ವಿಮಾನದಲ್ಲಿ ಫ್ರಾನ್ಸ್​ ಪ್ರಜೆಯ ಜೀವ ಉಳಿಸಿದ ಮೈಸೂರಿನ ವೈದ್ಯ

ಏರ್ ಫ್ರಾನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮೈಸೂರು ಮೂಲದ ವೈದ್ಯರೊಬ್ಬರು, ವಿಮಾನದಲ್ಲಿದ್ದ ಫ್ರಾನ್ಸ್ ಪ್ರಜೆಯೊಬ್ಬರ
ಪ್ರಭುಲಿಂಗಸ್ವಾಮಿ
ಪ್ರಭುಲಿಂಗಸ್ವಾಮಿ
ಮೈಸೂರು: ಏರ್ ಫ್ರಾನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮೈಸೂರು ಮೂಲದ ವೈದ್ಯರೊಬ್ಬರು, ವಿಮಾನದಲ್ಲಿದ್ದ ಫ್ರಾನ್ಸ್ ಪ್ರಜೆಯೊಬ್ಬರ ಜೀವ ಉಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
69 ವರ್ಷದ ಡಾ. ಪ್ರಭುಲಿಂಗಸ್ವಾಮಿ ಅವರು ಕಳೆದ ತಿಂಗಳು ನವೆಂಬರ್ 13ರಂದು ನ್ಯೂಯಾರ್ಕ್ ನಿಂದ ಬೆಂಗಳೂರಿಗೆ ಏರ್ ಫ್ರಾನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಫ್ರಾನ್ಸ್ ಪ್ರಜೆಯೊಬ್ಬರಿಗೆ ಸಿಂಕೋಪಾಲ್ ಸಮಸ್ಯೆ (ಹೃದಯ ಬಡಿತ ಮತ್ತು ರಕ್ತದೊತ್ತಡ ಏಕಾಏಕಿ ಕಡಿಮೆಯಾಗಿ ಮೂರ್ಛೆ ಹೋಗುವುದು) ಕಾಣಿಸಿಕೊಂಡಿದೆ. ಅದನ್ನು ಗಮನಿಸಿದ ಮೈಸೂರಿನ ಮಕ್ಕಳ ತಜ್ಞರಾದ ಡಾ. ಪ್ರಭುಲಿಂಗಸ್ವಾಮಿ ತಕ್ಷಣ ಫ್ರಾನ್ಸ್ ಪ್ರಜೆಗೆ ವಿಮಾನದಲ್ಲೇ ಚಿಕಿತ್ಸೆ ನೀಡಿದ್ದಾರೆ. ಇದರಿಂದ ಫ್ರಾನ್ಸ್ ಪ್ರಜೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಮಸ್ಯೆಯಿಂದ ಪಾರಾಗುತ್ತಲೇ ಫ್ರಾನ್ಸ್​ ಪ್ರಜೆ ಹಾಗೂ ವಿಮಾನದ ಕಮಾಂಡೋಗಳು ವೈದ್ಯ ಪ್ರಭುಲಿಂಗ ಸ್ವಾಮಿ ಅವರಿಗೆ ಅಪ್ಪುಗೆ ಪ್ರಶಂಸೆ ನೀಡಿದ್ದಾರೆ. ನಂತರ ವಿಷಯ ತಿಳಿದ ಏರ್​ ಫ್ರಾನ್ಸ್​ ಸಂಸ್ಥೆ ಪ್ರಭುಲಿಂಗ ಸ್ವಾಮಿ ಅವರನ್ನು ಗೌರವಿಸಿದೆ. ನೂರು ಯೂರೋ ಬಹುಮಾನ ನೀಡಿ ಸನ್ಮಾನಿಸಿದೆ. ಅಲ್ಲದೆ, ಇ-ಮೇಲ್​ ಮೂಲಕ ಧನ್ಯವಾದ ಪತ್ರ ಕಳುಹಿಸಿದೆ.
ಇನ್ನು ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿದ ವೈದ್ಯ ಪ್ರಭುಲಿಂಗಸ್ವಾಮಿ ಅವರು, ನಾನು ನ್ಯೂಯಾರ್ಕ್ ನಿಂದ ಬೆಂಗಳೂರಿಗೆ ಬರುತ್ತಿದ್ದೆ. ವಿಮಾನ ಪ್ಯಾರಿಸ್ ನಿಂದ ಟೇಕ್ ಆಫ್ ಆಗಿ ಎರಡು ಗಂಟೆಗಳ ನಂತರ 6 ಅಡಿ ಎತ್ತರದ ಪ್ರಯಾಣಿಕರೊಬ್ಬರು ಇದ್ದಕ್ಕಿದ್ದಂತೆ ಕುಸಿದುಬಿದ್ದರು. ವಿಮಾನದ ಸಿಬ್ಬಂದಿ ಆತನ ಚೇತರಿಕೆಗೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದರು. ಆದರೆ ಯಾವುದೇ ಪ್ರಯೋಜನವಾಗದಿದ್ದಾಗ, ಪ್ರಯಾಣಿಕರಲ್ಲಿ ಯಾರಾದರೂ ವೈದ್ಯರು ಅಥವಾ ನರ್ಸ್ ಗಳಿದ್ದರೆ ಕುಸಿದುಬಿದ್ದಿರುವ ವ್ಯಕ್ತಿಯ ಚೇತರಿಕೆಗೆ ಸಹಾಯ ಮಾಡಿ ಎಂದು ಕೇಳಿಕೊಂಡರು. ತಕ್ಷಣ ನಾನು ಸೂಕ್ತ ಚಿಕಿತ್ಸೆ ನೀಡಿದೆ. ನರ್ಸ್ ವೊಬ್ಬರು ಆಕ್ಸಿಜನ್ ನೀಡಿದರು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com