ಆರೋಗ್ಯ ವೆಚ್ಚಗಳಿಂದ ಭಾರತೀಯರ ಆರ್ಥಿಕ ಸ್ಥಿತಿ ಕ್ಷೀಣ: ಅಧ್ಯಯನ ವರದಿ

ಪ್ರತಿವರ್ಷ ಲಕ್ಷಾಂತರ ಭಾರತೀಯರು ತೀವ್ರ ಬಡತನಕ್ಕೆ ಹೋಗಲು ಹೃದ್ರೋಗ, ಮೂತ್ರಪಿಂಡ ಮತ್ತು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರತಿವರ್ಷ ಲಕ್ಷಾಂತರ ಭಾರತೀಯರು ತೀವ್ರ ಬಡತನಕ್ಕೆ ಹೋಗಲು ಹೃದ್ರೋಗ, ಮೂತ್ರಪಿಂಡ ಮತ್ತು ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳು ಕಾರಣವಾಗಿವೆ. ಜನರು ಹಣವಿಲ್ಲದೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ, ಪ್ರತಿವರ್ಷ ಲಕ್ಷಾಂತರ ರೂಪಾಯಿ ಹಣವನ್ನು ಭಾರತೀಯರು ಖರ್ಚು ಮಾಡಬೇಕಾಗುತ್ತದೆ ಎಂದು ಆಸ್ಪತ್ರೆಗಳಲ್ಲಿ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.

ಜಠರಗರುಳಿನ ಅಸ್ವಸ್ಥತೆಗಳು, ನರ ವೈಜ್ಞಾನಿಕ ಮತ್ತು ಮಸ್ಕ್ಯುಲೋಸ್ಕೆಲಿಟಲ್ ಪರಿಸ್ಥಿತಿಗಳು, ಗಾಯಗಳು, ಕಾಮಾಲೆ, ಮಧುಮೇಹ, ಉಸಿರಾಟದ ಕಾಯಿಲೆಗಳು, ಆಸ್ತಮಾ ಮತ್ತು ಕ್ಷಯಗಳಂತಹ ಕಾಯಿಲೆಗಳಿಗೆ ಚಿಕಿತ್ಸೆಗೆ ಹಣ ಭರಿಸಲಾಗದೆ ಜನರು ತಮ್ಮ ಆಸ್ತಿಪಾಸ್ತಿ, ಮನೆಮಠಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿಯುಂಟಾಗುತ್ತದೆ ಎನ್ನುತ್ತದೆ ಅಧ್ಯಯನ.

ಮುಂಬೈ ಮೂಲದ ಜನಸಂಖ್ಯಾ ವಿಜ್ಞಾನಗಳ ಅಂತಾರಾಷ್ಟ್ರೀಯ ಸಂಸ್ಥೆ ನಡೆಸಿರುವ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ. ಭಾರತದಲ್ಲಿ ಆಸ್ಪತ್ರೆಯ ಸರಾಸರಿ ವೆಚ್ಚ 19,210 ರೂಪಾಯಿಗಳಾಗಿದ್ದು ಕ್ಯಾನ್ಸರ್ ಗೆ 57,232 ರೂಪಾಯಿ ಮತ್ತು ಹೃದ್ರೋಗಗಳಿಗೆ ಸರಾಸರಿ 40,947 ರೂಪಾಯಿ ವೆಚ್ಚ ತಗುಲುತ್ತದೆ ಎಂದು ಅಧ್ಯಯನ ನಡೆಸಿದ ಸಂಶೋಧಕರು ಹೇಳುತ್ತಾರೆ.

ಕಳೆದ ವರ್ಷ ವಿಶ್ವ ಆರೋಗ್ಯ ಸಂಘಟನೆ ಬಿಡುಗಡೆ ಮಾಡಿರುವ ವರದಿಯಂತೆ, ವಿಶ್ವದಲ್ಲಿ ಪ್ರತಿವರ್ಷ ಬಡತನದ ಕೂಪಕ್ಕೆ ತಳ್ಳುವ ಅಂದಾಜು 100 ದಶಲಕ್ಷ ಜನರಲ್ಲಿ ಅರ್ಧದಷ್ಟು ಮಂದಿ ಭಾರತೀಯರಾಗಿದ್ದಾರೆ. ಇದಕ್ಕೆ ಆರೋಗ್ಯ ಸೇವೆಯನ್ನು ಜನರಿಗೆ ಭರಿಸಲು ಸಾಧ್ಯವಾಗದಿರುವುದು ಕಾರಣವಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶ ಪ್ರಕಾರ, ಸುಮಾರು 4.9 ಕೋಟಿ ಭಾರತೀಯರು ವಾರ್ಷಿಕವಾಗಿ ದುರಂತ ಆರೋಗ್ಯ ಸಮಸ್ಯೆಗಳಿಗೆ ಹಣ ಖರ್ಚು ಮಾಡುತ್ತಿದ್ದು ಈ ಪರಿಸ್ಥಿತಿಗೆ ಕಾರಣವಾಗುವ ಕಾಯಿಲೆಗಳು ಯಾವ್ಯಾವುವು ಎಂದು ಪತ್ತೆಯಾಗಿಲ್ಲ ಎನ್ನುತ್ತಾರೆ ಅಧ್ಯಯನದ ಸಹ ಲೇಖಕ ಅಂಶುಲ್ ಕಸ್ಟೊರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com