ಶಾಲೆಯ ಎಲ್ಲ ಮಕ್ಕಳಿಗೂ ಬೈಸಿಕಲ್ ಕೊಡಿಸಲು ೮೦ ಸಾವಿರ ಡಾಲರ್ ಚಂದಾ ಎತ್ತಿದ ಶಿಕ್ಷಕಿ

ತಮ್ಮ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಟ್ಟು ೬೫೦ ಬೈಸಿಕಲ್ ಗಳನ್ನು ಕೊಡಿಸಲು ಸೌತ್ ಕೆರೊಲಿನಾದ ಶಿಕ್ಷಕಿ ೮೦ ಸಾವಿರ ಡಾಲರ್ ಗಿಂತಲೂ ಹೆಚ್ಚು ಮೊತ್ತವನ್ನು ಚಂದಾ ಎತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನಾರ್ಥ್ ಚಾರ್ಲೆಸ್ಟನ್: ತಮ್ಮ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಟ್ಟು ೬೫೦ ಬೈಸಿಕಲ್ ಗಳನ್ನು ಕೊಡಿಸಲು ಸೌತ್ ಕೆರೊಲಿನಾದ ಶಿಕ್ಷಕಿ ೮೦ ಸಾವಿರ ಡಾಲರ್ ಗಿಂತಲೂ ಹೆಚ್ಚು ಮೊತ್ತವನ್ನು ಚಂದಾ ಎತ್ತಿದ್ದಾರೆ. 
ನಾರ್ಥ್ ಚಾರ್ಲೆಸ್ಟನ್ ನ ಪೆಪ್ಪರ್ ಹಿಲ್ ಎಲಿಮೆಂಟರಿ ಶಾಲೆಯಲ್ಲಿ ಕೇಟಿ ಬ್ಲಾಮ್ ಕ್ವಿಸ್ಟ್ ಶಿಕ್ಷಕಿ. ಕಳೆದ ವರ್ಷ ಕಾರ್ಮಿಕರ ದಿನಾಚರಣೆಯ ನಂತರ ಸುಮಾರು ೬೫ ಸಾವಿರ ಡಾಲರ್ ಚಂದಾ ಎತ್ತಲು ಅಂತರ್ಜಾಲದಲ್ಲಿ ಅಭಿಯಾನ ಪ್ರಾರಂಭಿಸಿದ್ದರು ಎಂದು ಡಬ್ಲ್ಯೂಸಿಐವಿ- ಟಿವಿ ವರದಿ ಮಾಡಿದೆ. ಒಬ್ಬ ವಿದ್ಯಾರ್ಥಿಗೆ ಸೈಕಲ್ ಅವಶ್ಯಕತೆಯಿದ್ದು, ಆದರೆ ಅದನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಇಲ್ಲವಾಗಿತ್ತಾದ್ದರಿಂದ ನನಗೆ ಈ ಐಡಿಯಾ ಹೊಳೆಯಿತು ಎಂದು ಬ್ಲಾಮ್ ಕ್ವಿಸ್ಟ್ ಹೇಳಿದ್ದಾರೆ. 
ಹಲವು ದೊಡ್ಡ ಸಂಸ್ಥೆಗಳ ಸಹಾಯ ಮತ್ತು ಟಿವಿ ನಿರೂಪಕ ಸ್ಟಿವ್ ಹಾರ್ವೆ ಅವರ ಸಹಾಯದಿಂದಾಗಿ ಈ ಐಡಿಯಾ ನಂತರ ವೈರಲ್ ಆಗಿ ಬೃಹತ್ ಆಗಿ ಬೆಳೆದಿದೆ ಎಂದು ತಿಳಿದುಬಂದಿದೆ. 
ಶಾಲೆಯ ನಿಲುಗಡೆ ತಾಣದಲ್ಲಿ ಸೈಕಲ್ ಗಳನ್ನು ನಿಲ್ಲಿಸಿ ಬ್ಲಾಮ್ ಕ್ವಿಸ್ಟ್ ವಿದ್ಯಾರ್ಥಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com