16 ತಿಂಗಳ ಮಗುವನ್ನೇ ವಿವಾಹವಾದ ಅಪ್ಪ!

ಅವನೆಂಥಾ ಅಪ್ಪ? ಎಂದು ಬೈಯುವ ಮುನ್ನ ಸ್ವಲ್ಪ ನಿಲ್ಲಿ...ಇಂಗ್ಲೆಂಡ್ ನ ನಾರ್ಫಾಕ್ ನಿವಾಸಿಯಾದ 31ರ ಹರೆಯದ ಆ್ಯಂಡಿ ಬರ್ನಾಡ್ ಎಂಬ ಆರ್ಎಎಫ್ ಯೋಧ, ತನ್ನ ಒಂದೂವರೆ ವರ್ಷದ...
ಮಗಳು ಪೋಪ್ಪಿ ಮಯಿ ಜತೆ ಆ್ಯಂಡಿ ಬರ್ನಾಡ್
ಮಗಳು ಪೋಪ್ಪಿ ಮಯಿ ಜತೆ ಆ್ಯಂಡಿ ಬರ್ನಾಡ್
ಥೆಟ್ಫಾರ್ಡ್ : ಪ್ರತಿಯೊಬ್ಬ ಅಪ್ಪ ಅಮ್ಮನಿಗೂ ತಮ್ಮ ಮಕ್ಕಳ ವಿವಾಹವನ್ನು ನೆರವೇರಿಸುವ ಆಸೆ ಇದ್ದೇ ಇರುತ್ತದೆ. ಅದರಲ್ಲೂ ಮಗಳ ಮದುವೆ ಎಂದರೆ ಅದೊಂದು ವಿಶೇಷ ಸಮಾರಂಭ. ಮಗಳ ಮದುವೆ ನೆರವೇರಿಸುವುದು ಅಪ್ಪನ ದೊಡ್ಡ ಜವಾಬ್ದಾರಿ. ಆದರೆ ಮುದ್ದಿಸಿ ಬೆಳೆಸಿದ ತನ್ನ ಮಗಳನ್ನು ಇನ್ನೊಬ್ಬರ ಕೈಗೊಪ್ಪಿಸಿ ಮಗಳ ವಿವಾಹ ನೆರವೇರಿಸಬೇಕಾಗಿದ್ದ ಅಪ್ಪ ಇಲ್ಲಿ ತನ್ನ ಮಗಳನ್ನೇ ಮದುವೆಯಾಗಿದ್ದಾನೆ. ಆ ಮಗಳ ವಯಸ್ಸು ಕೇವಲ 16 ತಿಂಗಳು!
ಅವನೆಂಥಾ ಅಪ್ಪ? ಎಂದು ಬೈಯುವ ಮುನ್ನ ಸ್ವಲ್ಪ ನಿಲ್ಲಿ...
ಇಂಗ್ಲೆಂಡ್ ನ ನಾರ್ಫಾಕ್ ನಿವಾಸಿಯಾದ  31ರ ಹರೆಯದ ಆ್ಯಂಡಿ ಬರ್ನಾಡ್ ಎಂಬ ಆರ್ಎಎಫ್ ಯೋಧ, ತನ್ನ ಒಂದೂವರೆ ವರ್ಷದ ಮಗಳನ್ನು ಮದುವೆಯಾಗಿದ್ದಾನೆ. ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ತನ್ನ ಮಗಳು ಪೋಪ್ಪಿ ಮಯಿ ಇನ್ನು ಬದುಕುಳಿಯುವುದು ಎರಡನೇ ದಿನ ಎಂದು ಗೊತ್ತಾದಾಗ ಆ ಹೆತ್ತವರು ಕುಸಿದು ಹೋದರು.
ಮಗಳ ಕನಸಿನಂತೆ ಆಕೆಯ ವಿವಾಹ ನಡೆಸಿಕೊಡಬೇಕೆಂದು ಆ್ಯಂಡಿ ಬಯಸಿದ್ದರು. ಆದರೆ ಆ ಕನಸು ಈಡೇರುವ ಮುನ್ನವೇ ಮಗಳು ನಮ್ಮನ್ನು ಬಿಟ್ಟು ಹೋಗುತ್ತಾಳೆ ಎಂದು ತಿಳಿದಾಗ ಆ್ಯಂಡಿ ಮತ್ತು ಆತನ ಪತ್ನಿ ಸ್ಯಾಮಿ ಬರ್ನಾಡ್ ತಮ್ಮ ಮಗಳ ವಿವಾಹ ನಡೆಸಲು ನಿಶ್ಚಯಿಸಿದರು.
ರಾಜಕುಮಾರಿಯ ವಿವಾಹದಂತೆ ನನ್ನ ಮಗಳ ವಿವಾಹ ನಡೆಯಬೇಕು ಎಂದು ನಾನು ಬಯಸಿದ್ದೆ. ಆದರೆ ಅದು ಸಾಧ್ಯವಾಗುತ್ತಿಲ್ಲವಲ್ಲಾ? ಎಂದು ಕಣ್ಣೀರಾದ ಅಪ್ಪ ಅಮ್ಮ ಮನೆಯಲ್ಲಿಯೇ ಮದುವೆ ಮಂಟಪವನ್ನು  ನಿರ್ಮಿಸಿದರು. ಮಗಳನ್ನು ರಾಜಕುಮಾರಿಯಂತೆ ಶೃಂಗರಿಸಿ ಪೋಪ್ಪಿ ಮಯಿಯ ಸಹೋದರಗಳಾದ ರೆಯ್ಸಿಸ್, ಜಾನ್ಸನ್ ಮದುಮಗಳ ಜತೆಯಾದರು. ಹೀಗೆ ಬಂಧುಮಿತ್ರ ಸಮ್ಮುಖದಲ್ಲೇ ಮಗಳು ಪೋಪ್ಪಿ ಮಯಿಯನ್ನು ಅಪ್ಪ ಆ್ಯಂಡಿ ವಿವಾಹವಾದರು. ! 
ಕಳೆದ ಫೆಬ್ರವರಿ 24 ರಂದು ಪೋಪ್ಪಿ ಮಯಿಗೆ ಅನಾರೋಗ್ಯ ಇದೆ ಎಂಬುದು ತಿಳಿದು ಬಂದಿತ್ತು. ಮಗು ಆಹಾರ ಸೇವನೆಗೆ ನಿರಾಕರಿಸುವುದರ ಜತೆಗೆ ದೇಹದ ಬ್ಯಾಲೆನ್ಸ್ ನಷ್ಟವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದಾಗ ಪೋಪ್ಪಿಗೆ ಬ್ರೈನ್ ಟ್ಯೂಮರ್ ಮಾತ್ರವಲ್ಲ ಕಿಡ್ನಿ ಕ್ಯಾನ್ಸರ್ ಇದೆ ಎಂದು ಪತ್ತೆಯಾಯಿತು. ಕ್ಯಾನ್ಸರ್ ಸೆಲ್ ಗಳು ಆ ಮಗುವಿನ ದೇಹದ ಎಲ್ಲ ಭಾಗಗಳಲ್ಲಿ ಹರಡಿರುವುದರಿಂದ ಕೀಮೋಥೆರಪಿ ಮಾಡಿದರೂ ಬದುಕುಳಿಯುವುದು ಕಷ್ಟ ಎಂದು ವೈದ್ಯರು ಹೇಳಿದ್ದರು.
ಇನ್ನು ಹೆಚ್ಚೆಂದರೆ ಪೋಪ್ಪಿ ಎರಡು ದಿನ ಬದುಕುಳಿಯಬಹುದು ಎಂದು ವೈದ್ಯರು ಹೇಳಿದೊಡನೆ ಆಕೆಯನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲಾಯಿತು. ಆಕೆ ಬದುಕಿರುವಷ್ಟು ಕ್ಷಣಗಳನ್ನು ಸಂತೋಷದಿಂದ ಕಳೆಯಬೇಕು ಎಂಬುದು ಆ ಹೆತ್ತವರ ಉದ್ದೇಶವಾಗಿತ್ತು. ಸಾಯುವ ಮುನ್ನ ಆಕೆಯ ಆಸೆಗಳನ್ನು ಈಡೇರಿಸಬೇಕು. ಆಕೆಯ ಬದುಕಿನ ಪ್ರತಿಯೊಂದು ಗಳಿಗೆಯೂ ನೆನಪಿನಲ್ಲಿ ಉಳಿಯುವಂತೆ ಮಾಡಬೇಕು ಎಂದು ತೀರ್ಮಾನಿಸಿದ ಆ್ಯಂಡಿ ಮತ್ತು ಸ್ಯಾಮಿ ಈ ವಿವಾಹಕ್ಕೆ ಸಿದ್ಧತೆ ನಡೆಸಿ, ವಿವಾಹ ಕಾರ್ಯ ನೆರವೇರಿಸಿದ್ದರು.
ಪೋಪ್ಪಿ ನಮ್ಮನ್ನು ಬಿಟ್ಟು ಸ್ವರ್ಗಕ್ಕೆ ಹೋಗುತ್ತಾಳೆ, ಅಲ್ಲಿಂದ ಆಕೆ ನಕ್ಷತ್ರವಾಗುತ್ತಾಳೆ ಎಂದು ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ಈ ಹೆತ್ತವರು ಸಮಾಧಾನ ಹೇಳಿದ್ದಾರೆ. ಪೋಪ್ಪಿಯ ಜತೆಗಿನ ಪ್ರತೀ ಕ್ಷಣಗಳನ್ನು ಕಳೆಯುವಾಗ ಈ ದಂಪತಿ ಮನಸಲ್ಲೇ ಅಳುತ್ತಾ, ಪೋಪ್ಪಿಯ ನಗುವಿಗೆ ಜತೆಯಾಗುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com