ವಿಚಿತ್ರ ಸತ್ಯ: ತನ್ನನ್ನು ತಾನೇ ಸ್ವಯಂ ವಿವಾಹವಾದ ಆಕ್ಸ್ ಫರ್ಡ್ ವಿದ್ಯಾರ್ಥಿನಿ!

ಪೋಷಕರ ಒತ್ತಡಕ್ಕೆ ಮಣಿದು ಹೆಚ್ಚಿನ ಯುವತಿಯರು ತ್ಮಗಿಷ್ಟವಿಲ್ಲದಿದ್ದರೂ ತಂದೆ ತಾಯಿಗಳ ಆಸ್ಯೆ ಹುಡುಗನನ್ನೇ ಕೈಹಿಡಿಯುವುದು ಕಾಣುತ್ತೇನೆ. ಈ ಸಂದರ್ಭ ಅನೇಕರಿಗೆ ಪೋಷಕರ ಈ ಒತ್ತಡ.....
ಲುಲು ಜೆಮಿಮ್ಹಾ
ಲುಲು ಜೆಮಿಮ್ಹಾ
ಪೋಷಕರ ಒತ್ತಡಕ್ಕೆ ಮಣಿದು ಹೆಚ್ಚಿನ ಯುವತಿಯರು ತ್ಮಗಿಷ್ಟವಿಲ್ಲದಿದ್ದರೂ ತಂದೆ ತಾಯಿಗಳ ಆಸ್ಯೆ ಹುಡುಗನನ್ನೇ ಕೈಹಿಡಿಯುವುದು ಕಾಣುತ್ತೇನೆ. ಈ ಸಂದರ್ಭ ಅನೇಕರಿಗೆ ಪೋಷಕರ ಈ ಒತ್ತಡ, ಹಿಂಸೆಯು ಬಹುದೊಡ್ಡ ನೋವಿಗೆ ಕಾರಣವಾಗುತ್ತದೆ. ಆದರೆ ಇಲ್ಲೊಬ್ಬ ಯುವತಿ ತಮ್ಮ ಜೀವನದಲ್ಲಿ ಮದುವೆಗೆ ಹೆಚ್ಚಿನ ಆದ್ಯತೆ ಎನ್ನುವುದನ್ನು ಸಾಬೀತುಗೊಳಿಸುವವರಲ್ಲಿಒ ವಿಭಿನ್ನವಾಗಿ ನಿಂತಿದ್ದಾಳೆ. ಆಕೆ ತನ್ನನ್ನು ತಾನೇ ವಿವಾಹವಾಗಿದ್ದಾಳೆ!
ಉಗಾಂಡಾ ಮೂಲದ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಲುಲು ಜೆಮಿಮ್ಹಾ (32) ಈ ರೀತಿ ತನ್ನನ್ನು ತಾನೇ ಸ್ವಯಂ ವಿವಾಹವಾಗುವ ನಿರ್ಧಾರ ತೆಗೆದುಕೊಂಡ ಮಹಿಳೆ.
32ನೆಯ ಹುಟ್ಟುಹಬ್ಬದಂದು ಲುಲು ಮದುವೆ ಸಮಾರಂಭ ಆಯೋಜಿಸಿದ್ದಾರೆ. ಇದಕ್ಕಾಗಿ ಅವರು ಸಾಮಾನ್ಯವಾಗಿ ಎಲ್ಲರೂ ಮಾಡುವಂತೆ ಆಮಂತ್ರಣ ಪತ್ರಿಕೆ, ಮದುವೆ ವೇದಿಕೆ ಸೇರಿ ಎಲ್ಲಾ ತಯಾರಿಗಳನ್ನೂ ನಡೆಸಿದ್ದರು. ಆಗಸ್ಟ್ 27 ರಂದು ನಡೆದ ವಿವಾಹ ಸಮಾರಂಭದಲ್ಲಿ ಸುಮಾರು ಎರಡು ಫೌಂಡ್ ವೆಚ್ಚ ಮಾಡಿ ಟ್ಯಾಕ್ಸಿ ವ್ಯವಸ್ಥೆ ಮಾಡಲಾಗಿತ್ತು.ವೆಬ್ ಡಿಸೈನರ್ ಆಗಿ ಕೆಲಸ ಮಾಡುವ  ಆಕೆಯ ಗೆಳೆಯ ಆಮಂತ್ರಣ ಪತ್ರಿಕೆ ರಚಿಸಿ ಹಂಚಿಕೆ ಮಾಡಿದ್ದನು.ಅಲ್ಲದೆ ಆಕೆಯ ಗೆಳೆಯರೇ ಅವಳ ಮದುವೆ ದಿನದ ಉಡುಗೆಯ ಬಾಡಿಗೆಯನ್ನೂ ನೀಡಿದ್ದಾರೆ.ಆಕೆಯ ಸೋದರ ಅವಳಿಗಾಗಿ ಕೇಕ್ ತಯಾರಿಸಿದ್ದನು. 
ಇಷ್ಟೆಲ್ಲಾ ಆಗುವ ವೇಳೆ ಎಲ್ಲೆಡೆಗಳಿಂದ "ವರ ಯಾರು?" ಎನ್ನುವ ಪ್ರಶ್ನೆ ಹುಟ್ಟಿತು. ಇದಕ್ಕೆ ಆಕೆ "ಇದು ಸರ್ ಪರೈಸ್ ಆಗಿರಲಿದೆ" ಎಂದಿದ್ದಾಳೆ.
ಲುಲು ಸ್ವಯಂ ವಿವಾಹ ಸಮಾರಂಭಕ್ಕೆ ಆಕೆಯ ತಂದೆ ತಾಯಿಗಳು ಆಗಮಿಸಲಿಲ್ಲ! ಆಕೆ 16 ವರ್ಷದವಳಾದಾಗಿನಿಂದ ಆಕೆಯ ತಂದೆ ಅವಳಿಗೆ ಒಳ್ಳೆಯ ವರನ ಹುಡುಕಾಟದಲ್ಲಿದ್ದರು. ತಾಯಿಯು ಆಕೆಯ ಪ್ರತಿ ವರ್ಷದ ಜನ್ಮದಿನದಂದು ಲುಲುಗೆ ಒಳ್ಳೆಯ ವರ ಲಭಿಸುವಂತೆ ದೇವರಲ್ಲಿ ಮೊರೆ ಇಟ್ಟಿದ್ದರು. ಆದರೆ ನನ್ನನ್ನು ತುಂಬಾ ಪ್ರೀತಿಸುವವಳು ನಾನೇ ಆಗಿದ್ದೇನೆ. ಹೀಗಾಗಿ ನನಗೆ ಬೇರೆ ಹುಡುಗರೊಡನೆ ವಿವಾಹವಾಗಲು ಇಷ್ಟವಿಲ್ಲ, ನನಗೆ ನಾನೇ  ಸ್ವಯಂವಿವಾಹವಾಗಲು ನಿರ್ಧರಿಸಿದ್ದಾಗಿ ಲುಲು ಹೇಳುತ್ತಾರೆ.
ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಗಾಗಿ ಲುಲು ಈ ಹಿಂದೆ ಕೆಲ ಕಾಲ ಫ್ರೀಲ್ಯಾನ್ಸ್ ಪತ್ರಕತ್ರೆಯಾಗಿ ವಹನ ಸಲಹೆಗಾರರಾಗಿ ಕೆಲಸ ಮಾಡಿದ್ದರು.2013 ರಲ್ಲಿ ಅವರು ಆಸ್ಟ್ರೇಲಿಯಾದಲ್ಲಿನ ಮ್ಯಾಕ್ಕ್ವಾರಿ ವಿಶ್ವವಿದ್ಯಾಲಯದಿಂದ ಬಿಎ ಮೀಡಿಯಾ (ಚಲನಚಿತ್ರ) ವಿದ್ಯಾರ್ಥಿವೇತನವನ್ನು ಪಡೆದರು ಪದವಿ ಶಿಕ್ಷಣ ಮುಗಿದ ಬಳಿಕ ಯುಕೆಗೆ ತೆರಳಿದ ಲುಲು ಅಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಅದ್ಯಯನ ಮಾಡುತ್ತಿದ್ದಾರೆ.
ಇದಕ್ಕೆ ಹಿಂದೆ 40 ವರ್ಷ ವಯಸ್ಸಿನ ಇಟಾಲಿಯನ್ ಫಿಟ್ನೆಸ್ ತರಬೇತುದಾರ ಲಾರಾ ಮೆಸಿ ತಾನೇ ವಿವಾಹವಾದಾಗ, ಸೊಲೊ ಮ್ಯಾರೇಜ್ ಪರಿಕಲ್ಪನೆ ಸುದ್ದಿಯಲ್ಲಿತ್ತು.ಕಳೆದ ಸೆಪ್ಟೆಂಬರ್ ನಲ್ಲಿ ಈ ವಿವಾಹ ಸಮಾರಂಭ ನೆರವೇರಿದ್ದು ಜಾಗತಿಕವಾಗಿ ಸ್ವಯಂ ವಿವಾಹದ ಕುರಿತು ಚರ್ಚೆಗಳು ನಡೆದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com