ದೇಶಸೇವೆಗಾಗಿ ಅಮೆರಿಕದ ಉದ್ಯೋಗ ತೊರೆದ ಕೂಲಿ ಕಾರ್ಮಿಕನ ಪುತ್ರ!

ವಿದೇಶದಲ್ಲಿ ದೊರೆತ ಲಕ್ಷಗಟ್ಟಲೆ ಸಂಬಳದ ಕೆಲಸ, ಐಐಎಂ ಇಂದೋರ್ ನಲ್ಲಿನ ಸೀಟ್ ಎಲ್ಲವನ್ನೂ ತೊರೆದು ದೇಶಸೇವೆಗಾಗಿ ಭಾರತೀಯ ಸೇನೆ ಸೇರಿದ ............
ಬರ್ನಾನ ಯಾದಗಿರಿ
ಬರ್ನಾನ ಯಾದಗಿರಿ
ಡೆಹರಾಡೂನ್: ವಿದೇಶದಲ್ಲಿ ದೊರೆತ ಲಕ್ಷಗಟ್ಟಲೆ ಸಂಬಳದ ಕೆಲಸ, ಐಐಎಂ ಇಂದೋರ್ ನಲ್ಲಿನ ಸೀಟ್ ಎಲ್ಲವನ್ನೂ ತೊರೆದು ದೇಶಸೇವೆಗಾಗಿ ಭಾರತೀಯ ಸೇನೆ ಸೇರಿದ ದೇಶಪ್ರೇಮಿಯೊಬ್ಬನ ಕಥೆ ಇಲ್ಲಿದೆ. ಕೂಲಿ ಕಾರ್ಮಿಕನೊಬ್ಬರ ಮಗನಾದ ಬರ್ನಾನ ಯಾದಗಿರಿ ಈ ಮಹಾನ್ ದೇಶಪ್ರೇಮಿ. 
ಹೈದರಾಬಾದ್‌ನ ಸಿಮೆಂಟ್‌ ಫ್ಯಾಕ್ಟರಿಯೊಂದರಲ್ಲಿ ದಿನಗೂಲಿ ನೌಕರನಾಗಿ ದುಡಿಯುತ್ತಿದ್ದ ಬರ್ನಾನ ಗುನ್ನಯ್ಯ ಅವರ ಮಗ ಇಂದು ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದಾರೆ. ಡೆಹರಾಡೂನ್ ನ ಭಾರತೀಯ ಮಿಲಿಟರಿ ಅಕಾಡೆಮಿಯ ಪಾಸಿಂಗ್‌ ಔಟ್‌ ಪರೇಡ್‌ನಲ್ಲಿ ಈತ ಸೇನಾಧಿಕಾರಿಯಾಗಿ ನೇಮಕ ಹೊಂದಿದ್ದಾರೆ.
ಹೈದರಾಬಾದ್ ನ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್ಫರ್ಮೇಶನ್‌ ಟೆಕ್ನಾಲಜಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಪದವಿ ಗಳಿಸಿರುವ ಯಾದಗಿರಿ ಅವರಿಗೆ ಅಮೆರಿಕದ  ಯೂನಿಯನ್‌ ಪೆಸಿಫಿಕ್‌ ರೈಲ್‌ ರೋಡ್‌ ಸಂಸ್ಥೆಯಲ್ಲಿ ಭಾರೀ ಸಂಬಳದ ಕೆಲಸ ಕಾದಿತ್ತು.  ಇದರೊಡನೆಯೇ ಐಐಎಂ ಇಂದೋರ್‌ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅವಕಾಶ ಒಲಿದು ಬಂದಿತ್ತು.  ಆದರೆ ಯಾದಗಿರಿಗೆ ಇದಾವುದರ ಬಗೆಗೆ  ಆಸಕ್ತಿಯೂ ಇರಲಿಲ್ಲ. ದೇಶ ಸೇವೆಗಾಗಿ ತನ್ನ ಜೀವ ಮುಡಿಪಾಗಿದೆ ಎಂದು ನಂಬಿದ ಯಾದಗಿರಿ ತಾವು ಐಎಂಎಯ ತಾಂತ್ರಿಕ ಪದವೀಧರ ಕೋರ್ಸ್‌ನಲ್ಲಿ ಮೊದಲಿಗರಾಗಿ ಬೆಳ್ಳಿಯ ಪದಕ ಗಳಿಸಿ ಭಾರತೀಯ ಸೇನೆಯ ಎಂಜಿನಿಯರಿಂಗ್ ವಿಭಾಗಕ್ಕೆ  ಸೇಪಡೆಯಾಗಿದ್ದಾರೆ.
"ನಾನೊಬ್ಬ ಜವಾನನಾಗಿ ಸೇನಾಪಡೆ ಸೇರುತ್ತಿದ್ದೇನೆ ಎಂದು ಭಾವಿಸಿದ್ದ ನನ್ನ ತಂದೆಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು  ಸೇನೆ ಸೇರುವ ದೊಡ್ಡ ತಪ್ಪು ಮಾಡುತ್ತಿದ್ದಿ ಎಂದು ಎಚ್ಚರಿಸಿದ್ದರು.ಆದರೆ ಸೇನಾಧಿಕಾರಿಯಾಗಿ ಬೆಳ್ಳಿ ಪದಕದೊಂದಿಗೆ ಬಂದ ಮಗನನ್ನು ಕಂದ ಅವರಿಗೆ ಆದಸಂತಸ ಮಾತಿಗೆ ನಿಲುಕದಾಗಿದೆ" ಯಾದಗಿರಿ ತಮ್ಮ ಸಂತಸವನ್ನು ಹಂಚಿಕೊಂದರು. 
"ನನಗೆ ಹಣ ಮುಖ್ಯವಲ್ಲ. ಕಾರ್ಪೋರೇಟ್​ ಉದ್ಯೋಗಕ್ಕೆ ಸೇರಿದ್ದರೆ ನಾನು ಹಣ ಗಳಿಸುತ್ತಿದ್ದೆ. ಆದರೆ ನಮ್ಮ ದೇಶಕ್ಕೆ  ಸೇವೆ ಸಲ್ಲಿಸುವುದರಲ್ಲಿರುವ ಸಂತೃಪ್ತಿ ಸಿಕ್ಕುತ್ತಿರಲಿಲ್ಲ" ಎನ್ನುವ ಈ ಅಪೂರ್ವ ಸೇಶಪ್ರೇಮಿಗೆ ಒಂದು ಸಲಾಂ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com