ಜಾನಪದ ಅಕಾಡೆಮಿ ಅಧ್ಯಕ್ಷೆಯಾಗಿ ನೇಮಕವಾಗಿರುವ ಮೊದಲ ತೃತೀಯ ಲಿಂಗಿ ಜೋಗತಿ ಮಂಜಮ್ಮ!

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿ ಪಟ್ಟಣದ ಜಾನಪದ ಕಲಾವಿದೆಯಾಗಿ ಆಯ್ಕೆಯಾಗಿರುವ ಮಂಜಮ್ಮ ಜೋಗತಿ ಕುರಿತಂತೆ 5ನೇ ತರಗತಿ ಪಠ್ಯಪುಸ್ತಕದಲ್ಲಿ ಪಾಠವಿದೆ ಹಾಗೂ ಕರ್ನಾಟಕ ಜಾನಪದ ವಿವಿ ಸಿಲ್ಲಬಸ್ ನಲ್ಲೂ ಜೋಗತಿ ಮಂಜಮ್ಮ ಬಗ್ಗೆ ಪಠ್ಯವಿದೆ. 
ಜೋಗತಿ ಮಂಜಮ್ಮ
ಜೋಗತಿ ಮಂಜಮ್ಮ
Updated on

ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿ ಪಟ್ಟಣದ ಜಾನಪದ ಕಲಾವಿದೆಯಾಗಿ ಆಯ್ಕೆಯಾಗಿರುವ ಮಂಜಮ್ಮ ಜೋಗತಿ ಕುರಿತಂತೆ 5ನೇ ತರಗತಿ ಪಠ್ಯಪುಸ್ತಕದಲ್ಲಿ ಪಾಠವಿದೆ ಹಾಗೂ ಕರ್ನಾಟಕ ಜಾನಪದ ವಿವಿ ಸಿಲ್ಲಬಸ್ ನಲ್ಲೂ ಜೋಗತಿ ಮಂಜಮ್ಮ ಬಗ್ಗೆ ಪಠ್ಯವಿದೆ. 

ಇನ್ನೂ ತೆಲುಗು ಯೂಟ್ಯೂಬ್ ಚಾನೆಲ್ ನಲ್ಲಿ ಜೋಗತಿ ಮಂಜಮ್ಮ ಕುರಿತು ಧಾರವಾಹಿ ಮೂಡಿ ಬರುತ್ತಿದೆ.  62 ವರ್ಷದ ಮಂಜಮ್ಮ ಜಾನಪದ ಅಕಾಡೆಮಿಗೆ  ಆಯ್ಕೆಯಾಗಿರುವ ಮೊಟ್ಟ ಮೊದಲ ಮಂಗಳಮುಂಖಿಯಾಗಿದ್ದಾರೆ.

ನಾನು ಒಂದು ಹೊತ್ತಿನ ಊಟಕ್ಕಾಗಿ ಜೋಗತಿ ನೃತ್ಯ ಕಲಿತೆ, ಈ ನೃತ್ಯವೇ ನನ್ನ ಜೀವನಕ್ಕೆ ಅತಿ ದೊಡ್ಡ ಯಶಸ್ಸು ತಂದಿದೆ ಎಂದು ಜೋಗತಿ ಮಂಜಮ್ಮ ತಿಳಿಸಿದ್ದಾರೆ,

ಮಂಜಮ್ಮ ಜೋಗತಿ ಬಡತನದ ಬವಣೆಯಲ್ಲಿ ಬೆಳೆದು ಮಂಗಳಮುಖೀಯಾಗಿ ಕುಟುಂಬದ ಬಹಿಷ್ಕಾರಕ್ಕೆ ಒಳಗಾಗಿ ಜೋಗತಿಯಾಗಿ ಗೊಲ್ಲರಹಳ್ಳಿಯ ಕಾಳವ್ವ ಜೋಗತಿಯ ಶಿಷ್ಯೆಯಾಗಿ ಜೋಗಕಲೆ ಕಲೆತು. ಇಂದು ರಾಜ್ಯ ಹೊರರಾಜ್ಯಗಳಲ್ಲಿಯೂ ಬಹುದೊಡ್ಡ ಹೆಸರು ಮಾಡಿದ ಕಲಾವಿದೆಯಾಗಿದ್ದಾರೆ.

ಮಂಜಮ್ಮ ಜೋಗತಿ ಮತ್ತು ಅವರ ತಂಡದವರು ಜೋಗತಿ ನೃತ್ಯ, ಯಲ್ಲಮ್ಮನ ನಾಟಕ, ಪ್ರದರ್ಶನ ಮಾಡುತ್ತಾ ಗ್ರಾಮೀಣ ರಂಗಭೂಮಿಗೆ ಒಂದು ಹೊಸ ಪರಿಭಾಷೆ ಬರೆದಿದ್ದಾರೆ. ಡಾ.ಕೆ.ನಾಗತರತ್ನಮ್ಮ ಅವರೊಂದಿಗೆ ಕೈಜೋಡಿಸಿ ಪೌರಾಣಿಕ ನಾಟಕ ಸಾಮಾಜಿಕ ನಾಟಕಗಳಲ್ಲಿಯೂ ಅಭಿನಯಿಸುವ ಮೂಲಕ ಮಂಜಮ್ಮ ಜೋಗತಿ ಶಕ್ತಿಮೀರಿ ಬೆಳೆದು ನಿಂತಿದ್ದಾರೆ
.
ಹೇಮರೆಡ್ಡಿ ಮಲ್ಲಮ್ಮ, ಭಸ್ಮಾಸುರ, ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ಮಂಜಮ್ಮ ಜೋಗತಿ ಅವರು ಜೋಗತಿ ಕಲೆಯಲ್ಲಿ ರಾಜ್ಯಾದ್ಯಾಂತ ಹೆಸರು ಮಾಡಿದ ಕಲಾವಿದೆಯಾಗಿ ಬೆಳೆದವರು. 

ಹೊಸಪೇಟೆಯ ಮರಿಯಮ್ಮನಹಳ್ಳಿಯಲ್ಲಿ  ಚಿಕ್ಕನಹಳ್ಳಿಯಲ್ಲಿ ಸುಶೀಲಮ್ಮ ಎಂಬುವರು ಆಶ್ರಯ ನೀಡಿದರು, ಅಲ್ಲಿ ಬೆಳಗ್ಗೆ ನಾನು ಇಡ್ಲಿ ಮಾಡಿ ಮಾರಾಟ ಮಾಡುತ್ತಿದ್ದೆ ಸಂಜೆ ಶಾಲಾ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದೆ, ನನ್ನದ್ದು ಕಪ್ಪು ಚರ್ಮ, ನಾನು ಡ್ಯಾನ್ಸ್ ಮಾಡುವಾಗ ಮೇಕಪ್ ಹಾಕಿಕೊಂಡು ನಾನು ಸುಂದರವಾಗಿ ಕಾಣುತ್ತಿದ್ದೆ ಎಂದು ಭಾವಿಸಿದ್ದೆ. ಜಾನಪದ ನೃತ್ಯ ಮಾಡುವುದರಿಂದ ನನಗೆ ತೃಪ್ತಿ ಸಿಕ್ಕಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com