ಗಣ್ಯರ ನಿದ್ರಾಭಂಗಕ್ಕೆ ಕಾರಣವಾದ #MeToo ಚಳವಳಿಯನ್ನು ಹುಟ್ಟಿಹಾಕಿದವರಾರು ಗೊತ್ತೆ?

: ಇದೀಗ ದೇಶಾದ್ಯಂತ ಲೈಂಗಿಕ ಕಿರುಕುಳದ ವಿರುದ್ಧ ಎತ್ತರದ ದನಿ ಎಬ್ಬಿಸಿರುವ "ಮೀಟೂ" ಅಭಿಯಾನದ ಮೂಲಕ ಹಲವು ಬಾಲಿವುಡ್, ಸ್ಯಾಂಡಲ್ ವುಡ್ ನಟಿಯರು, ಕ್ರೀಡಾ ತಾರೆಗಳು.....
ತರಾನಾ ಬರ್ಕ್
ತರಾನಾ ಬರ್ಕ್
Updated on
ನ್ಯೂಯಾರ್ಕ್: ಇದೀಗ ದೇಶಾದ್ಯಂತ ಲೈಂಗಿಕ ಕಿರುಕುಳದ ವಿರುದ್ಧ ಎತ್ತರದ ದನಿ ಎಬ್ಬಿಸಿರುವ "ಮೀಟೂ" ಅಭಿಯಾನದ ಮೂಲಕ ಹಲವು ಬಾಲಿವುಡ್, ಸ್ಯಾಂಡಲ್ ವುಡ್ ನಟಿಯರು, ಕ್ರೀಡಾ ತಾರೆಗಳು ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಬಹಿರಂಗಪಡಿಸುತ್ತಿದ್ದಾರೆ. ಆದರೆ ನಿಜಕ್ಕೂ ಈ ಚಳವಳಿಯ ರೂವಾರಿ ಯಾರು? ಇದು ಯಾವಾಗ ಪ್ರಾರಂಭವಾಗಿತ್ತು ಎನ್ನುವುದು ತಿಳಿಯಬೇಕಾದಲ್ಲಿ ಈ ಲೇಖನ ಓದಿ.
"ಮೀಟೂ" ಅಭಿಯಾನವನ್ನು 2006ರಲ್ಲಿ ಪ್ರಥಮ ಬಾರಿಗೆ ಪ್ರಾರಂಭಿಸಿದವರು ತರಾನಾ ಬರ್ಕ್ ಎನ್ನುವ ಮಹಿಳೆ. ಅವರು ಕಡಿಮೆ ಆದಾಯ ಪಡೆಯುವ ಸಮುದಾಯದ ಮಹಿಳೆಯರ ಮೇಲೆ ನಡೆಯುತ್ತಿದ್ದ ಲೈಂಗಿಕ ಶೋಷಣೆಯ ಹಿನ್ನೆಲೆಯಲ್ಲಿ ಅಂತಹಾ ಮಹಿಳೆಯರಿಗೆ ನೆರವಾಗುವ ಉದ್ದೇಶದೊಡನೆ ಈ ಚಳವಳಿ ಪ್ರಾರಂಭಿಸಿದ್ದರು.
ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಹಾನುಭೂತಿ ವ್ಯಕ್ತಪಡಿಸುವ ಜತೆಗೇ ಅವರು ಏಕಾಂಗಿಯಲ್ಲ ಎನ್ನುವ ಧೈರ್ಯ ತುಂಬುವ ಉದ್ದೇಶ ಇದರ ಹಿಂದಿತ್ತು.
ಯಾರು ಈ ತರಾನಾ ಬರ್ಕ್?
ಮೂಲತಃ ಆಫ್ರಿಯ್ಕದವರಾದ ಬರ್ಕ್ ನ್ಯೂಯಾರ್ಕ್ ನಲ್ಲಿದ್ದು ನಾಗರಿಕ ಹಕ್ಕುಗಳ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ..ಆಫ್ರಿಕನ್ ಅಮೇರಿಕನ್ ನಾಗರಿಕ ಹಕ್ಕುಗಳ ಹೋರಾಟಗಾರ್ತಿಯಾದ ಬರ್ಕ್ ಗರ್ಲ್ಸ್ ಫಾರ್ ಜಂಡರ್ ಈಕ್ವಾಲಿಟಿ ಇನ್ ಬ್ರೋಕ್ಲಿನ್ ನ ನಿರ್ದೇಶಕಿಯಾಗಿದ್ದಾರೆ.ಈ ಮೂಲಕ ಅವರು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಜನಜಾಗೃತಿ ಮೂಡಿಸಲು ನೆರವಾಗುತ್ತಿದ್ದಾರೆ.
2017 ರಲ್ಲಿ ಇವರು ಇತರೆ ಕಾರ್ಯಕರ್ತರೊಡನೆ "ಟೈಮ್ಸ್ ವರ್ಷದ ವ್ಯಕ್ತಿ" ಆಗಿ ಗುರುತಿಸಿಕೊಂಡಿದ್ದರು.
 #MeToo ಅಭಿಯಾನ ಹುಟ್ಟಿದ ಬಗೆ
ಜಸ್ಟ್ ಬಿ ಇನ್ ಕಾರ್ಪೋರೇಷನ್ ಎನ್ನುವ ಸಂಸ್ಥೆಯಲ್ಲಿ ಬರ್ಕ್ ಉದ್ಯೋಗಿಯಾಗಿದ್ದ ವೇಳೆ 2003 ರಲ್ಲಿ "ಮೈ ಸ್ಪೇಸ್" ನಲ್ಲಿ ಬರ್ಕ್ ಮೊದಲ ಬಾರಿಗೆ "ಮೀಟೂ" ಎನ್ನುವ ಪದಪುಂಜವನ್ನು ಸೃಷ್ಟಿಸಿದ್ದರು. ಕಪ್ಪು ವರ್ಣದ ಮಹಿಳೆಯರ ಕಲ್ಯಾಣ ಯೋಜನೆ ಪ್ರಾರಂಭಿಸಿದ್ದ ಬರ್ಕ್ ಬಳಿ ಬಂದ ಬಾಲಕಿಯೊಬ್ಬಳು ತಾಯಿಯ ಸ್ನೇಹಿತನೊಬ್ಬ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ಆರೋಪಿಸಿದಾಗ ಈ ಚಳವಳಿಯನ್ನು ಹುತ್ಟು ಹಾಕಿದ್ದರು.
ಇಷ್ಟಕ್ಕೂ ಆ ಬಾಲಕಿಗೆ ಏನು ಹೇಳಬೇಕೆನ್ನುವುದು ತಿಳಿದಿರಲಿಲ್ಲ. ಹೀಗಾಗಿ ತಮ್ಮ ಅನುಭವಗಳನ್ನು ಬಹಿರಂಗಪಡಿಸಲು ಲೆಕ್ಕವಿಲ್ಲದಷ್ಟು ಮಹಿಳೆಯರು ಮತ್ತು ಯುವತಿಯರಿಗೆ ಬರ್ಕ್ ಒಂದು ಪದಪುಂಜ ಸೃಷ್ಟಿಸಿ ಚಳವಳಿಯನ್ನು ಹುತ್ಟು ಹಾಕುವ ಮೂಲಕ ಸಹಾನುಭೂತಿಯನ್ನು ವ್ಯಕ್ತಗೊಳಿಸಲು, ಧೈರ್ಯವಾಗಿರಲು ಸಹಾಯವಾದರು. "ಮೀಟೂ" ಮೂಲಕ ಯಾವುದೇ ಮಹಿಳೆ "ನೀವು ಒಬ್ಬಂಟಿಗಲ್ಲ. ಇದು ನನಗೆ ಕೂಡ ಸಂಭವಿಸಿದೆ." ಎನ್ನುವುದನ್ನು ಧೈರ್ಯವಾಗಿ ಹೊರಹೊಮ್ಮಿಸಲು ಬರ್ಕ್ ಕಾರಣಕರ್ತರಾದರು.
ಅವರು ಕೇವಲ 500 ಟ್ವಿಟರ್ ಅನುಯಾಯಿಗಳೊಡನೆ ಸೇರಿ ಈ ಬಿರುಗಾಳಿಯನ್ನು ಸೃಷ್ಟಿ ಮಾಡಿದ್ದಾರೆ.
ಹಾಲಿವುಡ್ ನಟಿ ಆಲಿಸಾ ಮಿಲಾನೊ ಈ ನುಡಿಗಟ್ಟು ಬಳಸಿ ಟ್ವೀಟ್ ಮಾಡಿದಾಗ "ಮೀಟೂ" ಅಭಿಯಾನ ಅಂತರ್ಜಾಲ ಜಗತ್ತಿನಲ್ಲಿ ಸುಂಟರಗಾಳಿ ಎಬ್ಬಿಸ್ಸಲು ತೊಡಗಿತು.ತರುವಾಯ, ಅವರ ಟ್ವೀಟ್ ಅನ್ನು ತನಿಖೆಗೊಳಪಡಿಸಲಾಗಿತ್ತು, ಈ ಮೂಲಕ ಅದು ಹಲವರ ಗಮನ ಸೆಳೆದಿತ್ತು.
ಆದರೆ ತರಾನಾ ಅವರೆಂದೂ "ಮೀಟೂ" ಒಂದು ಚಳವಳಿ ಎಂದೇ ಭಾವಿಸಿದ್ದಾರೆ ಹೊರತು ಇದೊಂದು ವೈರಲ್ ಅಭಿಯಾನ ಎಂದು ತಿಳಿದಿಲ್ಲ.
ಒಟ್ಟಾರೆ ಐತಿಹಾಸಿಕ ಚಳುವಳಿ ಸುಮಾರು 12 ವರ್ಷಗಳ ಹಿಂದೆ ಪ್ರಾರಂಭವಾದರೂ, ಇದು ಕೇವಲ ಎರಡು ವರ್ಷಗಳ ಹಿಂದೆ ಪ್ರಸಿದ್ಧವಾಯಿತು. ಈಗ, ಇದು ಬದಲಾವಣೆಯ ಸಮಯವಾಗಿದ್ದು ಈ ಭರವಸೆಯ ನುಡಿಗಟ್ಟನ್ನು ಲೈಂಗಿಕ ಕಿರುಕುಳದ ವಿರುದ್ಧ ತಮ್ಮ ದುಃಖವನ್ನು ಹಂಚಿಕೊಳ್ಳಲು ಪ್ರಪಂಚದಾದ್ಯಂತ ಮಹಿಳೆಯರು ಬಳಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com