ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಸೇರಿದ ಪದ 'ಅಯ್ಯೋ'

ಕರ್ನಾಟಕ ಮತ್ತು ದಕ್ಷಿಣ ಭಾರತದಲ್ಲಿ ಮಾತಿಗೆ ಮುಂಚೆ ಬಳಸಲಾಗುವ 'ಅಯ್ಯೋ' ಪದ ಈಗ ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಸೇರಿ ಸುದ್ದಿ ಮಾಡಿದೆ.
ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಸೇರಿದ ಪದ 'ಅಯ್ಯೋ'
ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಸೇರಿದ ಪದ 'ಅಯ್ಯೋ'
ನವದೆಹಲಿ: ಕರ್ನಾಟಕ ಮತ್ತು ದಕ್ಷಿಣ ಭಾರತದಲ್ಲಿ ಮಾತಿಗೆ ಮುಂಚೆ ಬಳಸಲಾಗುವ 'ಅಯ್ಯೋ' ಪದ ಈಗ ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಸೇರಿ ಸುದ್ದಿ ಮಾಡಿದೆ. 
ಇಂಗ್ಲಿಷ್ ಭಾಷೆಯ ಪದಗಳ ಅರ್ಥ ಮತ್ತು ಅದರ ಬಳಕೆಯ ಬಗ್ಗೆ ನಿಖರ ಮಾಹಿತಿ ನೀಡುವ ನಿಘಂಟು ಎಂದೇ ಪ್ರಖ್ಯಾತ ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು. 'ಅಯ್ಯೋ' ಪದ ಈಗ ಇಂಗ್ಲಿಷ್ ಭಾಷೆಯ ಮಾತುಕತೆಯಲ್ಲಿ ಲೀಲಾಜಾಲವಾಗಿ ಹೊಕ್ಕಿದ್ದು, ಅದನ್ನು ಈ ಪ್ರಖ್ಯಾತ ನಿಘಂಟು ಸೇರಿಸಿಕೊಂಡು ಪದಗಳ ಪಟ್ಟಿಯನ್ನು ವೃದ್ಧಿಸಿಕೊಂಡು ವಿಶಾಲಗೊಂಡಿದೆ. 
ದಕ್ಷಿಣ ಭಾರತ ಮತ್ತು ಶ್ರೀಲಂಕಾ ದಲ್ಲಿ ಅತಿ ಹೆಚ್ಚು ಬಳಸಲ್ಪಡುವ ಈ ಪದ, ಆಕ್ಸ್ಫರ್ಡ್ ನಿಘಂಟು ತಜ್ಞರು ಗಮನಿಸಿರುವಂತೆ 19 ನೇ ಶತಮಾನದ ಚೇಂಬರ್ಸ್ ಜರ್ನಲ್ ಆಫ್ ಪಾಪ್ಯೂಲರ್ ಲಿಟರೇಚರ್ ನಲ್ಲಿ ಮೊದಲಿಗೆ ಇಂಗ್ಲಿಷಿನಲ್ಲಿ ನಮೂದಿತವಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com