ಗದಗ: ಈ ಮಠದ ಜಾತ್ರೆಯಲ್ಲಿ ಕನ್ನಡ ಧ್ವಜಕ್ಕೇ ಅಗ್ರ ಪೂಜೆ!

ಇದೊಂದು ಮಠ, ಇಲ್ಲಿನ ಯತಿಗಳು ರಥದ ತುತ್ತತುದಿಯಲ್ಲಿ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಕನ್ನಡಪರ ಜಾಗೃತಿ ಮೂಡಿಸುತ್ತಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಗದಗ ಜಿಲ್ಲೆ....
ಗದಗ: ಈ ಮಠದ ಜಾತ್ರೆಯಲ್ಲಿ ಕನ್ನಡ ಧ್ವಜಕ್ಕೇ ಅಗ್ರ ಪೂಜೆ!
ಗದಗ: ಈ ಮಠದ ಜಾತ್ರೆಯಲ್ಲಿ ಕನ್ನಡ ಧ್ವಜಕ್ಕೇ ಅಗ್ರ ಪೂಜೆ!
Updated on
ಗದಗ: ಇದೊಂದು ಮಠ, ಇಲ್ಲಿನ ಯತಿಗಳು ರಥದ ತುತ್ತತುದಿಯಲ್ಲಿ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಕನ್ನಡಪರ ಜಾಗೃತಿ ಮೂಡಿಸುತ್ತಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಗದಗ ಜಿಲ್ಲೆ  ಭೈರನಹಟ್ಟಿ ದೊರೆಸ್ವಾಮಿ ಮಠದ ಜಾತ್ರಾ ಮಹೋತ್ಸವದಂದು ಈ ಸುಂದರ ದೃಶ್ಯವನ್ನು ಭಕ್ತಾದಿಗಳು ಕಣ್ತುಂಬಿಕೊಳ್ಳಬಹುದು. ಅಂದಹಾಗೆ ಈ ವರ್ಷದ ಜಾತ್ರೆ ಇದೇ ಮಂಗಳವಾರ ನೆರವೇರಿದ್ದು ಅಂದೂ ಸಹ ರಥದ ತುತ್ತತುದಿಯಲ್ಲಿ ಕರ್ನಾಟಕದ ನಾಡಧ್ವಜವನ್ನು ಹಾರಿಸಿ ಕನ್ನಡ ಪ್ರೇಮೆ ಮೆರೆಯಲಾಗಿತ್ತು.
ಗದಗದ ನರಗುಂದ ಸಮೀಪವಿರುವ ಈ ಗ್ರಾಮದಲ್ಲಿ ಪ್ರತಿವರ್ಷ ಜಾತ್ರೋತ್ಸವದಂದು ನಾಡಧ್ವಜಕ್ಕೆ ಸಾರ್ವಜನಿಕರು ಗೌರವ ಸಲ್ಲಿಸುವ ಮೂಲಕ ಧ್ವಜವನ್ನು ದೇವರ ಸಮಾನವಾಗಿ ಭಾವಿಸುತ್ತಾರೆ. ಇಡೀ ರಾಜ್ಯದಲ್ಲಿ ನಾಡಧ್ವಜವನ್ನು ರಥೋತ್ಸವದಲ್ಲಿ ಬಳಕೆ ಮಾಡುವ ಏಕೈಕ ಗ್ರಾಮವೆಂಬ ಅಗ್ಗಳಿಕೆ ಭೈರನಹಟ್ಟಿ ಗ್ರಾಮದ್ದಾಗಿದೆ.
ಮಠದ ಹಿರಿಯ ಸ್ವಾಮಿಗಳಾದ ಶಾಂತಲಿಂಗ್ ಶ್ರೀಗಳು ತಾವೂ ಕೈನಲ್ಲಿ ಕನ್ನಡ ಧ್ವಜವನ್ನು ಹಿಡಿದು ಜಾತ್ರೆಯ ಮುಂದಾಳುತನ ವಹಿಸಿಕೊಳ್ಳುತ್ತಾರೆ.ಭೈರನಹಟ್ಟಿಯ ಪ್ರತಿ ರಸ್ತೆ, ಗಲ್ಲಿಗಳಲ್ಲಿ ಈ ರಥ ಸಾಗುತ್ತದೆ. ನೂರಾರು ಭಕ್ತರು ಈ ಜಾತ್ರೋತ್ಸವದಲ್ಲಿ ಭಾಗವಹಿಸುತ್ತಾರೆ.  "ನಾನು ಕೆಲವು ವರ್ಷಗಳಿಂದ ಈ ಜಾತ್ರೆಯಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ. ಜಾತ್ರೆಯಲ್ಲಿ ಕನ್ನಡ ಧ್ವಜ ಬಳಕೆಯ ಕಲ್ಪನೆಯಿಂದ ನಾನು ಪ್ರಭಾವಿತನಾಗಿದ್ದೇನೆ"  ಮಹಂತಲಿಂಗಯ್ಯ ವಿರಕ್ತಮಠ ಎಂಬ ಭಕ್ತರು ಹೇಳಿದ್ದಾರೆ.
"ಮಠದ ಸ್ವಾಮಿಗಳು ಇಂತಹಾ ಉತ್ತಮ ಕಾರ್ಯ ಮಾಡಿದ್ದಾದರೆ ಇದನ್ನು ಬೇರೆ ಸಾರ್ವಜನಿಕರು, ಮಕ್ಕಳೂ ಅಳವಡಿಸಿಕೊಳ್ಲುತ್ತಾರೆ" ಅವರು ನುಡಿದರು.
"ನಾವು ಕಳೆದ 25 ವರ್ಷಗಳಿಂದ ಈ ಜಾತ್ರೋತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ಭಕ್ತರು ಶಿವ, ರುದ್ರ ಮತ್ತು ಇತರ ದೇವರುಗಳನ್ನು ಪೂಜಿಸುತ್ತಿದ್ದರೂ, ಅವರು ಧ್ವಜಗಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತಾರೆ " ಚಂದ್ರು ಚೌಹಾಣ್ ಎಂಬ ಇನ್ನೋರ್ವ ಭಕ್ತರು ಹೇಳಿದ್ದಾರೆ.
44-ದಿನಗಳ ರಾಜ್ಯೋತ್ಸವ ಆಚರಣೆ!
ಕನ್ನಡ ರಾಜ್ಯೋತ್ಸವವನ್ನು ಇಲ್ಲಿ 44 ದಿನಗಳ ಕಾಲ ಆಚರಿಸಲಾಗುತ್ತದೆ, ಆ ಸಮಯದಲ್ಲಿ ಕನ್ನಡ ಧ್ವಜಾರೋಹಣ ಮಾಡಲಾಗುತ್ತದೆ. ಜತೆಗೆ ಭಕ್ತರು ಕನ್ನಡಾಂಬೆ (ತಾಯಿ ಭುವನೇಶ್ವರಿ)ಗೆ ಗೌರವ ಸಮರ್ಪಿಸುತ್ತಾರೆ.  ಸಂಜೆ ಸಮಯದಲ್ಲಿ ಮಠದ ಆವರಣದಲ್ಲಿ ವಿವಿಧ ಸಾಹಿತ್ಯಿಕ  ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. . ಅಂತಿಮ ದಿನ, ಕನ್ನಡ ಮಾಧ್ಯಮ ಎಸ್ಎಸ್ಎಲ್ಸಿ ಮತ್ತು ಪಿ.ಯು.ಸಿ.ಗಳಲ್ಲಿ ಉನ್ನತ ಸ್ಥಾನ ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com