ಬರ್ಮಾದ ಕ್ರಾಂತಿಕಾರಿ ನಾಯಕಿ ಆಂಗ್‍ ಸಾನ್ ಸೂಕಿ

ತಮ್ಮ ವೈಯಕ್ತಿಕ ಬದುಕಿನ ಸುಖವನ್ನು ಬದಿಗಿತ್ತು ದೇಶದ ಸ್ವಾತಂತ್ರ್ಯಕ್ಕಾಗಿ, ಸಾಮಾನ್ಯ ಜನರ ಹಕ್ಕುಗಳಿಗಾಗಿ ಸತತ ಹೋರಾಟ ನಡೆಸಿದ ಮಾದರಿ ಮಹಿಳೆ ಆಂಗ್ ಸಾನ್ ಸೂಕಿ.
ಆಂಗ್‍ ಸಾನ್ ಸೂಕಿ
ಆಂಗ್‍ ಸಾನ್ ಸೂಕಿ
Updated on

ಆಂಗ್‍ ಸಾನ್ ಸೂಕಿ. ತಮ್ಮ ವೈಯಕ್ತಿಕ ಬದುಕಿನ ಸುಖವನ್ನು ಬದಿಗಿತ್ತು ದೇಶದ ಸ್ವಾತಂತ್ರ್ಯಕ್ಕಾಗಿ, ಸಾಮಾನ್ಯ ಜನರ ಹಕ್ಕುಗಳಿಗಾಗಿ ಸತತ ಹೋರಾಟ ನಡೆಸಿದ ಮಾದರಿ ಮಹಿಳೆ ಆಂಗ್ ಸಾನ್ ಸೂಕಿ. ಒಬ್ಬ ಮಹಿಳೆಯ ದಿಟ್ಟತನದ ಸತತ ಹೋರಾಟ, ಶ್ರದ್ಧೆ, ಧೈರ್ಯ, ಶಿಸ್ತುಬದ್ಧ ಜೀವನದಿಂದ ಅಸಾಮಾನ್ಯವಾದದ್ದನ್ನು ಸಾಧಿಸಬಹುದು ಎಂಬುದಕ್ಕೆ ಆಂಗ್ ಸಾನ್ ಸೂಕಿ ಉತ್ತಮ ಉದಾಹರಣೆ.

ಈಗಿನ ಮ್ಯಾನ್ಮಾರ್ (ಹಿಂದಿನ ಬರ್ಮಾ ದೇಶ)ನಲ್ಲಿ ಕಳೆದ ಭಾನುವಾರ ಸಂಸತ್ತಿಗೆ ಉಪಚುನಾವಣೆ ನಡೆಯಿತು. ಅದರಲ್ಲಿ ಆಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷ, ಸ್ಪರ್ಧಿಸಿದ್ದ 44 ಸ್ಥಾನಗಳಲ್ಲಿ 43 ಸ್ಥಾನಗಳನ್ನು ಗೆದ್ದುಕೊಂಡು ದಿಗ್ವಿಜಯ ಸಾಧಿಸಿದೆ.

ಭಾರತದಲ್ಲಿ ಸೂಕಿ ಅವರಿಗೆ `ಫ್ರೆಂಡ್ಸ್ ಆಫ್ ಬರ್ಮಾ ಸಂಘಟನೆಯ ಸಂಸ್ಥಾಪಕಿ ಮಾಲವಿಕಾ ಕಾರ್ಲೇಕರ್ ಸಹಪಾಠಿ ಹಾಗೂ ಸ್ನೇಹತೆ. ಅವರು ಹೇಳುವ ಪ್ರಕಾರ, ಸೂಕಿ ಅತ್ಯಂತ ಶಿಸ್ತುಬದ್ಧ ವ್ಯಕ್ತಿ. ಅವರ ನಡೆನುಡಿ, ಮಾತುಗಾರಿಕೆ ಬಗ್ಗೆ ಹೇಳುವುದೇ ಬೇಡ. ಶೈಕ್ಷಣಿಕವಾಗಿಯೂ ಅವರು ತೀಕ್ಷ್ಣಮತಿಯವರಾಗಿದ್ದರು ಎನ್ನುತ್ತಾರೆ.

ಹಿನ್ನಲೆ: ಸೂಕಿ ತಂದೆ ಆಂಗ್ ಸಾನ್ ಬರ್ಮಾ ದೇಶದ ಪ್ರಮುಖ ರಾಜಕೀಯ ವ್ಯಕ್ತಿ. 1947ರಲ್ಲಿ ಬರ್ಮಾವನ್ನು ಬ್ರಿಟಿಷರಿಂದ ಸ್ವತಂತ್ರಮುಕ್ತಗೊಳಿಸಲು ಒಪ್ಪಂದ ಮಾಡಿಕೊಂಡಿದ್ದರು. ಇದುವೇ ಅವರಿಗೆ ಮುಳುವಾಯಿತು. ವಿರೋಧಿ ಪಕ್ಷವಾದ ಬರ್ಮಾದ ಮಿಲಿಟರಿ ಆಡಳಿತ ಪಕ್ಷದವರು ಇವರನ್ನು ಹತ್ಯೆಗೈದರು. ಸೂಕಿಯ ತಾಯಿ ಖಿನ್ಕಿ  ಕೂಡ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದು, ಬರ್ಮಾದಲ್ಲಿ ಮಹಿಳಾ ರಾಜಕೀಯದ ಮುಖಂಡರಾಗಿದ್ದರು.
ಅಂಗ್ಸಾದನ್ ದಂಪತಿಗೆ ಒಟ್ಟು ಮೂವರು ಮಕ್ಕಳು. ಅವರಲ್ಲಿ ಹಿರಿಯ ಮಗ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದರೆ ಇನ್ನೊಬ್ಬ ಪುತ್ರ ದೊಡ್ಡವನಾದ ನಂತರ ಅಮೆರಿಕಕ್ಕೆ ಹೋಗಿ ಅಲ್ಲಿಯ ಪೌರನಾದನು. ಒಬ್ಬಳೇ ಮಗಳಾದ ಆಂಗ್ಸಾನನ್ ಸೂಕಿ ಪೋಷಕರ ಆಶ್ರಯದಲ್ಲಿ ಬೆಳೆದು ಅವರಂತೆಯೇ ನಡೆ-ನುಡಿ ಬೆಳೆಸಿಕೊಂಡಳು. ಮನೆಯಲ್ಲಿ ರಾಜಕೀಯದ ವಾತಾವರಣ, ಹೋರಾಟದ ಕಿಚ್ಚು ಹೆತ್ತವರಲ್ಲಿದ್ದುದರಿಂದ ಮಗಳಿಗೂ ಅದೇ ಹರಿದುಬಂದಿತು. ತಂದೆ ಸತ್ತಾಗ ಆಂಗ್ ಸಾನ್ ಸೂಕಿಗೆ ಕೇವಲ ಎರಡು ವರ್ಷ ವಯಸ್ಸು.
ಸೂಕಿಯ ತಾಯಿ ಖಿನ್ಕಿಂ ಬರ್ಮಾ ಸರ್ಕಾರದಲ್ಲಿ ಒಬ್ಬ ಪ್ರಮುಖ ರಾಜಕೀಯ ಮುಖಂಡರಾಗಿದ್ದರು. ಪತಿಯನ್ನು ಹತ್ಯೆಗೈದ ರಾಜಕೀಯ ಮುಖಂಡರ ವಿರುದ್ಧ ಮಗಳಿಗೆ ಸೇಡಿನ ಭಾವ ಉಂಟಾಗದಂತೆ ಅವರು ತಮ್ಮ ಮಗಳನ್ನು ಸಾಕಿದ್ದರು. ಆಂಗ್ ಸಾನ್ ಸೂಕಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸವನ್ನು ರಂಗೂನ್ನ. ಮೆತಾಡಿಸ್ಟ್ ಶಾಲೆಯಲ್ಲಿ ಓದಿದರು. ತಾಯಿ ಖಿನ್ಕೀವ 1960ರಲ್ಲಿ ಭಾರತ ಹಾಗೂ ನೇಪಾಳಕ್ಕೆ ಬರ್ಮಾದ ರಾಯಭಾರಿಯಾಗಿ ನೇಮಕಗೊಂಡರು. ತಾಯಿಯ ಜೊತೆ ದೆಹಲಿಗೆ ಬಂದ ಸೂಕಿ ನವದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ, ನಂತರ ಆಕ್ಸ್ ಫರ್ಡ್ ನ ಸೇಂಟ್ ಹೇಗ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಮುಗಿಸಿದರು. ನಂತರ ಮೂರು ವರ್ಷಗಳ ಕಾಲ ಅಮೆರಿಕದಲ್ಲಿ ಕುಟುಂಬ ಸ್ನೇಹಿತರೊಂದಿಗೆ ನೆಲೆಸಿ ದೇಶದ ಬಜೆಟ್ ಮಂಡಿಸುವ ಕುರಿತು ಕಲಿತುಕೊಂಡರು. ಅಲ್ಲಿ ಅವರಿಗೆ ಡಾ. ಮೈಕೆಲ್ ಆರಿಸ್ ಎಂಬ ವ್ಯಕ್ತಿಯನ್ನು ಪರಿಚಯವಾಗಿ ಸ್ನೇಹ ಬೆಳೆದು 1972ರಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳು.

ಮುಂದೆ ಸೂಕಿಯವರು ಲಂಡನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓರಿಯಂಟಲ್ ಸ್ಟಡೀಸ್ನರಲ್ಲಿ ಪಿಎಚ್ಡಿವ ಮಾಡಿಕೊಂಡರು. 1990ರಲ್ಲಿ ಆನರರಿ ಫೆಲ್ಲೋ ಆಗಿ ಆಯ್ಕೆಯಾದರು. ಎರಡು ವರ್ಷ ಶಿಮ್ಲಾದಲ್ಲಿ ಇಂಡಿಯನ್ ಇನ್ಸ್ಟಿ9ಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ನಿಲ್ಲಿ ಎರಡು ವರ್ಷ ಸಂಶೋಧನೆ ನಡೆಸಿದರು. ಬರ್ಮಾ ಸರ್ಕಾರದಲ್ಲಿಯೂ ಕೆಲಸ ಮಾಡಿದರು.
ಈ ಸಮಯದಲ್ಲಿ ಬರ್ಮಾದಲ್ಲಿ ಮಿಲಿಟರಿ ಸರ್ವಾಧಿಕಾರವಾಗಿತ್ತು. ಜನರನ್ನು ಗುಲಾಮರಂತೆ ನೋಡಿಕೊಳ್ಳಲಾಗುತ್ತಿತ್ತು. ಜನರಿಗೆ ಯಾವುದೇ ಹಕ್ಕು, ಸ್ವಾತಂತ್ರ್ಯಗಳಿರಲಿಲ್ಲ. ಮಿಲಿಟರಿ ಆಡಳಿತ ದೇಶದ ಜನರನ್ನು ಹತೋಟಿಯಲ್ಲಿ ಇಟ್ಟುಕೊಳ್ಳುತ್ತಿತ್ತು. ಆಂಗ್ ಸಾನ್ ಅವರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಪಕ್ಷ ಇದನ್ನು ಮೊದಲಿನಿಂದಲೇ ಖಂಡಿಸಿಕೊಂಡು ಬರುತ್ತಿತ್ತು. ದೇಶದಲ್ಲಿ ಜನರಿಗೆ ತಮ್ಮ ಹಕ್ಕು, ಸ್ವಾತಂತ್ರ್ಯ, ಕರ್ತವ್ಯಗಳನ್ನು ಪ್ರತಿಪಾದಿಸಲು ಅವಕಾಶವಿರಬೇಕೆಂಬ ಧ್ಯೇಯವನ್ನು ತಂದೆ-ತಾಯಿಯಿಂದ ಆಂಗ್ ಸಾನ್ ಸೂಕಿ ಕೂಡ ಮುಂದುವರಿಸಿಕೊಂಡು ಬಂದಿದ್ದರು. ತಮ್ಮ ನೇತೃತ್ವದಲ್ಲಿ ಹೋರಾಟವನ್ನು ಮುಂದುವರಿಸಿದರು.

ಮದುವೆಯಾದ ಬಳಿಕ ಲಂಡನ್ನರಲ್ಲಿ ನೆಲೆಸಿದ್ದ ಆಂಗ್ಸಾ ನ್ ಸೂಕಿ 1988ರಲ್ಲಿ ತನ್ನ ತಾಯಿ ಅನಾರೋಗ್ಯಕ್ಕೀಡಾದಾಗ ಅವರ ಆರೈಕೆಗೆಂದು ಬರ್ಮಾಕ್ಕೆ ಹಿಂತಿರುಗಿದರು. ಸೂಕಿಯವರ ಪತಿಗೆ ಬರ್ಮಾಕ್ಕೆ ಬರಲು ಸರ್ಕಾರ ಅವಕಾಶ ನೀಡಲಿಲ್ಲ. 1995ರಲ್ಲಿ ಒಂದು ಬಾರಿ ಕ್ರಿಸ್ಮವಸ್ ಸಂದರ್ಭದಲ್ಲಿ ಪತ್ನಿಯನ್ನು ಕಾಣಲೆಂದು ಬರ್ಮಾದ ರಂಗೂನ್ಗೆಿ ಬಂದಿದ್ದ ಮೈಕೆಲ್ ಆರಿಸ್ ನಂತರ ಬಂದಿರಲಿಲ್ಲ. ಅದೇ ಅವರ ಕೊನೆಯ ಭೇಟಿ. 1997ರಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸಾವಿಗೀಡಾದರು. ವಿಶ್ವಸಂಸ್ಥೆಯ ಆಗಿನ ಪ್ರಧಾನ ಕಾರ್ಯದರ್ಶಿ ಕಾಫಿ ಅನ್ನನ್, ಪೋಪ್ ಜಾನ್ಪಾಡಲ್ರಂರಥವರು ಕೇಳಿಕೊಂಡರೂ ಬರ್ಮಾ ಸರ್ಕಾರ ಮೈಕೆಲ್ಗೆಅ ವೀಸಾ ನಿರಾಕರಿಸಿತ್ತು. ಈ ಹೊತ್ತಿಗೆ ತಾಯಿಯ ಆರೈಕೆಗೆಂದು ಬಂದಿದ್ದ ಸೂಕಿ ದೇಶದ ಪರಿಸ್ಥಿತಿ ಕಂಡು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. 1989ರಿಂದ ಅವರನ್ನು ಗೃಹಬಂಧನದಲ್ಲಿರಿಸಲಾಯಿತು. 1995ರಲ್ಲಿ ಒಂದು ಬಾರಿ ಪತಿಯನ್ನು ನೋಡಿ ಬರಲೆಂದು ಬಿಡುಗಡೆ ಮಾಡಿದರೂ ಮತ್ತೆ ಬರ್ಮಾಕ್ಕೆ ಪ್ರವೇಶಿಸಲು ಮಿಲಿಟರಿ ಸರ್ಕಾರ ಬಿಡುತ್ತಿರಲಿಲ್ಲವಾದ್ದರಿಂದ ಪತಿಯನ್ನು ಭೇಟಿ ಮಾಡಲು ಹೋಗಲೇ ಇಲ್ಲ. ಆ ಸಮಯದಲ್ಲಿ ಅವರಿಗೆ ತಮ್ಮ ವೈಯಕ್ತಿಕ ಸುಖ-ಸಂತೋಷಕ್ಕಿಂತ ದೇಶದ ಜನರ ಸ್ವಾತಂತ್ರ್ಯ ಮುಖ್ಯವಾಗಿತ್ತು.

ಪತಿಯ ನಿಧನ ನಂತರ ಒಂಟಿಯಾದರು. ಇಬ್ಬರು ಗಂಡು ಮಕ್ಕಳು ಇಂಗ್ಲೆಂಡಿನಲ್ಲಿ ಉಳಿದು ವಿದ್ಯಾಭ್ಯಾಸ ನಡೆಸುತ್ತಿದ್ದರು. ಪ್ರಜಾಪ್ರಭುತ್ವದ ತತ್ವದಡಿಯಲ್ಲಿ 1990ರ ಹೊತ್ತಿಗೆ ಸಕ್ರಿಯ ರಾಜಕಾರಣ ಪ್ರವೇಶಿಸಿದ ಅಂಗ್ ಸನ್‍ ಸೂಕಿ ಮಯನ್ಮಾರ್ ರಾಜಧಾನಿ ಯಾಂಗೂನ್ನಸಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಅರ್ಧ ಮಿಲಿಯನ್ಗೂಾ ಅಧಿಕ ಜನ ಅವರಿಗೆ ಬೆಂಬಲಿಗರಾಗಿ ನಿಂತರು. ಮಿಲಿಟರಿ ಸರ್ಕಾರ ಅವರಿಗೆ ಚುನಾವಣೆಗೆ ನಿಲ್ಲುವುದನ್ನು ನಿಷೇಧಿಸಿತು. ಪಕ್ಷದ ಇತರ ಕಾರ್ಯಕರ್ತರು ನಿಂತ ಚುನಾವಣೆಯಲ್ಲಿ ಶೇ 80 ಸ್ಥಾನ ಲಭಿಸಿತು. ಪಕ್ಷದ ಅಭ್ಯರ್ಥಿ ಗೆದ್ದು, ಪ್ರಧಾನಮಂತ್ರಿಯಾಗಿ ಆಯ್ಕೆಗೊಂಡರೂ ಮಿಲಿಟರಿ ಅವರ ಆಯ್ಕೆಯನ್ನು ತಿರಸ್ಕರಿಸಿ ಅಧಿಕಾರವನ್ನು ಹಸ್ತಾಂತರಿಸಲಿಲ್ಲ. ಮಿಲಿಟರಿ ತನ್ನ ಬಳಿಯೇ ಅಧಿಕಾರ ಉಳಿಸಿಕೊಂಡಿತು. ಮತ್ತೆ ಸೂಕಿ ಅವರನ್ನು ಗೃಹಬಂಧನದಲ್ಲಿರಿಸಿತು.
ಸೂಕಿಯವರು ಗೃಹಬಂಧನದಲ್ಲಿದ್ದಾಗ ರಾಜ್ಯಶಾಸ್ತ್ರ, ತತ್ವಶಾಸ್ತ್ರಗಳನ್ನು ಓದುತ್ತಿದ್ದರು. ವಿದೇಶಿ ರಾಜತಾಂತ್ರಿಕರನ್ನು ಭೇಟಿ ಮಾಡುತ್ತಿದ್ದರು. ಸೂಕಿ ಮತ್ತು ಅವರ ಪಕ್ಷ ಬಂಧನದ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮೊರೆಹೋದರು. ನ್ಯಾಯಾಲಯದಲ್ಲಿಯೂ ಪ್ರಶ್ನಿಸಿದರು. ಅಮೆರಿಕದ ಅಧ್ಯಕ್ಷರು ಸೇರಿದಂತೆ ಅನೇಕ ದೇಶಗಳ ಮುಖಂಡರು ಅವರ ಬಿಡುಗಡೆಗೆ ಒತ್ತಾಯಿಸಿದರು. ಕೊನೆಗೆ ಪ್ರಪಂಚದಾದ್ಯಂತ ನಡೆದ ಪ್ರತಿಭಟನೆಯ ಫಲವಾಗಿ 2010 ನವೆಂಬರ್ 12ರಂದು ಸೂಕಿಯವರನ್ನು ಬಿಡುಗಡೆ ಮಾಡಲಾಯಿತು.
ಗೃಹಬಂಧನದಿಂದ ಮುಕ್ತಗೊಂಡು ಹೊರಬಂದ ನಂತರ ಸೂಕಿಯವರು ಇದು ದೇಶದ ಹೊಸ ಉದಯ ಎಂದು ಸಾರಿದರು. ಅವರ ಪ್ರಕಾರ ನಾಗರಿಕರು ಉತ್ತಮ ಬಾಳು ನಡೆಸಲು ಸ್ವಾತಂತ್ರ್ಯ, ಸಮಾನತೆ ಬೇಕು, ಬಡತನ, ದಾರಿದ್ರ್ಯ ಭ್ರಷ್ಟಾಚಾರಕ್ಕೆ ಕಾರಣ' ಎಂಬುದನ್ನು ಅವರು ಬಲವಾಗಿ ನಂಬಿದ್ದರು. ಇವರ ಕಾರ್ಯಕ್ಕಾಗಿ 1991ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಬಂದಿತು. ಧೈರ್ಯ, ಕಠಿಣ ಸಾಧನೆ, ಪರಿಶ್ರಮಕ್ಕೆ ಅನ್ವರ್ಥ ಆಂಗ್ಸಾ ನ್ ಸೂಕಿ.

- ಸುಮನಾ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com