ಮಂಗಳ ಗ್ರಹದಲ್ಲಿ ಅನ್ಯಗ್ರಹ ಜೀವಿ ಅಸ್ತಿತ್ವಕ್ಕೆ ಸಿಕ್ಕಿದೆ ಪುರಾವೆ?

ಅನ್ಯಗ್ರಹ ಜೀವಿಗಳ ಬಗ್ಗೆ ಇರುವ ಕುತೂಹಲಕ್ಕೆ ಮತ್ತೊಂದು ಹೊಸ ತಿರುವು ಸಿಕ್ಕಿದ್ದು, ಮಂಗಳ ಗ್ರಹದಲ್ಲಿ ಮೂರು ಟವರ್(ಗೋಪುರಗಳು) ಜೋಡಿಸಿದಂತೆ ಇರುವ ಚಿತ್ರ ಬಹಿರಂಗವಾಗಿದೆ.
ಮಂಗಳ ಗ್ರಹ
ಮಂಗಳ ಗ್ರಹ
ವಾಷಿಂಗ್ ಟನ್: ಅನ್ಯಗ್ರಹ ಜೀವಿಗಳ ಬಗ್ಗೆ ಇರುವ ಕುತೂಹಲಕ್ಕೆ ಮತ್ತೊಂದು ಹೊಸ ತಿರುವು ಸಿಕ್ಕಿದ್ದು, ಮಂಗಳ ಗ್ರಹದಲ್ಲಿ ಮೂರು ಟವರ್(ಗೋಪುರಗಳು) ಜೋಡಿಸಿದಂತೆ ಇರುವ ಚಿತ್ರ ಬಹಿರಂಗವಾಗಿದೆ. 
ಮೂರು ಗೋಪುರಗಳು ಜೋಡಿಸಿದಂತೆ ನಿಂತಿರುವ ಚಿತ್ರ ಮಂಗಳ ಗ್ರಹದಲ್ಲಿ ಅತ್ಯಂತ ಬುದ್ಧಿಶಕ್ತಿಯುಳ್ಳ ಜೀವಿಗಳಿವೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯ ಎಂದು ವಿಶ್ಲೇಷಿಸಲಾಗುತ್ತಿದೆ. ಮಂಗಳ ಗ್ರಹದಲ್ಲಿ ಕಂಡಿರುವ ಮೂರು ಗೋಪುರಗಳ ಬಗ್ಗೆ ಯೂಟ್ಯೂಬ್ ಚಾನಲ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಲೇಖಕನ ಪ್ರಕಾರ ಗೋಪುರಗಳು 4.8 ಕಿಮೀ ಉದ್ದವಿದ್ದು, ಜೋಡಿಸಿದಂತಿವೆ ಎಂದು ತಿಳಿದುಬಂದಿದೆ. 
ಕೆಂಪುಗ್ರಹದಲ್ಲಿ ಕಂಡುಬಂದಿರುವ ಆಕೃತಿ ಕಾಕತಾಳೀಯವಲ್ಲ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದು, ಗೋಪುರಗಳು ಅತ್ಯಾಧುನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು ಇರಬಹುದು ಎಂದಿದ್ದಾರೆ. ಮಾರ್ಸ್ ಗ್ಲೋಬಲ್ ಸರ್ವೇಯರ್ ರವಾನೆ ಮಾಡಿರುವ ಮೂಲ ಚಿತ್ರದ ಜೊತೆಗೆ 3ಡಿ ಚಿತ್ರವನ್ನೂ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಗೋಪುರಗಳು ನೀರು ಅಥವಾ ಗಾಳಿಯಿಂದ ನಿರ್ಮಿಸಲಾದಂತೆ ತೋರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 
ಆದರೆ ನಾಸಾ ವಿಜ್ಞಾನಿಗಳಿಗೆ ಇದೇನು ಮಹತ್ವದ ಅಥವಾ ಕುತೂಹಲಕಾರಿ ಆವಿಷ್ಕಾರ ಎಂದೆನಿಸಿಲ್ಲವಂತೆ. ಮಾರ್ಸ್ ಗ್ಲೋಬಲ್ ಸರ್ವೇಯರ್ ರವಾನಿಸಿರುವ ಚಿತ್ರಗಳು ಹತ್ತಿರದಿಂದ ನೋಡಿದರೆ ಸ್ಪಷ್ಟವಾಗಿ ಕಾಣುವುದಿಲ್ಲ ಆದ್ದರಿಂದ   ಚಿತ್ರಗಳಿಗೆ ಸಂಬಂಧಿಸಿದ ವಾಸ್ತವಗಳು ನಿರಾಸೆ ಮೂಡಿಸಬಹುದು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com