ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್: ಒಂದೇ ಕ್ಲಿಕ್ ನಿಂದ ಐದು ರೋಗಗಳ ಪತ್ತೆಗೆ ಬಂತು ಆ್ಯಪ್!

ಸಫಲ್ ಫಸಲ್’ ಆ್ಯಪ್  ಬಳಸಿಕೊಳ್ಳುವ ಮೂಲಕ ಇನ್ನು ಮುಂದೆ  ಕಬ್ಬು ಬೆಳೆಗಾರರು ಒಂದೇ ಕ್ಲಿಕ್ ನಲ್ಲಿ ಕಬ್ಬಿಗೆ ತಗುಲುವ ಐದು ರೋಗಗಳನ್ನು ಗುರುತಿಸಲು ಸಾಧ್ಯವಾಗಲಿದೆ.
ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್: ಒಂದೇ ಕ್ಲಿಕ್ ನಿಂದ ಐದು ರೋಗಗಳ ಪತ್ತೆಗೆ ಬಂತು ಆ್ಯಪ್!
Updated on

ಬೆಂಗಳೂರು: ಸಫಲ್ ಫಸಲ್’ ಆ್ಯಪ್  ಬಳಸಿಕೊಳ್ಳುವ ಮೂಲಕ ಇನ್ನು ಮುಂದೆ  ಕಬ್ಬು ಬೆಳೆಗಾರರು ಒಂದೇ ಕ್ಲಿಕ್ ನಲ್ಲಿ ಕಬ್ಬಿಗೆ ತಗುಲುವ ಐದು ರೋಗಗಳನ್ನು ಗುರುತಿಸಲು ಸಾಧ್ಯವಾಗಲಿದೆ.

ರೋಗಗಳನ್ನು ಗುರುತಿಸುವ ಅಲ್ಗಾರಿದಮ್ ಪ್ರೋಗ್ರಾಮಿಂಗ್ ಮುಗಿಸಿದ ಬೆಂಗಳೂರಿನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಭಾರತೀಯ ಸಂಶೋಧನಾ ಸಂಸ್ಥೆ (ಐಐಎಸ್ಸಿ) ಮುಖ್ಯ ಸಂಶೋಧನಾ ವಿಜ್ಞಾನಿ ಡಾ.ಎನ್.ಎನ್ಓಂಕಾರ್ ಒಂದೊಮ್ಮೆ ಕಬ್ಬು ಬೆಳೆಗೆ ಸಂಬಂಧಿಸಿ ಯಾವುದೇ ಒಂದು ಕಾಯಿಲೆ ಪತ್ತೆಯಾದಲ್ಲಿ ಪರಿಹಾರ ಕ್ರಮಗಳ ಡೇಟಾಬೇಸ್ ಅನ್ನು ಸಹ ಇರಿಸಲು ಉದ್ದೇಶಿಸಿದೆ ಎಂದರು.

ಡಾ. ಓಂಕಾರ್ ಈ ಮುನ್ನ ರೈತರೊಂದಿಗೆ ಸಂವಹನ ನಡೆಸಿದಾಗ ಬೆಳೆ ರೋಗವನ್ನು ಗುರುತಿಸುವಲ್ಲಿನ ತೊಂದರೆಗಳ ಬಗ್ಗೆ ತಿಳಿದುಕೊಂಡರು. ಆಗ ಅವರಿಗೆ ಈ ಆ್ಯಪ್ ನ ಕಲ್ಪನೆ ಮೂಡಿದೆ.

ಅನೇಕ ರೈತರು ತಮ್ಮ ಬೆಳೆಗಳ ಬಾಧಿಸುವ ರೋಗಗಳ ನಿರ್ಣಯಿಸುವುದರಲ್ಲಿ ವಿಫಲರಾಗುತಾರೆ. ಆದರೆ ಇದೀಗ ಈ ಅಪ್ಲಿಕೇಶನ್‌ನಿಂದ ಇಂತಹಾ ರೋಗಗಳ ಪತ್ತೆ ಸುಲಭವಾಗಲಿದೆ.

“ಯುವ ಕೃಷಿಕರಿಗೆ  ಬೆಳೆಗಳು ಮತ್ತು ರೋಗಗಳ ಪರಿಚಯವಿಲ್ಲದಿರಬಹುದು. ಇದು ಅವರಿಗೆ ಅಪಾರ ಸಹಾಯ ಮಾಡುತ್ತದೆ. ಅಲ್ಲದೆ, ಕೆಲವು ರೈತರು ಬೆಳೆ ರೋಗಗಳಿಂದಪೀಡಿತವಾಗಿದ್ದರೂ ರೋಗನಿರ್ಣಯ ಪರಿಹಾರ ಹುಡುಕಲು ಹೆಣಗಾಡುತ್ತಾರೆ. ಅಂತಹವರಿಗೆ  ಈ ಮಾಹಿತಿಯಉಪಯೋಗ ಸಿಗಲಿದೆ.ಪ್ರಾರಂಭದಲ್ಲೇ ರೋಗಪತ್ತೆ ಆಗುವ ಕಾರಣ ದೊಡ್ಡ ಪ್ರಮಾಣದ ಬೆಳೆಗಳ ನಷ್ಟವನ್ನು ತಡೆಯಬಹುದು ”ಎಂದು ಓಂಕಾರ್ ಹೇಳಿದ್ದಾರೆ.

ಜೈವಿಕ ತಂತ್ರಜ್ಞಾನ ಕ್ಷೇತ್ರದವರು ಸೇರಿದಂತೆ ತಜ್ಞರು ಈ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಐದು ಜನಪ್ರಿಯ ಕಾಯಿಲೆಗಳನ್ನು ಮತ್ತು ಕೆಲವು ಗುಣಲಕ್ಷಣಗಳೊಂದಿಗೆ ಅವುಗಳನ್ನು ಗುರುತಿಸುವ ವಿಧಾನಗಳನ್ನು ಆಯ್ಕೆ ಮಾಡಲು ಸಹಾಯ ಮಾಡಿದ್ದಾರೆ. ಕ್ಲೌಡ್‌ನಲ್ಲಿ ಇಮೇಜ್ ಪ್ರೊಸೆಸಿಂಗ್ ಮೂಲಕ ಚಿತ್ರಗಳನ್ನು ವಿಶ್ಲೇಷಿಸುವ ಅಪ್ಲಿಕೇಶನ್‌ಗಳ ಅಲ್ಗಾರಿದಮ್ ಅನ್ನು ಪ್ರೋಗ್ರಾಮಿಂಗ್ ಮಾಡಲು ಇದು ಸಹಾಯ ಮಾಡಿದೆ.  ಕಬ್ಬಿನ ಇಳುವರಿಯ ಚಿತ್ರಗಳೊಡನೆ ಆ ಕಬ್ಬಿನ ಸ್ಥಿತಿಗತಿಯ ಬಗೆಗೆ ಅರಿಯಬಹುದಾಗಿದೆ.

ಪ್ರಸ್ತುತ, ತಂಡವು ಚಿತ್ರಗಳ ಮೂಲಕ ರೋಗಗಳನ್ನು ಗುರುತಿಸುವ ನಿಖರತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. "ನಾವು ಹೆಚ್ಚು ಆರೋಗ್ಯಕರ ಮತ್ತು ಅನಾರೋಗ್ಯಕರ ಬೆಳೆಗಳ ಚಿತ್ರಗಳ ದೊಡ್ಡ ಡೇಟಾಬೇಸ್ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಪ್ರಸ್ತುತ, ಅಪ್ಲಿಕೇಶನ್‌ನ ನಿಖರತೆ 86% ರಷ್ಟಿದೆ ಎಂದು  ಡಾ ಓಂಕಾರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com