ಶಿವದೇವಾಲಯ ನಿರ್ಮಿಸಿದ ಶಿವ ಭಕ್ತ ಅಕ್ಬರ್ ಖಾನ್!

ರಾಜಸ್ತಾನದ ಟೋಂಕ್ ಟೌನ್ ನಿವಾಸಿಯಾಗಿರುವ ಅಕ್ಬರ್ ಖಾನ್ ಇದೀಗ ತಮ್ಮ ಊರಲ್ಲಿ ಶಿವ ದೇವಾಲಯವೊಂದನ್ನು ನಿರ್ಮಿಸಿದ್ದಾರೆ. ಏಪ್ರಿಲ್ 30 ರಂದು...
ಶಿವ
ಶಿವ
ರಾಜಸ್ತಾನ: ನನಗೇನಾದರೂ ಕಷ್ಟಗಳು ಬಂದರೆ ನಾನು ಶಿವನ ಮೊರೆ ಹೋಗುತ್ತಿದ್ದೆ. ಅವನನ್ನು ಪೂಜಿಸಿದೆ, ಪ್ರಾರ್ಥಿಸಿದೆ. ನನ್ನ ಕಷ್ಟಗಳನ್ನು ಆತ ನಿವಾರಣೆ ಮಾಡುತ್ತಿದ್ದ ಅಂತಾರೆ  39ರ ಹರೆಯದ ಅಕ್ಬರ್ ಖಾನ್.
ರಾಜಸ್ತಾನದ ಟೋಂಕ್ ಟೌನ್ ನಿವಾಸಿಯಾಗಿರುವ ಅಕ್ಬರ್ ಖಾನ್ ಇದೀಗ ತಮ್ಮ ಊರಲ್ಲಿ ಶಿವ ದೇವಾಲಯವೊಂದನ್ನು ನಿರ್ಮಿಸಿದ್ದಾರೆ. ಏಪ್ರಿಲ್ 30 ರಂದು ದೇವಾಲಯವನ್ನು ಸಾರ್ವಜನಿಕರಿಗಾಗಿ ತೆರೆದ ಅಕ್ಬರ್, ದೇವಾಲಯದಲ್ಲಿ ಗಣೇಶ ಪೂಜೆಯನ್ನು ಹಮ್ಮಿಕೊಂಡು ಭಕ್ತಾದಿಗಳಿಗೆ ಆಮಂತ್ರಣ ನೀಡಿದ್ದಾರೆ.
ನಾನ್ಯಾವಾಗಿನಿಂದ ಶಿವನ ಭಕ್ತನಾದೆ ಎಂದು ನನದೆ ನೆನಪಿಲ್ಲ. ಆದರೆ ನಾನು ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಕುಸಿದು ಹೋದಾಗಲೆಲ್ಲಾ ಶಿವನನ್ನು ಪ್ರಾರ್ಥಿಸುತ್ತಿದೆ. ಆತ ನನ್ನ  ದುಗುಡ ನಿವಾರಿಸುತ್ತಿದ್ದ ಅಂತಾರೆ ಅಕ್ಬರ್. 
ಅಲ್ಲಾ ಕಹೋ ಯಾ ರಾಮ್, ಕ್ಯಾ ಫರಕ್ ಪಡ್ತಾ ಹೈ  (ನೀವು ಅಲ್ಲಾ ಎಂದೇ ಕರೆಯಿರಿ, ರಾಮ್ ಎಂದೇ ಕರೆಯಿರಿ...ಏನೂ ಬದಲಾವಣೆ ಆಗಲ್ಲ) ಎಂದು ಮತ ಸೌಹಾರ್ದತೆಯ ಬಗ್ಗೆ ಅಕ್ಬರ್  ಹೆಮ್ಮೆಯಿಂದ ಹೇಳುತ್ತಾರೆ. 
ಓಂ ವಿಹಾರ್ ಕಾಲನಿಯಲ್ಲಿ 100ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲ್ಪಟ್ಟ ಈ ದೇವಾಲಯ ಭೂತನಾಥೇಶ್ವರ ದೇವಾಲಯವೆಂದು ಕರೆಯಲ್ಪಡಲಿದೆ. ಈ ದೇವಾಲಯದಲ್ಲಿ ಶಿವನ ಮೂರ್ತಿ ಮಾತ್ರವಲ್ಲ  ಶಿವನ ಕುಟುಂಬವೇ ಇದೆ.
ಈ ಕೆಲಸವನ್ನು ನನ್ನಿಂದ ಮಾಡಿಸಿದ ಶಿವನಿಗೆ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ಯಾರೊಬ್ಬರಿಂದಲೂ ಧನ ಸಹಾಯ ಪಡೆಯದೆಯೇ ನಾನು ಈ ದೇವಾಲಯವನ್ನು ನಿರ್ಮಿಸಿದ್ದೇನೆ. ಇಲ್ಲಿಯವರೆಗೆ ಈ ಕಾಲನಿಯಲ್ಲಿ ಯಾವುದೇ ದೇವಾಲಯಗಳು ಇರಲಿಲ್ಲ ಎನ್ನುವ ಅಕ್ಬರ್, ಇಲ್ಲಿನ ಮಕ್ಕಳಿಗಾಗಿ ಶಾಲೆಯೊಂದನ್ನೂ ನಡೆಸುತ್ತಿದ್ದಾರೆ.
ದೌಸಾದ ಸಿಕಂದರದಿಂದ ನಾನು ಈ ಶಿವನ ವಿಗ್ರಹವನ್ನು ತಂದಿದ್ದೇನೆ ಎಂದವರು ಹೇಳಿದ್ದಾರೆ. ಆದಾಗ್ಯೂ, ನೀವು ಶಿವ ದಜೇವಾಲಯ ನಿರ್ಮಿಸಿದ್ದಕ್ಕೆ ನಿಮ್ಮ ಧರ್ಮದವರಿಂದ ವಿರೋಧವೇನೂ ವ್ಯಕ್ತವಾಗಿಲ್ಲವೇ ಎಂದು ಕೇಳಿದಾಗ, ನನ್ನನ್ನು ಯಾರೂ ವಿರೋಧಿಸಿಲ್ಲ. ಈ ದೇವಾಲಯವನ್ನು ನಿರ್ಮಿಸುವ ಮೂಲಕ ರಾಮ್ ಅಥವಾ ಅಲ್ಲಾನೇ ಆಗಿರಲಿ ಎಲ್ಲ ದೇವರೂ ಒಂದೇ ಎಂಬ ಸಂದೇಶವನ್ನು ನಾನು ನೀಡಿದ್ದಾನೆ. ಜನರು ಎಲ್ಲ ಧರ್ಮಗಳನ್ನು ಗೌರವಿಸಬೇಕು. 
3 ರಿಂದ 5 ಅಡಿ ಎತ್ತರದ ವಿಗ್ರಹಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಶಿವನ ವಿಗ್ರಹಗಳ ಹೊರತಾಗಿ ಪಾರ್ವತಿ ಮತ್ತು ಗಣೇಶನ ವಿಗ್ರಹವೂ ಇಲ್ಲಿದೆ.
ಏಪ್ರಿಲ್ 28ಕ್ಕೆ ಗಣೇಶನಿಗೆ ಪೂಜೆ ಸಲ್ಲಿಸಿ ಏಪ್ರಿಲ್ 29ಕ್ಕೆ ಕಳಶ ಯಾತ್ರೆ ಮಾಡಲಾಗಿತ್ತು. ಅನಂತರ ಭಜನೆ ಮತ್ತು ಯಜ್ಞಗಳನ್ನು ಹಮ್ಮಿಕೊಳ್ಳಲಾಗಿದ್ದು,  ಏಪ್ರಿಲ್ 30ರ ನಂತರ ದೇವಾಲಯ ಸಾರ್ವಜನಿಕರಿಗಾಗಿ ತೆರೆಯಲಾಗಿದೆ ಎಂದು ಅಕ್ಬರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com