4 ವರ್ಷಗಳಲ್ಲಿ 200 ಹೆರಿಗೆ! ಹುಬ್ಬಳ್ಳಿಯ ಈ ವೈದ್ಯಕೀಯ ಸಹಾಯಕ ಗ್ರಾಮಿಣ ಮಹಿಳೆಯ ಆಶಾದೀಪ

: 108 ಅಂಬ್ಯುಲೆನ್ಸ್ ಸೇವೆಗೆ ಸೇರಿರುವ 29 ವರ್ಷದ ತುರ್ತು ವೈದ್ಯಕೀಯ ಸಹಾಯಕನೊಬ್ಬ ಗ್ರಾಮೀಣ ಭಾಗದ ಗರ್ಭಿಣಿ ಮಹಿಳೆಯರ ಪಾಲಿಗೆ ಆಶಾದೀಪವಾಗಿದ್ದಾನೆ.
ಜಗದೀಶ್ ರೆಡ್ಡಿ
ಜಗದೀಶ್ ರೆಡ್ಡಿ
Updated on
ಹುಬ್ಬಳ್ಳಿ: 108 ಅಂಬ್ಯುಲೆನ್ಸ್ ಸೇವೆಗೆ ಸೇರಿರುವ 29  ವರ್ಷದ  ತುರ್ತು ವೈದ್ಯಕೀಯ ಸಹಾಯಕನೊಬ್ಬ ಗ್ರಾಮೀಣ ಭಾಗದ ಗರ್ಭಿಣಿ ಮಹಿಳೆಯರ ಪಾಲಿಗೆ ಆಶಾದೀಪವಾಗಿದ್ದಾನೆ.
ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕು ಚಿಕ್ಕ ಹೆಸರೂರ್ ಗ್ರಾಮದವರಾದ ಜಗದೀಶ್ ರೆಡ್ಡಿ  ಕಳೆದ ನಾಲ್ಕು ವರ್ಷಗಳ ತನ್ನ ವೃತ್ತಿ ಬದುಕಿನಲ್ಲಿ  ಸುಮಾರು 200 ಗರ್ಭಿಣಿಯರ ಜೀವ ಉಳಿಸಿದ್ದಾರೆ. ಇವರು 2015ರಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗಾಗಿ 108 ಅಂಬ್ಯುಲೆನ್ಸ್ ಸೇವೆಗೆ ಸೇರ್ಪಡೆಯಾಗಿದ್ದರು. ಧಾರವಾಡ ತಾಲೂಕು ಚಿಟಗುಬ್ಬಿಯಲ್ಲಿ ಇವರ ಸೇವೆ ಸಿಗುತ್ತಿದೆ.
"ಹೆಚ್ಚಿನ ಸಮಯದಲ್ಲಿ ಗ್ರಾಮೀಣ ಭಾಗಗಳಿಂದ ನಮಗೆ ಕರೆಗಳು ಬರುತ್ತದೆ.ಆ ವೇಳೆ ಗರ್ಭಿಣಿಯರನ್ನು ಹತ್ತಿರದ  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆಗೆದುಕೊಳ್ಳುವಲ್ಲಿ ವಿಳಂಬವಾಗುವ ಸಾಧ್ಯತೆ ಇರುತ್ತದೆ. ಆಗೆಲ್ಲ ಮಹಿಳೆಯರು ತೀವ್ರವಾದ ಹೆರಿಗೆ ನೋವನ್ನು ಅನುಭವಿಸುತ್ತಿರುತ್ತಾರೆ, ಅಲ್ಲದೆಜ್ಕೆಲವೊಮ್ಮೆ ಅಂಬ್ಯುಲೆನ್ಸ್ ನಲ್ಲಿಯೇ ಹೆರಿಗೆಯಾಗಿ ಮಗುವಿಗೆ ಜನ್ಮ ನೀಡಿದ ಪ್ರಸಂಗಗಳಿದೆ. ಅಂತಹಾ ಸಮಯಗಳಲ್ಲಿ ನಾವು ಅವರಿಗೆ ಸಹಾಯ ನೀಡುತ್ತೇವೆ." ಜಗದೀಶ್ ರೆಡ್ಡಿ ಹೇಳಿದ್ದಾರೆ.
"ತುರ್ತು ಸಂದರ್ಭಗಳಲ್ಲಿ, ವಿಶೇಷವಾಗಿ ಹೆರಿಗೆ ಪ್ರಕರಣಗಳಲ್ಲಿ ಜನರನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ಇಲ್ಲಿ, ನಾವು ತಾಯಿ ಮತ್ತು ಮಗುವಿನ ಆರೈಕೆಯನ್ನು ಮಾಡಬೇಗುತ್ತದೆ. ಮೊದಲ ಬಾರಿಗೆ ನನಗದು ಕಠಿಣವಾಗಿ ಕಂಡಿತ್ತು. ಆದರೆ ಅದೊಮ್ಮೆ ತಾಯಿ ಹಾಗೂ ಮಗು ಇಬ್ಬರನ್ನೂ ಕ್ಷೇಮವಾಗಿ ಉಳಿಸಲು ಸಾಧ್ಯವಾದ ಬಳಿಕ ನನಗೆ ಧಯ್ರ್ಯ ಬಂದಿದೆ. ಸಾಮಾನ್ಯವಾಗಿ ನಾವು ಗರ್ಭಿಣಿಯರಿಗೆ ನೋವು ನಿವಾರಕಗಳನ್ನು ನೀಡಿ ಆವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತೇವೆ. ಆದರೆ ಪರಿಸ್ಥಿತಿ ಕೈಮೀರಿದೆ ಎಂದು ಕಂಡು ಬಂದರೆ ನಾವು ಅಂಬ್ಯುಲೆನ್ಸ್ ನಿಲ್ಲಿಸಿ ವಾಹನದಲ್ಲೇ ಹೆರಿಗೆ ಮಾಡಿಸಿದ ಬಳಿಕ ತಾಯಿ, ಮಗು ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸುತ್ತೇವೆ" ಅವರು ಹೇಳಿದ್ದಾರೆ.
ಇದಾಗಲೇ ಜಗದೀಶ್ ಧಾರವಾಡದ ಚೆನ್ನಾಪುರ ಗ್ರಾಮಕ್ಕೆ ಸೇರಿದ್ದ ಹದಿನೈದು ಮಹಿಳೆಯರಿಗೆ ತಮ್ಮ ವಾಹನದಲ್ಲೇ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಅಲ್ಲದೆ ಮಂತೂರು ಗ್ರಾಮದ ಹನ್ನೆರಡು ಮಹಿಳೆಯರಿಗೆ ಸಹ ಅವರ ಮಗುವಿನ ಹೆರಿಗೆಗೆ ನೆರವಾಗಿದ್ದಾರೆ.
ನಾನು ಸ್ಟಾಫ್ ನರ್ಸ್ ಆಗಿ ಸೇವೆಗೆ ಸೇರಿದಾಗ ನನಗೆ ಸವಾಲಿನ ಪರಿಸ್ಥಿತಿ ಎದುರಾಗಿತ್ತು.ಶಿರಗುಪ್ಪ ಗ್ರಾಮದಿಂದ ನಮಗೆ ಕರೆ ಬಂದಿತ್ತು. ಆದರೆ ನಾವು ಗ್ರಾಮ ತಲುಪುಇವ ವೇಳೆಗೆ ಅತ್ಯಂತ ತಡವಾಗಿತ್ತು.ನಾವು ಹುಬ್ಬಳ್ಳಿ ತಲುಪುವ ವೇಳೆಗೆ ಮಹಿಳೆ ಹೆರಿಗೆ ನೋವು ತಾಳಲಾಗದೆ ಹೋಗಿದ್ದಳು. ಆಕೆಯ ಆರೋಗ್ಯ ಕ್ಷೀಣಿಸುತ್ತಿತ್ತು. ಆಗ ನಾನು ಆಕೆಗೆ ಸಹಾಯ ಮಾಡಲು ನಿರ್ಧರಿಸಿದೆ, ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದು ನನಗೆ ಆತ್ಮವಿಶ್ವಾಸ ಹೊಂದಲು ಸಾಧ್ಯವಾಗಿಸಿತು. ಇದಾಗಿ ನಾನು ಹಲವಾರು ಬಾರಿ ಹೆರಿಗೆ ಮಾಡಿಸಿದ್ದೇನೆ.
ಆಸ್ಪತ್ರೆ ವೈದ್ಯರಿಗೆ ಸಹ ಈತ ಬಹು ಪರಿಚಿತನಾಗಿದ್ದು ಹಿರಿಯ ವೈದ್ಯರು ಜಗದೀಶ್ ಅವರ ಸೇವಾ ಮನೋಭಾವವನ್ನು ಮೆಚ್ಚಿದ್ದಾರೆ.ಜಹ್ಗದೀಶ್ ಅವರಿಂದ ಹೆರಿಗೆ ಮಾಡಿಸಿಕೊಂಡ ಮಹಿಳೆಯರು ಸಹ ಅವರನ್ನು ಮರೆಯದೆ ಮಗುವಿನ ಹುಟ್ಟುಹಬ್ಬ, ನಾಮಕರಣದಂತಹಾ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com