ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

20ನೇ ಬಾರಿ ಗರ್ಭಿಣಿಯಾಗಿ 17ನೇ ಮಗುವಿಗೆ ಜನ್ಮಕೊಟ್ಟ ಮಹಾಮಾತೆ!

ಕೆಲಸ ಅರಸಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಲಸೆ ಬಂದಿದ್ದ ಮಹಿಳೆಯೊಬ್ಬಳು ಇತ್ತೀಚೆಗೆ  ತನ್ನ 17 ನೇ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗುವು ಬದುಕಿಲ್ಲ ಎಂದು ಆರೋಗ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದರು. 
Published on

ಔರಂಗಾಬಾದ್: ಕೆಲಸ ಅರಸಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಲಸೆ ಬಂದಿದ್ದ ಮಹಿಳೆಯೊಬ್ಬಳು ಇತ್ತೀಚೆಗೆ  ತನ್ನ 17 ನೇ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗುವು ಬದುಕಿಲ್ಲ ಎಂದು ಆರೋಗ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್‌ಗಾಂವ್ ತಹಸಿಲ್ ನಿವಾಸಿ ಲಂಕಾಬಾಯಿ (ಪೂರ್ಣ ಹೆಸರು ಬಹಿರಂಗವಾಗಿಲ್ಲ) ಕರ್ನಾಟಕದ ಬೆಳಗಾವಿ ಜಿಲ್ಲೆಯ  ಕಬ್ಬಿನ ಹೊಲವೊಂದರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. 

ಬರಪೀಡಿತ ಬೀಡ್ ಪ್ರದೇಶದ ಸಾವಿರಾರು ಕುಟುಂಬಗಳು ಕಬ್ಬಿನ ಕೊಯ್ಲು ಋತುವಿನಲ್ಲಿ ಕಬ್ಬಿನ ಹೊಲಗಳಲ್ಲಿ ಕೆಲಸ ಮಾಡಲು ಮಹಾರಾಷ್ಟ್ರದ ಇತರ ಭಾಗಗಳಿಗೆ ಮತ್ತು ಕರ್ನಾಟಕಕ್ಕೆ ವಲಸೆ ಹೋಗುತ್ತಾರೆ.

"ಲಂಕಾಬಾಯಿ  ತನ್ನ 17 ನೇ ಮಗುವಿಗೆ ಜನ್ಮ ನೀಡಿದ್ದಳೆಂದು ನಾವು ಅರಿತಿದ್ದೇವೆ. ಆದರೆ ಮಗು ಅತಿ ಶೀಘ್ರದಲ್ಲಿ ನಿಧನವಾಗಿದೆ. ಹೆಚ್ಚಿನ ವಿವರಗಳನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಬೀಡ್ ಆರೋಗ್ಯ ಅಧಿಕಾರಿ ಡಾ.ಆರ್.ಬಿ ಪವಾರ್ ಹೇಳಿದರು.

ಅಲೆಮಾರಿ ಗೋಪಾಲಕರ  ಸಮುದಾಯಕ್ಕೆ ಸೇರಿದ ಮಹಿಳೆ, ಸೆಪ್ಟೆಂಬರ್‌ನಲ್ಲಿ 20 ನೇ ಬಾರಿಗೆ ಗರ್ಭಿಣಿಯಾಗಿದ್ದಾಳೆಂದು ತಿಳಿದಾಗ ಆರೋಗ್ಯಾಧಿಕಾರಿಗಳು ಗಮನವಹಿಸಿದ್ದರು.ಮಹಿಳೆಗೆ ಇದಾಗಲೇ 11 ಮಕ್ಕಳಿದ್ದಾರೆ, ಅವರಲ್ಲಿ ಒಂಬತ್ತು ಹೆಣ್ಣು ಮಕ್ಕಳಾಗಿದ್ದಾರೆ. ಮೂರು ಬಾರಿ ಗರ್ಭಪಾತವಾಗಿದ್ದರೆ  ಐದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸೆಪ್ಟೆಂಬರ್ 8 ರಂದು ಅವರು ಮೊದಲ ಬಾರಿಗೆ ಪ್ರಾಥಮಿಕ ತಪಾಸಣೆಗೆ ಒಳಗಾಗಿದ್ದರು, ಮತ್ತು ಅಧಿಕಾರಿಗಳು ಅವರ ಆರೋಗ್ಯದ ಬಗ್ಗೆ ಕಳವಳಗೊಂದಿದ್ದರು. "ನಮ್ಮ ತಂಡವು ನವೆಂಬರ್ 21 ರಂದು ಅವರ ಮನೆಗೆ ಭೇಟಿ ನೀಡಿತು, ಆದರೆ ಅವರು ಕರ್ನಾಟಕಕ್ಕೆ ತೆರಳಿದ್ದನ್ನುಪತ್ತೆ ಮಾಡಲಾಗಿತ್ತು"ದು ಡಾ ಪವಾರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com