ರಾಂಚಿಯಲ್ಲಿ 'ಯಮ' ಟ್ರಾಫಿಕ್ ಪೊಲೀಸ್!

ಜಾರ್ಖಂಡ್ ನ ರಾಜಧಾನಿ ರಾಂಚಿಯ ಟ್ರಾಫಿಕ್ ಪೊಲೀಸ್ರು ಮೃತ್ಯುವಿನ ಬ್ರಾಂಡ್ ಅಂಬಾಸಿಡರ್ ಆಗಿ ಯಮ ದೇವರ ವೇಷ ಹಾಕಿಕೊಂಡು ನಗರವಿಡೀ ಸುತ್ತಾಡಿ ಜನಕ್ಕೆ ಟ್ರಾಫಿಕ್ ನಿಯಮದ ಬಗ್ಗೆ ಸಂದೇಶ ನೀಡುತ್ತಿದ್ದಾರೆ...
ಯಮರಾಜನ ವೇಷ ಹಾಕಿಕೊಂಡು ಚಲನ್ ಹಿಡಿದುಕೊಂಡು ಓಡಾಡುತ್ತಿರುವ  ಟ್ರಾಫಿಕ್ ಪೊಲೀಸರು
ಯಮರಾಜನ ವೇಷ ಹಾಕಿಕೊಂಡು ಚಲನ್ ಹಿಡಿದುಕೊಂಡು ಓಡಾಡುತ್ತಿರುವ ಟ್ರಾಫಿಕ್ ಪೊಲೀಸರು

ಅತಿ ವೇಗದ ಚಾಲನೆ; ಮೃತ್ಯುವಿಗೆ ಆಹ್ವಾನ, 'Alert today – Alive tomorrow', 'Stop accidents before they stop you' ಇಂತಹ ಕ್ಯಾಚಿ ಸ್ಲೋಗನ್ ಗಳನ್ನು ಟ್ರಾಫಿಕ್ ಪೊಲೀಸರು  ರಸ್ತೆಗಳ ಬದಿ ಅಲ್ಲಲ್ಲಿ ನೇತು ಹಾಕಿರುತ್ತಾರೆ.

ಆದರೆ ಅದನ್ನು ಸುಮ್ಮನೆ ಓದಿಬಿಟ್ಟು ಮುಂದೆ ಹೋಗುವವರೇ ಹೆಚ್ಚು. ಟ್ರಾಫಿಕ್ ನಿಯಮವನ್ನು  ಪಾಲಿಸುವವರು ಕಡಿಮೆ. 'ಈ ಜನಕ್ಕೆ ಎಷ್ಟು ಹೇಳಿದ್ರೂ, ದಂಡ ಹಾಕಿದ್ರೂ ಬುದ್ಧಿನೇ ಬರಲ್ಲ, ಇನ್ಯಾವ ಶೈಲಿಯಲ್ಲಿ ಹೇಳ್ಬೇಕು, ದಿನಾ ಒಂದಲ್ಲ ಒಂದು ಕಡೆ ಆಕ್ಸಿಡೆಂಟ್ಸ್ ಆಗ್ತಾನೇ ಇರ್ತವೆ ಅಂತ  ಟ್ರಾಫಿಕ್ ಪೊಲೀಸರು  ಬೈತಾನೇ ಇರ್ತಾರೆ.

ಜಾರ್ಖಂಡ್ ನ ರಾಜಧಾನಿ ರಾಂಚಿಯ ಟ್ರಾಫಿಕ್ ಪೊಲೀಸ್ರು  ಬೇರೆ ಬೇರೆ ಶೈಲಿಯಲ್ಲಿ ಜನಕ್ಕೆ ಅರ್ಥವಾಗುವ ರೀತಿಯಲ್ಲಿ ಹೇಳಿ ನೋಡಿದ್ರು. ಗಾಂಧಿಗಿರಿ ಸ್ಟೈಲಲ್ಲಿ ಹೂ ಕೊಟ್ಟು ಪ್ರೀತಿಯಿಂದ ಹೇಳಿ ನೋಡಿದ್ರು, ಆದ್ರೆ ರಸ್ತೆ ನಿಯಮವನ್ನು ಉಲ್ಲಂಘಿಸುವವರ ಸಂಖ್ಯೆ ಕಡಿಮೆಯೇನು ಆಗ್ಲಿಲ್ಲ.

ಇನ್ನು ಈ ರೀತಿಯಾದ್ರೂ ತೋರ್ಸಿದ್ರೆ ಜನಕ್ಕೆ ಅರ್ಥ ಆಗಿ ಬದಲಾಗಬಹುದೇನೋ ಅಂತ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದು ಮೃತ್ಯುವಿನ ಬ್ರಾಂಡ್ ಅಂಬಾಸಿಡರ್ ಆಗಿ ಯಮ ದೇವರ ವೇಷ ಹಾಕಿಕೊಂಡು ನಗರವಿಡೀ ಸುತ್ತಾಡಿ ಜನಕ್ಕೆ ಸಂದೇಶ ನೀಡುವುದು. ಇದು ಸ್ವಲ್ಪ ಮಟ್ಟಿಗಾದರೂ ಪರಿಣಾಮ ಉಂಟು ಮಾಡಬಹುದು ಎನ್ನುತ್ತಾರೆ ರಾಂಚಿ ಟ್ರಾಫಿಕ್ ಪೊಲೀಸ್ ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆನಂದ್ ಜ್ಯೋತಿ ಮಿಂಜ್ . ಈಗ ರಾಂಚಿಯ ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸರು ಯಮನ ವೇಷ ಹಾಕಿಕೊಂಡು, ಕೈಯಲ್ಲಿ ಟ್ರಾಫಿಕ್ ಉಲ್ಲಂಘನೆ ಚಲನ್ ಹಿಡ್ಕೊಂಡು ಓಡಾಡ್ತಿದ್ದಾರೆ.


ಯಮರಾಜನ ಈ ಐಡಿಯಾ ವರ್ಕೌಟ್ ಆದರೆ ಬೇರೆ ರಾಜ್ಯಗಳಲ್ಲಿಯೂ ಇದನ್ನು ಫಾಲೋ ಮಾಡ್ಬಹುದು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com