ಬೆಂಗಳೂರು: ಕನ್ನಡ ನವ್ಯ ಕಾವ್ಯದ ಆದಿ ಕವಿ ಎಂದೇ ಪ್ರಖ್ಯಾತರಾದ ಎಂ ಗೋಪಾಲಕೃಷ್ಣ ಅಡಿಗರ ೯೮ನೇ ಜನ್ಮ ದಿನೋತ್ಸವ ಇಂದು. ಫೆಬ್ರವರಿ ೧೮ ೧೯೧೮ರಲ್ಲಿ ಜನಿಸಿದ ಅಡಿಗರು ಕನ್ನಡದ ಮೇರು ಕವಿಗಳಲ್ಲಿ ಒಬ್ಬರು.
ಅಡಿಗರ ದಿನೋತ್ಸವವಾದ ಇಂದು ಸದ್ದಿಲ್ಲದೇ ಅವರ ಬಗ್ಗೆ ಅತ್ಯುತ್ತಮ ಮಾಹಿತಿಯುಳ್ಳ ಅಂತರ್ಜಾಲ ತಾಣವೊಂದು ಪಾದಾರ್ಪಣೆಗೊಂಡಿದೆ. ಅಡಿಗರೇ ಓದಿರುವ ಕವನಗಳ ಆಡಿಯೋ ತುಣುಕುಗಳು, ಇತರ ಸಮಕಾಲೀನ ಸಾಹಿತಿಗಳು, ಯುವ ಸಾಹಿತಿಗಳು, ಸಾಹಿತ್ಯಾಸಕ್ತರು ಓದಿರುವ ಅಡಿಗರ ಕವನಗಳ ಆಡಿಯೋ, ಅಡಿಗರ ಕವನಗಳ ಬಗ್ಗೆ ವಿವಿಧ ಲೇಖಕರ ವಿಮರ್ಶೆಗಳು, ಅಡಿಗರ ಸಂದರ್ಶ, ಅಡಿಗರ ಚಿತ್ರಪಟಗಳು ಇತ್ಯಾದಿ ಮಾಹಿತಿಯನ್ನು ಒಳಗೊಂಡ ಈ ಅಂತರ್ಜಾಲ ತಾಣ ವಿನ್ಯಾಸ ಸರಳ ಮತ್ತು ಸುಂದರವಾಗಿದ್ದು ಓದುಗರ ಕಣ್ಮನ ಸೆಳೆದಿದೆ.
ಸಾಫ್ಟೇರ್ ಉದ್ಯೋಗು ಕುಂಟಾಡಿ ನಿತೇಶ್ ಈ ಮಾಹಿತಿಪೂರ್ಣ ವೆಬ್ಸೈಟ್ ನ ಸಂಪಾದಕ ಹಾಗೂ ವಿನ್ಯಾಸಕಾರ. "ಇದಿನ್ನೂ ಅಂತರ್ಜಾಲದ ಮೊದಲ ಆವೃತ್ತಿಯಾಗಿದ್ದು, ಜನರು ಹೆಚ್ಚೆಚ್ಚು ಓದಿದಂತೆ, ಸಮಯ ಕಳೆದಂತೆ ಇನ್ನೂ ಹೆಚ್ಚಿನ ವಿಷಯಗಳು ಈ ಜಾಲತಾಣಕ್ಕೆ ಸೇರ್ಪಡೆಯಾಲಿದೆ" ಎನ್ನುತ್ತಾರೆ ನಿತೇಶ್.
ಅಂತರ್ಜಾಲ ತಾಣದ ವಿಳಾಸ http://adiga.sankathana.com/ ಹೀಗಿದ್ದು ಒಮ್ಮೆ ಅದನ್ನು ನೀವೂ ಕಾಣಿ, ಮತ್ತು ಅಡಿಗರ ಬಗೆಗೆ ವಿಶೇಷ ಮಾಹಿತಿಯಿದ್ದರೆ ನಮಗೆ ತಿಳಿಸಿ ಎನ್ನುತ್ತದೆ ತಾಣದ ಸಂಚಾಲಕ ಮಂಡಲಿ.
Advertisement