ಕಲಬುರಗಿ : ರಾಜ್ಯದ ಈ ಪಶುವೈದ್ಯರ ಬಳಿ ಇವೆ 29 ರಾಷ್ಟ್ರದ ಗಿಣಿಗಳು!

ಕಲಬುರಗಿ ಮೂಲದ ಪಶು ವೈದ್ಯರೊಬ್ಬರು ಸುಮಾರು 29 ರಾಷ್ಟ್ರದ ವಿವಿಧ ಪ್ರಬೇಧದ ಗಿಣಿಗಳನ್ನು ಸಂಗ್ರಹಿಸಿದ್ದಾರೆ.ಈ ಎಲ್ಲಾ ಪಕ್ಷಿಗಳನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಕುಟುಂಬ ಸದಸ್ಯರಂತೆ ಅವುಗಳ ಪೋಷಣೆ ಮಾಡುತ್ತಿದ್ದಾರೆ.
ಪಶು ವೈದ್ಯ ವಿಶ್ವನಾಥ್ ಹೆಗ್ಗಾ
ಪಶು ವೈದ್ಯ ವಿಶ್ವನಾಥ್ ಹೆಗ್ಗಾ

ಕಲುಬರಗಿ:  ಕಲಬುರಗಿ ಮೂಲದ ಪಶು ವೈದ್ಯರೊಬ್ಬರು ಸುಮಾರು 29 ರಾಷ್ಟ್ರದ ವಿವಿಧ ಪ್ರಬೇಧದ ಗಿಣಿಗಳನ್ನು ಸಂಗ್ರಹಿಸಿದ್ದಾರೆ.ಈ ಎಲ್ಲಾ ಪಕ್ಷಿಗಳನ್ನು ತಮ್ಮ ಮನೆಯಲ್ಲಿಯೇ  ಇಟ್ಟುಕೊಂಡು ಕುಟುಂಬ ಸದಸ್ಯರಂತೆ ಅವುಗಳ ಪೋಷಣೆ ಮಾಡುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಪಶು ವೈದ್ಯಕೀಯದಲ್ಲಿ ಸರ್ಜನ್ ಸೇವೆ ಆಗಿ ಸೇವೆ ಸಲ್ಲಿಸುತ್ತಿರುವ  ವಿಶ್ವನಾಥ್ ಹೆಗ್ಗಾ, ನ್ಯೂಜಿಲ್ಯಾಂಡ್ ನಿಂದ  ಗಿಣಿಗಳನ್ನು ತಂದ ನಂತರ ಅವುಗಳನ್ನು ಸಾಕಲು ಆರಂಭಿಸಿದ್ದು, ಪ್ರಸ್ತುತ 29 ರಾಷ್ಟ್ರದ ಬಗೆಬಗೆಯ ಗಿಣಿಗಳನ್ನು ಸಾಕುತ್ತಿರುವುದಾಗಿ  ಹೇಳುತ್ತಾರೆ.

ಪಕ್ಷಿಗಳನ್ನು ಹೇಗೆ ಪೋಷಣೆ ಮಾಡಲಾಗುತ್ತಿದೆ. ಈ ರೀತಿಯ ಹವ್ಯಾಸಕ್ಕೆ ತಮ್ಮ ಕುಟುಂಬದವರ ಪ್ರತಿಕ್ರಿಯೆ ಯಾವ ರೀತಿಯಲ್ಲಿ ಇರುತ್ತದೆ ಎಂಬ ಬಗ್ಗೆ ವಿಶ್ವನಾಥ್ ಹೆಗ್ಗಾ ಹೇಳಿಕೊಂಡಿದ್ದಾರೆ.

ಈ ಗಿಣಿಗಳಿಗೆ ಬ್ರೆಜಿಲ್ ನಿಂದ ತಂದಿರುವ ಸೆರ್ಲಾಕ್ ನ್ನು  ಪ್ರತಿದಿನ ನಾಲ್ಕು ಬಾರಿ ಆಹಾರವಾಗಿ ನೀಡಲಾಗುತ್ತದೆ. ಪ್ರತಿಯೊಂದು ಗಿಣಿಗಳಿಗೂ ಹೆಸರನ್ನು ಇಡಲಾಗಿದ್ದು, ಆ ಹೆಸರಿನಿಂದ ಕರೆದಾಗ ಗಿಣಿಗಳು ಪ್ರತಿಕ್ರಿಯಿಸುತ್ತವೆ. ತಮ್ಮ ಇಡೀ ಕುಟುಂಬವೇ ಅವುಗಳನ್ನು ಪ್ರೀತಿಸುವುದಾಗಿ ಅವರು ಸಂತಸ ವ್ಯಕ್ತಪಡಿಸುತ್ತಾರೆ.

ಅಲ್ಲದೇ ಮನೆಯಲ್ಲಿಯೇ ಪಕ್ಷಿಗಳ ಬಗ್ಗೆ ತರಬೇತಿ ನೀಡುತ್ತಿರುವುದಾಗಿಯೂ ವಿಶ್ವನಾಥ್ ಹೆಗ್ಗಾ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com