ಪ್ಯಾರಾಚೂಟ್ ಇಲ್ಲದೆ ಅತಿ ಎತ್ತರದಿಂದ ಭೂಮಿಗೆ ಧುಮುಕಿದ ಸ್ಕೈ ಡೈವರ್

ಅಮೆರಿಕದ ಸ್ಟಂಟ್ ಮಾಸ್ಟರ್ ಲ್ಯೂಕ್ ಅಕಿನ್ಸ್, ಪ್ಯಾರಾಚೂಟ್ ಇಲ್ಲದೆ 25 ಸಾವಿರ ಅಡಿ ಎತ್ತರದಿಂದ ಧುಮುಕಿ ಈ ಸಾಧನೆ ಮಾಡಿದ ಜಗತ್ತಿನ ಪ್ರಥಮ ವ್ಯಕ್ತಿ ಎಂಬ
ಲ್ಯೂಕ್ ಆಕಿನ್ಸ್
ಲ್ಯೂಕ್ ಆಕಿನ್ಸ್

ಲಾಸ್ ಏಂಜಲೀಸ್: ಅಮೆರಿಕದ ಸ್ಟಂಟ್ ಮಾಸ್ಟರ್ 42 ವರ್ಷದ ಲ್ಯೂಕ್ ಅಕಿನ್ಸ್, ಪ್ಯಾರಾಚೂಟ್ ಇಲ್ಲದೆ 25 ಸಾವಿರ ಅಡಿ ಎತ್ತರದಿಂದ ಧುಮುಕಿ ಈ ಸಾಧನೆ ಮಾಡಿದ ಜಗತ್ತಿನ ಪ್ರಥಮ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ.

ವಿಂಗ್​ಸೂಟ್ (ಗಾಳಿ ನಿಯಂತ್ರಣ ಕವಚ) ಅಥವಾ ಯಾರೊಬ್ಬ ಹಿಂಬಾಲಕರ ಸಹಾಯ ಇಲ್ಲದೆ ಧುಮುಕಿ ಆಶ್ಚರ್ಯದ ಜತೆ ಸಾಹಸ ಮೆರೆದಿದ್ದಾರೆ. ಅವರ ಲ್ಯಾಂಡಿಂಗ್​ಗಾಗಿ ಫುಟ್ಬಾಲ್ ಮೈದಾನದಷ್ಟು ಅಂದರೆ 100*100 ಅಡಿ ಅಗಲ ನೆಟ್ ಹಾಕಲಾಗಿತ್ತು. ಕೇವಲ 2 ನಿಮಿಷದ ಅವಧಿಯಲ್ಲಿ 25 ಸಾವಿರ ಅಡಿ ಎತ್ತರದಿಂದ ಕೆಳಕ್ಕಿಳಿದು ವಿಶ್ವವೇ ತಮ್ಮತ್ತ ನೋಡುವಂತೆ ಮಾಡಿದ್ದಾರೆ.

ಕೆಳಗಿಳಿದ ತಕ್ಷಣ ನಾಲ್ಕು ವರ್ಷದ ತಮ್ಮ ಮಗನೊಂದಿಗೆ ನಿಂತಿದ್ದ ಪತ್ನಿಯ ಕಡೆ ಬಂದು ಇಬ್ಬರನ್ನು ಅಪ್ಪಿಕೊಂಡರು.  ಅಕಿನ್ಸ್ ಕುಟುಂಬದವರೆಲ್ಲ ಸ್ಥಳದಲ್ಲಿ ನೆರೆದಿದ್ದರು. ಸುರಕ್ಷಿತವಾಗಿ ಧರೆಗಿಳಿದ ಅಕಿನ್ಸ್ ಹೊಸ ದಾಖಲೆಗೆ ಸಾಕ್ಷಿಯಾದರು. ವೃತ್ತಿಪರ ಸಾಹಸಪಟುವಾದ ಅಕಿನ್ಸ್ ಹಾಲಿವುಡ್​ನ ಆಕ್ಷನ್ ಓರಿಯೆಂಟೆಡ್ ಸಿನಿಮಾ ಐರನ್ ಮ್ಯಾನ್-3 ಸಿನಿಮಾದಲ್ಲಿ ಸ್ಟಂಟ್​ಗಳನ್ನು ಮಾಡಿದ್ದಾರೆ. ಈ ದಾಖಲೆ ನಿರ್ಮಿಸಲು 18 ಸಾವಿರ ಜಿಗಿತಗಳ ಮೂಲಕ ಅಭ್ಯಾಸ ಮಾಡಿದ್ದರು.

ಕೆಲವೊಮ್ಮೆ ಹೀಗಾಗುತ್ತೆ. ನನಗೆ ಮಾತುಗಳೇ ಬರುತ್ತಿಲ್ಲ, ಈ ಸಾಧಾನೆಗೆ ಕಳೆದ ಎರಡು ವರ್ಷಗಳಿಂದ ನನ್ನೊಂದಿಗೆ ಶ್ರಮಿಸಿದ ಎಲ್ಲಾ ಸಿಬ್ಬಂದಿಗೂ ನನ್ನ ಧನ್ಯವಾದಗಳು ಎಂದು ಹೇಳಿದರು. ನನ್ನ ತಂದೆ ಹಾಗೂ ತಾತ ಕೂಡ ಸ್ಕೈ ಡೈವರ್ ಆಗಿದ್ದರು, ನನ್ನ ಪತ್ನಿ ಕೂಡ ಇದುವರೆಗೂ 2ಸಾವಿರ ಜಂಪ್ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ಅಮೆರಿಕಾದ ಪ್ಯಾರಚೂಟ್ ಅಸೋಸಿಯೇಷನ್ ನಲ್ಲಿ ಆಕ್ಸಿನ್ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com