ಮೀಸೆ ಮೇಣದ ರೂಪದಲ್ಲೆ ಮತ್ತೆ ಬಂದ ವೀರಪ್ಪನ್

ವೀರಪ್ಪನ್ ಹತನಾಗಿ ಹತ್ತು ವರ್ಷ ಕಳೆದ ನಂತರ ರಾಮ್ ಗೋಪಾಲ್ ವರ್ಮಾ 'ಕಿಲ್ಲಿಂಗ್ ವೀರಪ್ಪನ್' ಹೆಸರಿನಲ್ಲಿ ಶಿವರಾಜ್ ಕುಮಾರ್ ಜೊತೆ ಸಿನೆಮಾ ಮಾಡುತ್ತಿರುವುದೆಲ್ಲ
ವೀರಪ್ಪನ್ ಮೀಸೆ ಮೇಣ
ವೀರಪ್ಪನ್ ಮೀಸೆ ಮೇಣ

ವೀರಪ್ಪನ್ ಹತನಾಗಿ ಹತ್ತು ವರ್ಷ ಕಳೆದ ನಂತರ ರಾಮ್ ಗೋಪಾಲ್ ವರ್ಮಾ 'ಕಿಲ್ಲಿಂಗ್ ವೀರಪ್ಪನ್' ಹೆಸರಿನಲ್ಲಿ ಶಿವರಾಜ್ ಕುಮಾರ್ ಜೊತೆ ಸಿನೆಮಾ ಮಾಡುತ್ತಿರುವುದೆಲ್ಲ ಹಿಂದೆ ಸರಿದಿದ್ದು ಈಗ ಮತ್ತೆ ವೀರಪ್ಪನ್ ಮೀಸೆ ವ್ಯಾಕ್ಸ್(ಮೇಣ) ರೂಪದಲ್ಲಿ ಬಂದೆರಗಿದ್ದಾನೆ.

ದಂತಚೋರ ಹಾಗೂ ಹಲವಾರು ಪೊಲೀಸರನ್ನು ಹತ್ಯೆಗೈದ ವೀರಪ್ಪನ್ ನನ್ನು ೧೦ ವರ್ಷದ ಹಿಂದೆ ವಿಶೇಷ ಪೊಲೀಸ್ ಪಡೆ ಹತ್ಯೆಗೈದಿತ್ತು. ಈಗ ಸೌಂದರ್ಯವರ್ಧಕ ಸಂಸ್ಥೆಯೊಂದ ಮೀಸೆ ವ್ಯಾಕ್ಸ್ ಡಬ್ಬಿಗಳ ಮೇಲೆ ವೀರಪ್ಪನ್ ಚಿತ್ರ ಬಳಸಿ ವೀರಪ್ಪನ್ ವ್ಯಾಕ್ಸ್ ಎಂಬ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದೆ.

ಈ ಸಂಸ್ಥೆಯ ಅಂತರ್ಜಾಲ ತಾಣ ಈ ಉತ್ಪನ್ನವನ್ನು ೧೫.೦೫ ಡಾಲರ್ ಗಳಿಗೆ ಮಾರಾಟ ಮಾಡುತ್ತಿದೆ. ಹಲವು ವರ್ಷಗಳ ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ, ಅಪಾರ ವನ್ಯಸಂಪತ್ತನ್ನು ಹಾಳುಗೆಡವಿದ್ದ ವೀರಪ್ಪನ್ ನನ್ನು ಈ ಸಂಸ್ಥೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಹಲವರ ವಿರೋಧಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಪುರುಷರು ಉದ್ದದ ಮೀಸೆಯ ವಿನ್ಯಾಸಕ್ಕೆ ಈ 'ಮಸ್ಟಾಶ್ ವ್ಯಾಕ್ಸ್' ಅನ್ನು ಬಲಸಲಾಗುತ್ತದೆ.  



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com