ಮೈಸೂರು: ಲಘು ವಿಮಾನದಲ್ಲಿ 80 ದಿನಗಳ ವಿಶ್ವ ಪರ್ಯಟನೆಗೆ ತಾಯಿ-ಮಗಳು ಸಜ್ಜು

ಮೈಸೂರು ಮೂಲದ ತಾಯಿ-ಮಗಳು ಲಘು ವಿಮಾನದಲ್ಲಿ ಒಟ್ಟು 80 ದಿನಗಳಲ್ಲಿ 50 ಸಾವಿರ ಕಿ.ಮೀ ಪ್ರಯಾಣಿಸಿ, ವಿಶ್ವ ಪರ್ಯಟನೆ ನಡೆಸಲು ಮುಂದಾಗಿದ್ದಾರೆ
ಮೈಸೂರು ತಾಯಿ-ಮಗಳಿಂದ ಲಘು ವಿಮಾನದಲ್ಲಿ ವಿಶ್ವ ಪರ್ಯಟನೆ
ಮೈಸೂರು ತಾಯಿ-ಮಗಳಿಂದ ಲಘು ವಿಮಾನದಲ್ಲಿ ವಿಶ್ವ ಪರ್ಯಟನೆ
ಮೈಸೂರು: ಮೈಸೂರು ಮೂಲದ ತಾಯಿ-ಮಗಳು ಲಘು ವಿಮಾನದಲ್ಲಿ  ಒಟ್ಟು 80 ದಿನಗಳಲ್ಲಿ 50 ಸಾವಿರ ಕಿ.ಮೀ ಪ್ರಯಾಣಿಸಿ, ವಿಶ್ವ ಪರ್ಯಟನೆ ನಡೆಸಲು ಮುಂದಾಗಿದ್ದಾರೆ
ಮೈಸೂರಿನ ಆಡ್ರೆ ದೀಪಿಕಾ ಮಾಬೆನ್‌ ಮತ್ತು ಆಕೆಯ ಮಗಳು ಅಮಿ ಮೆಹ್ತಾ ಈ ದಾಖಲೆಯ ಪಯಣಕ್ಕೆ ಮುಂದಾಗಿದ್ದು, ಬೆಂಗಳೂರಿನ ಜಕ್ಕೂರು ವಾಯುನೆಲೆಯಲ್ಲಿ ಇವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. 2018ರ ಫೆಬ್ರವರಿಯಲ್ಲಿ ಆರಂಭವಾಗಲಿರುವ ಇವರ ಪ್ರವಾಸದಲ್ಲಿ ಹವ್ಯಾಸಿ ಪೈಲಟ್‌ ಆಗಿರುವ ದೀಪಿಕಾ ಮತ್ತು ಆಕೆಯ ಮಗಳು, ಮಹಿಳಾ ಸಬಲೀಕರಣ ಕುರಿತ ಜಾಗೃತಿಗಾಗಿ ಈ ಪ್ರವಾಸ ಕೈಗೊಳ್ಳಲಿದ್ದಾರೆ.ೀ ಮುಖೇನ ದಾಖಲೆಯ ವಿಶ್ವ ಪರ್ಯಟನೆ ನಡೆಸುವ ಮೊದಲ ಭಾರತೀಯ ಮಹಿಳೆಯರು ಎನ್ನುವ ಕೀರ್ತಿ ಇವರದಾಗಲಿದೆ.
"ನಾನು ಹಲವು ಬಾರಿ ಲಘು ವಿಮಾನದಲ್ಲಿ ಹಾರಾಟ ನಡೆಸಿದ್ದೇನೆ. ನಮ್ಮ ಪಯಣ ಜಕ್ಕೂರಿನಿಂದ ಪ್ರಾರಂಭವಾಗಿ ಜಕ್ಕೂರಿನಲ್ಲಿಯೇ ಕೊನೆಗೊಳ್ಳಲಿದೆ. ಈ ಪ್ರವಾಸಕ್ಕೆ ನನಗೆ ನನ್ನ ಮಗಳು ಜತೆಯಾಗಲಿದ್ದಾಳೆ"  ದೀಪಿಕಾ  ಹೇಳಿದ್ದಾರೆ. "ತಾಯಿ ಜತೆಗೆ ವಿಶ್ವಪರ್ಯಟನೆ ಮಾಡುತ್ತಿರುವುದಕ್ಕೆ ಪುಳಕವಾಗುತ್ತಿದೆ" ಎಂದು ಅವರ ಪುತ್ರಿ ಅಮಿ ಸಂತಸದಿಂದ ನುಡಿಯುತ್ತಾರೆ. ಇವರು ಫೋಟೋಗ್ರಫಿ ಕಲಿಯುತ್ತಿದ್ದಾರೆ.
ಸ್ಲೊವೇನಿಯಾ ದೇಶದ ಸೈಸನ್‌ ಪಿಪಿಸ್ಟ್ರೆಲ್‌-912 ಎಂಜಿನ್‌ ನ ವಿಮಾನದಲ್ಲಿ ಇವರು ಪ್ರಯಾಣ ನಡೆಸಲಿದ್ದು ವಿಮಾನ 4ರಿಂದ 5ಗಂಟೆ ನಿರಂತರವಾಗಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಗಂಟೆಗೆ ಸರಾಸರಿ 110 ಕಿ.ಮೀ ವೇಗದಲ್ಲಿ ವಿಮಾನವು ಸಂಚರಿಸಲಿದೆ.
ತಾಯಿ ಮಗಳ ಈ ಸಾಹಸಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಬಲ ನೀಡಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com