ಹಿಮದ ಮಧ್ಯೆ ಕಳೆದು ಹೋಗಿದ್ದ ವಿದ್ಯಾರ್ಥಿಗಳಿಗೆ ನೆರವಾದ ಸ್ಥಳೀಯ ನಾಯಿ

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ಗೆಂದು ಬಂದಿದ್ದ ಪಂಜಾಬ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬದುಕುಳಿಯಲು ಸ್ಥಳೀಯ ನಾಯಿಯೊಂದು ನೆರವಾದ...
ಹಿಮದ ಮಧ್ಯೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳ ರಕ್ಷಿಸಿದ ಸ್ಥಳೀಯ ನಾಯಿ
ಹಿಮದ ಮಧ್ಯೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳ ರಕ್ಷಿಸಿದ ಸ್ಥಳೀಯ ನಾಯಿ

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ಗೆಂದು ಬಂದಿದ್ದ ಪಂಜಾಬ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬದುಕುಳಿಯಲು ಸ್ಥಳೀಯ ನಾಯಿಯೊಂದು ನೆರವಾದ ಕುರಿತು ವಿದ್ಯಾರ್ಥಿಯೊಬ್ಬರು ಹೀಗೆ ವಿವರಿಸಿದ್ದಾರೆ.

ಹಿಮಾಚಲ ಪ್ರದೇಶದ ಬಿಜಲೇಶ್ವರ್ ಮಹಾದೇವ ದೇವಸ್ಥಾನ ನೋಡಲು ಟ್ರೆಕಿಂಗ್ ಇಸ್ಟ್ರಕ್ಟರ್ ಸೇರಿದಂತೆ 8 ಮಂದಿ ಕುಲುಗೆ ಬಂದಿದ್ದೇವು. ಟ್ರೆಕಿಂಗ್ ವೇಳೆ ಹೆಚ್ಚಾಗಿ ಹಿಮ ಬೀಳುತ್ತಿದ್ದರಿಂದ ನಮಗೆ ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಈ ವೇಳೆ ಸ್ಥಳೀಯ ನಾಯಿಯೊಂದು ನಮಗೆ ನೆರವಾಯಿತು. ಕಡಿದಾದ ಭೂಪ್ರದೇಶದಲ್ಲಿ ನಾವು ದೇವಸ್ಥಾನ ತಲುಪಲು ಹೆಚ್ಚು ಶ್ರಮವಹಿಸಬೇಕಾಯಿತು. ಆಗ ನಮಗೆ ನೇರವಾಗಿದ್ದೆ ಸ್ಥಳೀಯ ನಾಯಿ.

ನಮ್ಮ ಜತೆಗೂಡಿದ ನಾಯಿಗೆ ದಾರಿ ಮಧ್ಯೆ ಊಟವನ್ನು ಕೊಡಲು ಮುಂದಾದರೆ ಅದು ತಿನ್ನುತ್ತಿರಲಿಲ್ಲ ಕಾರಣವೇನು ಎಂಬುದು ನಮಗೆ ಗೊತ್ತಾಗಲಿಲ್ಲ. ಹಿಮಗಾಳಿ ಹಾಗೂ ಹೆಚ್ಚಾಗಿ ಹಿಮ ಬೀಳಲು ಆರಂಭಗೊಂಡಾಗ ದೇವಾಲಯದ ದಾರಿ ಮುಚ್ಚಿ ನಮಗೆ ತಿಳಿಯದಾಯಿತು. ಈ ವೇಳೆ ತಾಳ್ಮೆ ಕಳೆದುಕೊಳ್ಳದ ನಾಯಿ ನಮಗೆ ಮಾರ್ಗದರ್ಶಕನಾಗಿ ನಿಂತಿತು ಎಂದು ವಿದ್ಯಾರ್ಥಿ ಸೌರಭ್ ಶರ್ಮಾ ತಮ್ಮ ಪ್ರಯಾಣದ ನೈಜ್ಯತೆಯನ್ನು ವಿವರಿಸುತ್ತಾರೆ.

ಭಾರೀ ಹಿಮಪಾತದಿಂದಾಗಿ ನಾವು ದೇವಾಲಯಕ್ಕೆ ತೆರಳುವ ಪರಿಸ್ಥಿತಿಯಲ್ಲಿರಲಿಲ್ಲ. ಆಗ ನಾವು ಬಿಜಲೇಶ್ವರ ದೇವಾಲಯದಿಂದ ಸುಮಾರು 8 ಕಿ.ಮೀ ದೂರದಲ್ಲಿದ್ದೇವು. ಈ ವೇಳೆ ಟೆಂಟ್ ವೊಂದನ್ನು ನಿರ್ಮಿಸಿ ರಕ್ಷಣೆ ಪಡೆದೆವು. ಆದರೆ ನಮ್ಮ ಜತೆಗಿದ್ದ ನಾಯಿ ಮಾತ್ರ ಟೆಂಟ್ ಒಳಗೆ ಬರದೆ ಹಗಲು ರಾತ್ರಿ ಟೆಂಟ್ ನ ಆಚೆಯೇ ಕಳೆಯಿತು. ಹಿಮಪಾತದಿಂದಾಗಿ ಕನಿಷ್ಠ 78 ಘಂಟೆಗಳ ಕಾಲ ನಾವು ಆಹಾರ ಹಾಗೂ ಪರ್ವತಾರೋಹಣ ಉಪಕರಣಗಳಿಲ್ಲದೆ ಟೆಂಟ್ ನಲ್ಲಿಯೇ ಕಳೆಯುವಂತಾಯಿತು ಎಂದರು.

ಈ ಮಧ್ಯೆ ಟ್ರೆಕಿಂಗ್ ಹೋದ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರಿಂದ ಇತ್ತ ಮಾರ್ಚ್ 11 ರಂದು ಸ್ವೀಸ್ ನ ಪರ್ವತಾರೋಹಿಗಳ ರಕ್ಷಣಾ ಕಾರ್ಯ ಆರಂಭಿಸಿ ಎರಡು ದಿನಗಳ ನಂತರ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com