ವಿಶ್ವದ 8 ನೇ ಅದ್ಭುತವಾಗಲಿದೆಯಾ ಪಾಕಿಸ್ತಾನದಲ್ಲಿರುವ ಈ ಸ್ಮಾರಕ!
ವಿಶೇಷ
ವಿಶ್ವದ 8 ನೇ ಅದ್ಭುತವಾಗಲಿದೆಯಾ ಪಾಕಿಸ್ತಾನದಲ್ಲಿರುವ ಈ ಸ್ಮಾರಕ?
ಪಾಕಿಸ್ತಾನದಲ್ಲಿರುವ ಕನಿಷ್ಕ ಸ್ತೂಪವನ್ನು ವಿಶ್ವದ 8 ನೇ ಅದ್ಭುತವನ್ನಾಗಿ ಘೋಷಿಸಲು ವಿಶ್ವಸಂಸ್ಥೆಯ ಸಾಂಸ್ಕೃತಿಕ ಅಂಗ ಯುನೆಸ್ಕೋಗೆ ಒತ್ತಡ ಹೇರುವಂತೆ ಅಮೆರಿಕ ಮೂಲದ ಇತಿಹಾಸಕಾರ...
ಪೇಶಾವರ್: ಪಾಕಿಸ್ತಾನದಲ್ಲಿರುವ ಕನಿಷ್ಕ ಸ್ತೂಪವನ್ನು ವಿಶ್ವದ 8 ನೇ ಅದ್ಭುತವನ್ನಾಗಿ ಘೋಷಿಸಲು ವಿಶ್ವಸಂಸ್ಥೆಯ ಸಾಂಸ್ಕೃತಿಕ ಅಂಗ ಯುನೆಸ್ಕೋಗೆ ಒತ್ತಡ ಹೇರುವಂತೆ ಅಮೆರಿಕ ಮೂಲದ ಇತಿಹಾಸಕಾರ ಪಾಕಿಸ್ತಾನ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕನಿಷ್ಕ ಸ್ತೂಪ ಬೌದ್ಧ ಸ್ಮಾರಕವಾಗಿದ್ದು, ಕನಿಷ್ಕ ವಿಹಾರದ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಇತಿಹಾಸಕಾರ ಅಜ್ಮದ್ ಹುಸೇನ್, ಬೌದ್ಧ ಸ್ತೂಪ ನಿರ್ಮಾಣದ ಶೈಲಿಯಿಂದ ಅದನ್ನು ವಿಶ್ವದ 8 ನೇ ಸ್ಮಾರಕವಾಗಲು ಅರ್ಹವಾಗಿದೆ ಎಂದು ಹೇಳಿದ್ದಾರೆ.
ಸ್ತೂಪವನ್ನು ಅದ್ಭುತ ಸ್ಮಾರಕವನ್ನಾಗಿ ಘೋಷಿಸಲು ಯುನೆಸ್ಕೋ ಜೊತೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅಜ್ಮದ್ ಹುಸೇನ್ ಹೇಳಿದ್ದಾರೆ. ಪೇಶಾವರ ಮೂಲದವರಾದ ಅಮೆರಿಕ ಇತಿಹಾಸಕಾರ ಅಜ್ಮದ್ ಹುಸೇನ್, ಇತಿಹಾಸ, ಸಂಸ್ಕೃತಿ, ಧಾರ್ಮಿಕತೆಗೆ ಸಂಬಂಧಿಸಿದಂತೆ ಈ ವರೆಗೂ 16 ಪುಸ್ತಕಗಳನ್ನು ಬರೆದಿದ್ದಾರೆ.
ಪೇಶಾವರದ ಗಂಜ್ ಗೇಟ್ ಬಳಿ ಇರುವ ಸ್ತೂಪವನ್ನು ಕ್ರಿ.ಶ 1 ನೇ ಶತಮಾನದಲ್ಲಿ ಕುಶಾನ ಕನಿಷ್ಕ ದೊರೆಯ ಆಡಳಿತಾವಧಿಯಲ್ಲಿ ನಿರ್ಮಿಸಲಾಗಿತ್ತು. ಪಾಕಿಸ್ತಾನದಲ್ಲಿರುವ ಬೌದ್ಧ ಸ್ತೂಪದ ಬಗ್ಗೆ ಚೀನಾ ಯಾತ್ರಿಕ ಹ್ಯುಯೆನ್ ಸಾಂಗ್ ಸಹ ವಿವರಣೆ ನೀಡಿದ್ದು, ಏಷ್ಯಾದ ಈ ಭಾಗದಲ್ಲಿರುವ ಅತ್ಯಂತ ಎತ್ತರದ ವಾಸ್ತುಶಿಲ್ಪದ ಕಟ್ಟಡವಾಗಿದೆ ಆದ್ದರಿಂದ ಈ ಸ್ಮಾರಕದ ಬಗ್ಗೆ ಅರಿವು ಮೂಡಿಸಬೇಕೆಂದು ಅಜ್ಮದ್ ಹುಸೇನ್ ಕರೆ ನೀಡಿದ್ದಾರೆ.

