'ಸ್ಟೇ ಎಟ್ ಹೋಂ' ಸ್ಪರ್ಧೆ: ಡ್ಯಾನ್ಸ್ ಮಾಡಿ ಮನರಂಜನೆ ನೀಡಿ 1 ಕೋಟಿ ರೂ. ಗೆದ್ದ ಜೋಧ್ ಪುರದ ಕೂಲಿ ಕಾರ್ಮಿಕನ ಮಗ!

ಕೊರೋನಾ ಲಾಕ್ ಡೌನ್ ಸಮಯ ಹಲವರಿಗೆ ಹಲವು ರೀತಿಯಲ್ಲಿ ಕಷ್ಟಗಳನ್ನು ನೀಡಿದರೆ ಕೆಲವರ ಜೀವನದಲ್ಲಿ ಕೆಲವು ವಿಷಯದಲ್ಲಿ ಒಳ್ಳೆಯದನ್ನು ಮಾಡಿರಬಹುದು. ಲಾಕ್ ಡೌನ್ ನಿಂದ ಆರ್ಥಿಕವಾಗಿ ಕಷ್ಟವಾಗಿದೆ ಎಂದು ಬಹುತೇಕರು ಅನ್ನುತ್ತಿದ್ದರೆ ರಾಜಸ್ತಾನದ ಜೋಧ್ ಪುರದ 18 ವರ್ಷದ ಯುವಕನೊಬ್ಬ, ಅದೂ ಕಾರ್ಮಿಕನ ಮಗ 1 ಕೋಟಿ ರೂಪಾಯಿ ಗೆದ್ದಿದ್ದಾನೆ ಎಂದರೆ ನಂಬುತ್ತೀರಾ?
ಕುಟುಂಬದವರೊಂದಿಗೆ ಯುವ ರಾಜ್
ಕುಟುಂಬದವರೊಂದಿಗೆ ಯುವ ರಾಜ್
Updated on

ಜೈಪುರ: ಕೊರೋನಾ ಲಾಕ್ ಡೌನ್ ಸಮಯ ಹಲವರಿಗೆ ಹಲವು ರೀತಿಯಲ್ಲಿ ಕಷ್ಟಗಳನ್ನು ನೀಡಿದರೆ ಕೆಲವರ ಜೀವನದಲ್ಲಿ ಕೆಲವು ವಿಷಯಗಳಲ್ಲಿ ಒಳ್ಳೆಯದನ್ನು ಮಾಡಿರಬಹುದು. ಲಾಕ್ ಡೌನ್ ನಿಂದ ಆರ್ಥಿಕವಾಗಿ ಕಷ್ಟವಾಗಿದೆ ಎಂದು ಬಹುತೇಕರು ಅನ್ನುತ್ತಿದ್ದರೆ ರಾಜಸ್ತಾನದ ಜೋಧ್ ಪುರದ 18 ವರ್ಷದ ಯುವಕನೊಬ್ಬ, ಅದೂ ಕಾರ್ಮಿಕನ ಮಗ 1 ಕೋಟಿ ರೂಪಾಯಿ ಗೆದ್ದಿದ್ದಾನೆ ಎಂದರೆ ನಂಬುತ್ತೀರಾ?

ಫ್ಲಿಪ್ ಕಾರ್ಟ್ ಕಂಪೆನಿ ಲಾಕ್ ಡೌನ್ ಸಮಯದಲ್ಲಿ ಸ್ಟೇ ಎಟ್ ಹೋಂ ಎಂಬ ವಿಶಿಷ್ಟ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರತಿವಾರ 10 ಲಕ್ಷ ರೂಪಾಯಿ ಮತ್ತು ಕೊನೆಯಲ್ಲಿ ವಿಜೇತರಾದವರಿಗೆ 1 ಕೋಟಿ ರೂಪಾಯಿ ಮೆಗಾ ಬಹುಮಾನ ಎಂದು ಪ್ರಕಟಿಸಿತ್ತು. ಫ್ಲಿಪ್ ಕಾರ್ಟ್ ಕಂಪೆನಿ ಆಯೋಜಿಸಿದ್ದು ಸ್ಟೇ ಎಟ್ ಹೋಂ ಸ್ಪರ್ಧೆಯಲ್ಲಿ ಯಾರು ಮನೆಯಲ್ಲಿದ್ದು ಚೆನ್ನಾಗಿ ಮನರಂಜನೆ ನೀಡುತ್ತಾರೋ ಅವರಿಗೆ ಭಾರತದ ನಂಬರ್ 1 ಮನರಂಜನೆಗಾರ ಎಂಬ ಬಿರುದಿನ ಜೊತೆಗೆ ನಗದು ಬಹುಮಾನ.

ರಾಜಸ್ತಾನದ ಜೋಧ್ ಪುರದ ಕಾರ್ಮಿಕನ ಮಗ ಯುವರಾಜ್ ಸಿಂಗ್ ತನ್ನೂರಿನಲ್ಲಿ ಬಾಬಾ ಜಾಕ್ಸನ್ ಎಂದೇ ಜನಪ್ರಿಯ. ಆತನ ಡ್ಯಾನ್ಸ್ ಶೈಲಿ, ಪ್ರತಿಭೆಗೆ ಊರವರು ಮೈಕಲ್ ಜಾಕ್ಸನ್ ನ ರೀತಿ ಡ್ಯಾನ್ಸ್ ಮಾಡುತ್ತಾನೆಂದು ಇಟ್ಟ ಹೆಸರು ಅದು.

ಆರಂಭದಲ್ಲಿ ಯುವರಾಜ್ ನ ಈ ಕಲೆಗೆ ಆತನ ಕುಟುಂಬದಲ್ಲಿ ಸಹೋದರಿ ಬಿಟ್ಟರೆ ಬೇರ್ಯಾರು ಪ್ರೋತ್ಸಾಹ ನೀಡುತ್ತಿರಲಿಲ್ಲವಂತೆ. ಕೆಲ ಸಮಯಗಳ ಹಿಂದೆ ಇವರಲ್ಲಿ ಮೊಬೈಲ್ ಕೂಡ ಇರಲಿಲ್ಲವಂತೆ. ಮೊಬೈಲ್ ಖರೀದಿಸಿದ ನಂತರ ಯುವರಾಜ್ ಟಿಕ್ ಟಾಕ್ ಅಕೌಂಟನ್ನು ತೆರೆದನಂತೆ. ಅದರಲ್ಲಿ ಯುವರಾಜ್ ಮತ್ತು ಆತನ ಸೋದರಿ ತಮಾಷೆಯ ವಿಡಿಯೊಗಳನ್ನು ನೋಡುತ್ತಿದ್ದರಂತೆ. ತಮ್ಮ ತಮಾಷೆಯ ವಿಡಿಯೊಗಳನ್ನು ಮಾಡಿ ಅಪ್ ಲೋಡ್ ಮಾಡುತ್ತಿದ್ದರಂತೆ.

ಬಾಲಿವುಡ್ ನಟ ಟೈಗರ್ ಶ್ರಾಫ್ ನ ಮುನ್ನಾ ಮೈಕೆಲ್ ತಮ್ಮನ ಜೀವನವನ್ನು ಬದಲಿಸಿತು ಎನ್ನುತ್ತಾಳೆ ಸೋದರಿ.ಈ ಸಿನೆಮಾ ನೋಡಿದ ಮೇಲೆ ಅದರಲ್ಲಿನ ಡ್ಯಾನ್ಸ್ ಸ್ಟೆಪ್ ಕಲಿಯಲಾರಂಭಿಸಿದನಂತೆ. 5-6 ತಿಂಗಳು ಅಭ್ಯಾಸ ಮಾಡಿದ ನಂತರ ಮೈಕಲ್ ಜಾನ್ಸನ್ ರೀತಿಯಲ್ಲಿ ಡ್ಯಾನ್ಸ್ ಮಾಡಲಾರಂಭಿಸಿದನಂತೆ. ಟಿಕ್ ಟಾಕ್ ವಿಡಿಯೊಗಳಿಗೆ ಹಲವು ಲೈಕ್ಸ್ ಗಳು ಬರಲಾರಂಭಿಸಿದವಂತೆ. ಒಂದು ದಿನ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಬಾಬಾ ಜಾಕ್ಸನ್ ನ ಡ್ಯಾನ್ಸ್ ವಿಡಿಯೊ ಶೇರ್ ಮಾಡಿದ್ದರಂತೆ. ಅಂದಿನಿಂದ ಇಡೀ ದೇಶದಲ್ಲಿ ಫೇಮಸ್ಸು ಆಗಿ ಅದೃಷ್ಟ ಬದಲಾಯಿತು ಎನ್ನುತ್ತಾನೆ.

ಉತ್ತಮ ಡ್ಯಾನ್ಸರ್ ಆಗಬೇಕೆಂದು ಕನಸು ಕಾಣುತ್ತಿರುವ ಬಾಬಾ ಜಾಕ್ಸನ್ ಗೆ ಡ್ಯಾನ್ಸ್ ನಲ್ಲಿ ಟೈಗರ್ ಶ್ರಾಫ್ ಮತ್ತು ಪ್ರಭು ದೇವ ಆದರ್ಶವಂತೆ.ಈತನ ಸಾಧನೆ ಇದೀಗ ಇಡೀ ಊರಿನಲ್ಲಿ ಜನಪ್ರಿಯವಾಗಿದೆ. ಕುಟುಂಬದವರಿಗೆ ಖುಷಿ ಕೊಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com