ ಕೆಲಸಗಳಿಗೆ ಸದಾ ನಮ್ಮ ಬೆಂಬಲವಿರುತ್ತದೆ.

ಸಿನಿಮಾ ನಿರ್ಮಿಸುವಾಗ ಅಡಚಣೆಯಾಗಿ ಅರ್ಧದಲ್ಲಿ ನಿಂತು ಹೋಯಿತು. ಆ ವೇಳೆ ನೀವು ನಿಮ್ಮ ಮಗನಿಗೆ ಹೇಗೆ ಸಹಾಯಕ್ಕೆ ನಿಂತಿರಿ?

ಆ ವೇಳೆ ತುಂಬಾನೇ ಬೇಜಾರಾಗಿತ್ತು. ಆದರೆ ನಾವು ಯಾವುದಕ್ಕೂ ಧೃತಿಗೆಡಬಾರದು. ಇಂದಲ್ಲ ನಾಳೆ ನಿನಗೆ ಒಳ್ಳೆಯದಾಗುತ್ತದೆ. ಅಡೆತಡೆಗಳೆಲ್ಲ ದೂರವಾಗುವ ಸಮಯ ಬರಲಿದೆ. ನೀನು ಸಿನಿಮಾ ಮುಂದುವರಿಸು, ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದೆ.

ಕಷ್ಟದ ಕ್ಷಣಗಳಲ್ಲಿ ಅವನಿಗೆ ಹೇಗೆ ಧೈರ್ಯ ತುಂಬಿದಿರಿ?

ಆ ಹೊತ್ತಲ್ಲಿ ಅವನಿಗೆ ಎಲ್ಲರ ಬೆಂಬಲದ ಅಗತ್ಯವಿತ್ತು. ನೀನು ಹೀಗೆ ಬೇಜಾರು ಮಾಡ್ಕೋಬೇಡ. ಜೀವನದಲ್ಲಿ ಕಷ್ಟ ಸುಖ ಇದ್ದೇ ಇರುತ್ತದೆ. ನಿನ್ನ ಪರಿಶ್ರಮಕ್ಕೆ ಯಾವತ್ತಾದರೂ ಒಂದು ದಿನ ಗೆಲುವು ಸಿಕ್ಕಿಯೇ ಸಿಗುತ್ತದೆ ಎಂದು ಧೈರ್ಯ ಹೇಳಿದೆ.  ನಮ್ಮ ಬೆಂಬಲವಿದ್ದರೆ ಅವನು ಏನು ಬೇಕಾದರೂ ಸಾಧಿಸುತ್ತಾನೆ, ನಾವು ಪೂರ್ಣ ಬೆಂಬಲ ನೀಡಿದೆವು. ಅವನಲ್ಲಿ ಆತ್ಮ ವಿಶ್ವಾಸ ತುಂಬುವಂತೆ ಮಾಡಿದೆವು. ನೀವು ನನ್ನ ಜತೆಗಿದ್ದರೆ ಸಾಕು, ನಾನು ಮುಂದೆ ಹೋಗುತ್ತೇನೆ ಎಂದು ಹೇಳುತ್ತಿದ್ದ, ನಾನು ಸಾಥ್ ಕೊಟ್ಟೆ.

  • ನಿಮ್ಮ ಮಗನಿಗೆ ಈಗ ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ಈ ಸಾಧನೆಯ ಬಗ್ಗೆ ನೀವೇನಂತೀರಿ?
  • ಬೆಂಗಳೂರಲ್ಲಿ ದುಡಿಯುವ ಮಗ, ಊರಲ್ಲಿ ನೀವು... ಹೀಗಿರುವಾಗ?
ಇಷ್ಟು ಹೇಳಿದ ಮೇಲೆ ಇನ್ನುಳಿದ ಮಾತುಗಳನ್ನು ಹೇಳಿದ್ದು ಮಂಸೋರೆ ಅವರ ಅಕ್ಕ ...
ಮತ್ತೆ ಮಂಸೋರೆ ಅಮ್ಮ ಮಾತು ಮುಂದುವರಿಸಿದರು...
  • ಅವನು ನಿರ್ದೇಶಕ ಆಗಬೇಕೆಂಬುದು ನಿಮ್ಮದೂ ಕನಸಾಗಿತ್ತಾ? ಇಲ್ಲ ಅಂದರೆ ನಿಮ್ಮ ಕನಸು ಏನಿತ್ತು?
  • ಕಳೆದ ವಾರ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ದೆಹಲಿಗೆ ಹೋಗಿದ್ದೀರಿ. ಆ ಅನುಭವ ಹೇಗಿತ್ತು?
  • ಸದ್ಯದ ದೈನಂದಿನ ಬದುಕು ಹೇಗಿದೆ?
ಸಂದರ್ಶನ: ರಶ್ಮಿ ಕಾಸರಗೋಡು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com