ರೋಗಿಗಳ ಮೇಲ್ವಿಚಾರಣೆಗೆ ಸ್ಮಾರ್ಟ್ ಬ್ಯಾಂಡ್ ಸಿದ್ಧಪಡಿಸಿದ ಮೈಸೂರು ಹುಡುಗಿ; ವಿಜ್ಞಾನ ಉತ್ಸವದಲ್ಲಿ ಪ್ರಥಮ ಸ್ಥಾನ

17 ವರ್ಷದ ದೀಪ್ತಿ ಗಣಪತಿ ಹೆಗ್ಡೆ ಅವರು ‘ನವಭಾರತ್ ನಿರ್ಮನ್’ ಡೊಮೈನ್ ಅಡಿಯಲ್ಲಿ 6ನೇ ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ(ಐಐಎಸ್ಎಫ್ -2020) ಪ್ರಥಮ ಸ್ಥಾನ ಗಳಿಸುವ ಮೂಲಕ ಮೈಸೂರಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ.
ದೀಪ್ತಿ
ದೀಪ್ತಿ
Updated on

ಮೈಸೂರು: 17 ವರ್ಷದ ದೀಪ್ತಿ ಗಣಪತಿ ಹೆಗ್ಡೆ ಅವರು ‘ನವಭಾರತ್ ನಿರ್ಮನ್’ ಡೊಮೈನ್ ಅಡಿಯಲ್ಲಿ 6ನೇ ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ (ಐಐಎಸ್ಎಫ್ -2020) ಪ್ರಥಮ ಸ್ಥಾನ ಗಳಿಸುವ ಮೂಲಕ ಮೈಸೂರಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಮೈಸೂರಿನ ಬಿಎಎಸ್ ಇ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ದೀಪ್ತಿ ಅವರು ಪ್ರಥಮ ಸ್ಥಾನ ಪಡೆಯುವ ಮೂಲಕ 25 ಸಾವಿರ ರೂ. ನಗದು ಬಹುಮಾನ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ 45 ವರ್ಷದವರೆಗಿನ 3000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ದೀಪ್ತಿ ಡಿಜಿಟಲ್ ಗ್ರಾಮೀಣ ಸಬಲೀಕರಣಕ್ಕಾಗಿ ವೈವಿಧ್ಯಮಯ ಸ್ಮಾರ್ಟ್ ಹೆಲ್ತ್‌ಕೇರ್ ಸಿಸ್ಟಮ್‌ನ “ಅಂತರ್ಗತ ಬೆಳವಣಿಗೆಗೆ ಸ್ವಾವಲಂಬಿ ಸ್ಮಾರ್ಟ್ ಹಳ್ಳಿಗಳ ನಿರ್ಮಾಣ” ಎಂಬ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿದರು. ಗ್ರಾಮೀಣ ಗರ್ಭಿಣಿಯರು, ವೃದ್ಧರು ಮತ್ತು ಹೃದಯ ರೋಗಿಗಳು ತಮ್ಮ ಮನೆಗಳಲ್ಲಿಯೇ ಇದ್ದರೂ ಅವರ ಮೇಲ್ಚಿಚಾರಣೆಗಾಗಿ ಸ್ಮಾರ್ಟ್ ಬ್ಯಾಂಡ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ದೀಪ್ತಿ ಅವರು ಸ್ಮಾರ್ಟ್ ಬ್ಯಾಂಡ್ ರೂಪದ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ತೋಳಿನ ಮೇಲೆ ಅಥವಾ ಮಣಿಕಟ್ಟಿನ ಮೇಲೆ ಧರಿಸಬಹುದು. ಇದು ನೈಜ ಸಮಯದಲ್ಲಿ 10 ವಿಭಿನ್ನ ನಿಯತಾಂಕಗಳನ್ನು ಅಳೆಯಬಹುದು ಮತ್ತು ದೇಹದ ಮೂಲ ತಾಪಮಾನ, ಬಿಪಿ, ಕೆಮ್ಮು ಹಾಗೂ ಕೆಲವು ಕೋವಿಡ್ ರೋಗಲಕ್ಷಣಗಳು ಸೇರಿದಂತೆ ಹಲವು ರೋಗ ಲಕ್ಷಣಗಳನ್ನು ಇದು ಗುರುತಿಸುತ್ತದೆ.

ಈ ಬ್ಯಾಂಡ್ ಅನ್ನು ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಸಂಯೋಜಿಸಬಹುದು, ಅದು ಡೇಟಾವನ್ನು ಸ್ವೀಕರಿಸುತ್ತದೆ ಮತ್ತು ಕ್ಲೌಡ್ ಸರ್ವರ್‌ಗೆ ರವಾನಿಸುತ್ತದೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜತೆ ಮಾತನಾಡಿದ ದೀಪ್ತಿ, “ಹೆಲ್ತ್‌ಕೇರ್ ಬಡ ಮತ್ತು ಗ್ರಾಮೀಣ ಜನರಿಗೆ ಐಷಾರಾಮಿ ಆಗಿ ಮಾರ್ಪಡಿಸಬೇಕು. ಈ ಕೋವಿಡ್ ನಂತರ ಏಕಾಏಕಿ ಪರಿಸ್ಥಿತಿ ಹದಗೆಟ್ಟಿದೆ. ಗ್ರಾಮೀಣ ಆರೋಗ್ಯ ರಕ್ಷಣೆ ದೇಶ ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಜನಸಂಖ್ಯೆಯ ಶೇಕಡಾ 70 ಕ್ಕಿಂತ ಹೆಚ್ಚು ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಕಡಿಮೆ ಮಟ್ಟದ ಆರೋಗ್ಯ ಸೌಲಭ್ಯಗಳನ್ನು ಹೊಂದಿದ್ದಾರೆ. ಇದರಿಂದ ರೋಗಿಗಳ ಮರಣ ಪ್ರಮಾಣ ಹೆಚ್ಚುತ್ತಿದೆ'' ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com