100 ಗಿಟಾರ್ ಬಳಸಿ ರಾಷ್ಟ್ರಗೀತೆ ನುಡಿಸಿದ ವಿದ್ಯಾರ್ಥಿಗಳು
ವಿಶೇಷ
100 ಗಿಟಾರ್ ಬಳಸಿ ರಾಷ್ಟ್ರಗೀತೆ ನುಡಿಸಿದ ವಿದ್ಯಾರ್ಥಿಗಳು: ಕೆಎಲ್‌ಇ ಸ್ಕೂಲ್ ನೂತನ ವಿಶ್ವದಾಖಲೆ!
ನೂರು ಗಿಟಾರ್ ಗಳಲ್ಲಿ ಭಾರತ ರಾಷ್ಟ್ರಗೀತೆಯನ್ನು ನುಡಿಸುವ ಮೂಲಕ ಬೆಳಗಾವಿಯ ಕೆಎಲ್‌ಇ ಇಂಟರ್ ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿಗಳು ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಬೆಳಗಾವಿ: ನೂರು ಗಿಟಾರ್ ಗಳಲ್ಲಿ ಭಾರತ ರಾಷ್ಟ್ರಗೀತೆಯನ್ನು ನುಡಿಸುವ ಮೂಲಕ ಬೆಳಗಾವಿಯ ಕೆಎಲ್‌ಇ ಇಂಟರ್ ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿಗಳು ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಬೆಳಗಾವಿ ಕುವೆಂಪು ನಗರದಲ್ಲಿರುವ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲೆಯಲ್ಲಿನ ಏಳರಿಂದ ಒಂಬತ್ತನೇ ತರಗತಿ ವಿದ್ಯಾರ್ಥಿಗಳು ನೂರು ಗಿಟಾರ್ ನಲ್ಲಿ ಏಕಕಾಲಕ್ಕೆ ರಾಷ್ಟ್ರಗೀತೆ ನುಡಿಸುವುದರೊಡನೆ ಇಂಡಿಯಾ ವರ್ಲ್ಡ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಿದ್ದಾರೆ.
ಪ್ರಸಿದ್ದ ಸಂಗೀತ ಕಲಾವಿದ ವಿಶಾಲ್ ಸಿಂಗ್ ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು ಮೋಹಿತಾ ಸಿಂಗ್ ಸಹ ಈ ತರಬೇತಿಯ ಭಾಗವಾಗಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಜೀವ ಸದಸ್ಯೆ ಅಧ್ಯಕ್ಷೆ ಡಾ. ಪ್ರೀತಿ ದೊಡವಾಡ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.ಇಂಡಿಯಾ ವರ್ಲ್ಡ್ ರೆಕಾರ್ಡ್ ನಿರ್ದೇಶಕ, ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನ ರೆಫ್ರಿ ಪವನ್ ಸೋಳಂಕಿ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಅವರು ವಿದ್ಯಾರ್ಥಿಗಳ ಪ್ರತಿಭೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ