ಇದು ಪ್ಲೇಬಾಯ್ ಓದುಗರಿಗೆ ಆಘಾತಕಾರಿ ಸುದ್ದಿ. ಪ್ಲೇ ಬಾಯ್ ಪತ್ರಿಕೆಯ ಸುದ್ದಿ ಸ್ಕಾಟ್ ಫ್ಲಾಂಡರ್ಸ್ ಈ ಸುದ್ದಿಯನ್ನು ಹೊರಹಾಕಿದ್ದಾರೆ. ಇದಕ್ಕೆ ಕಾರಣ ಇಂಟರ್ನೆಟ್! ಸುಲಭವಾಗಿ ಲಭ್ಯವಾಗುತ್ತಿರುವ ನೀಲಿಚಿತ್ರಗಳು, ಉಚಿತವಾಗಿ ಸಿಕ್ಕುತ್ತಿರುವ ನಗ್ನ ಚಿತ್ರಗಳು ಪ್ಲೇಬಾಯ್ನ ಜನಪ್ರಿಯತೆಯನ್ನು ತುಳಿದು ಹಾಕಿವೆ. ಸಾಮಾಜಿಕ ಜಾಲತಾಣಗಳಂತೂ ಇಂಥ ಟ್ರೆಂಡ್ ಅನ್ನು ವಿಪರೀತವಾಗಿ ಪೋಷಿಸುತ್ತಿದ್ದು, ಪ್ಲೇಬಾಯ್ನಂಥ ಪತ್ರಿಕೆಯ ಅಗತ್ಯವನ್ನೇ ನಗಣ್ಯವಾಗಿಸಿವೆ. ಹಾಗಾಗಿ ಪ್ಲೇಬಾಯ್ ಈ ನಿರ್ಧಾರಕ್ಕೆ ಬಂದ ಹಾಗೆ ಕಾಣುತ್ತಿದೆ. 1953ರಲ್ಲಿ ಮೊದಲ ಬಾರಿಗೆ ಅಂಥ ಕಾಣಿಸಿಕೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ ನೂರಾರು ಮಾಡೆಲ್‍ಗಳು ತಮ್ಮ ದೇಹ ಸೌಂದರ್ಯವನ್ನು ಈ ಪತ್ರಿಕೆಯ ಪುಟಗಳಲ್ಲಿ ಹರವಿದ್ದರು.