ಲಾಕ್ ಡೌನ್ ನಿಂದ ಕಂಗೆಟ್ಟ ಬಡವರಿಗೆ ಆಹಾರ ಪೂರೈಸಲು ಪತ್ನಿಯ ಆಭರಣಗಳನ್ನು ಮಾರಿದ ಬಿಹಾರಿ ಯುವಕ

"ಮಾನವ ಸೇವೆ ದೇವರ ಸೇವೆ"  ಎಂಬ ಹಳೆಯ ಮಾತಿನಂತೆ, ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರದ 28 ವರ್ಷದ ಯುವಕ ಧೀರಜ್ ರಾಯ್, ಲಾಕ್‌ಡೌನ್‌ನ ಸಂಕಷ್ಟಕ್ಕೆ ಸಿಕ್ಕಿರುವ ಬಡವರಿಗೆ ತನ್ನ ಕೈಲಾದ ಸೇವೆ ನೀಡುವ ಮೂಲಕ ಒಂದು ಉದಾಹರಣೆಯಾಗಿದ್ದಾನೆ. 
ಧೀರಜ್ ರಾಯ್
ಧೀರಜ್ ರಾಯ್
Updated on

ಪಾಟ್ನಾ: "ಮಾನವ ಸೇವೆ ದೇವರ ಸೇವೆ"  ಎಂಬ ಹಳೆಯ ಮಾತಿನಂತೆ, ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರದ 28 ವರ್ಷದ ಯುವಕ ಧೀರಜ್ ರಾಯ್, ಲಾಕ್‌ಡೌನ್‌ನ ಸಂಕಷ್ಟಕ್ಕೆ ಸಿಕ್ಕಿರುವ ಬಡವರಿಗೆ ತನ್ನ ಕೈಲಾದ ಸೇವೆ ನೀಡುವ ಮೂಲಕ ಒಂದು ಉದಾಹರಣೆಯಾಗಿದ್ದಾನೆ. 

ರಾಯ್ ತನ್ನ ಉಳಿತಾಯಗಳೆಲ್ಲವನ್ನು ಬಳಸಿಕೊಂಡದ್ದಲ್ಲದೆ ಬಡ ಕುಟುಂಬಗಳಿಗೆ ಅಡಿಗೆ ಸಾಮಗ್ರಿ ಒದಗಿಸಲು  ತನ್ನ ಹೆಂಡತಿಯ ಚಿನ್ನದ ಆಭರಣಗಳನ್ನು ಮಾರಾಟ ಮಾಡಿದ್ದಾನೆ. ಕೊರೋನಾ ಲಾಕ್ ಡೌನ್ ನಿಂದ ಬಡ ಜನರಿಗೆ  ತೀವ್ರ ಸಂಕಷ್ಟ  ಎದುರಾಗಿದ್ದು "ಮಾರ್ಚ್ 24 ರಂದು ಮಗುವೊಂದು ಹಸಿವಿನಿಂದ ಕುಳಿತಿರುವುದು ಕಂಡು ನನ್ನ ಮನಸ್ಸು ಕರಗಿದೆ"ರಾಯ್  ಪತ್ರಿಕೆಗೆ ಹೇಳಿದ್ದಾರೆ.

ರಾಯ್ ಬಳಿಕ ಆ ಮಗುವಿಗೆ ಆಹಾರ ವ್ಯವಸ್ಥೆ ಮಾಡಿದ್ದಾರೆ.  ಪ್ರತಿದಿನ ತೊಂದರೆಯಲ್ಲಿರುವ ಜನರಿಗೆ ಆಹಾರವನ್ನು ವಿತರಿಸುವ ಮುನ್ನ ತಾನೇನೂ ತಿನ್ನಬಾರದೆಂದು ಸಹ  ಪ್ರತಿಜ್ಞೆ ಮಾಡಿದರು."ಅಂದಿನಿಂದ, ನಾನು ನನ್ನ ಸ್ವಂತ,  ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಉಳಿತಾಯದೊಂದಿಗೆ ಆಹಾರವನ್ನು ವಿತರಿಸುತ್ತಿದ್ದೇನೆ. ಪ್ರತಿದಿನ, ಮನೆಗೆ ಹಿಂದಿರುಗಿದ ನಂತರವೇ ನಾನು ಆಹಾರವನ್ನು ತಿನ್ನುತ್ತೇನೆ, ವೈಶಾಲಿ ಮತ್ತು ಇತರ ಜಿಲ್ಲೆಗಳ ಬಡ ಜನರಿಗೆ ಆಹಾರವನ್ನು ವಿತರಿಸಿದ್ದೇನೆ. "

ಬ್ಯಾಂಕಿನಿಂದ ಸುಮಾರು 2.5 ಲಕ್ಷ ರೂ.ಗಳಷ್ಟು ತನ್ನ ಉಳಿತಾಯ ಖಾಲಿಯಾದ ನಂತರ ರಾಯ್ ಗೆ ಆಹಾರ ವಿತರಣೆ ಮಾಡುವುದು ಕಠಿಣವಾಗಿತ್ತು. ಅದರಿಂದ ನಿರಾಶನಾಗಿದ್ದ ಆತನಿಗೆ ಅವನ ಪತ್ನಿ ಮನೀಶಾ ಕುಮಾರಿ  ಜನರಿಗೆ ಸೇವೆ ಸಲ್ಲಿಸಲು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಮಾರಲು ಹೇಳಿದ್ದಾರೆ. "ಬಡವರು ಹಸಿವಿನಿಂದ ಮಲಗಿದ್ದರೆನಾವು ಚಿನ್ನದ ಆಭರಣ ಧರಿಸಿ ಓದಾಡಿದರೆ ಅದು ನಮಗೆ ಶೋಭೆಯಲ್ಲ. ನಾವು ಮನುಷ್ಯರಾಗಿರುವುದು ವ್ಯರ್ಥ. " ಎಂದು ಅವರು ರಾಯ್‌ಗೆ ಹೇಳಿದ್ದಾರೆ. ಅಲ್ಲದೆ ತನ್ನ ಚಿನ್ನ ಮಾರಾಟ ಮಾಡಲು ಕೇಳಿದ್ದಾಳೆ.

ಧೀರಜ್ ರಾಯ್ ದಂಪತಿ 
ಧೀರಜ್ ರಾಯ್ ದಂಪತಿ 

"ನಾನು ಮಾನವೀಯ ಸೇವೆಗಳ ಮೂಲಕ ದೇವರನ್ನು ನೋಡಲು ಪ್ರಯತ್ನಿಸುತ್ತಿದ್ದೇನೆ; ಏಕೆಂದರೆ ದೇವರು ಸ್ವರ್ಗದಲ್ಲಿ ಅಥವಾ ದೇವಾಲಯದಲ್ಲಿದ್ದ. ಈ ಎಲ್ಲಾ ಬಡ ಜನರಲ್ಲಿದ್ದಾನೆ. " ಮಹಾತ್ಮಾ ಗಾಂಧಿಯನ್ನು ಉಲ್ಲೇಖಿಸಿ ರಾಯ್ ಹೇಳಿದ್ದಾನೆ. , ಸಮಾಜಕ್ಕೆ ಸೇವೆಸಮಸ್ಯೆಯಲ್ಲಿರುವ ನಿರ್ಗತಿಕರಿಗೆ ಸೇವೆ ನೀಡುವುದು ರಾಷ್ಟ್ರವನ್ನು ಪ್ರೀತಿಸುವ ಸೇವೆಯಾಗಿದೆ. ಸಾಮಾಜಿಕ ಸೇವೆಗಳ ಸಲುವಾಗಿ ಕ್ರೀಡಾ ಕೋಟಾದಡಿಯಲ್ಲಿ ತನಗೆ ನೀಡಲಾಗಿದ್ದ ರೈಲ್ವೆಯ ಕೆಲಸವನ್ನು ತ್ಯಜಿಸಿದ್ದೇನೆ ಮತ್ತು ಅಂದಿನಿಂದ ಮೋಟಾರುಬೈಕಿನಲ್ಲಿ ಸುತ್ತಲಿನ ಪ್ರದೇಶದಲ್ಲಿ ಔಷಧಿಗಳು , ತರಕಾರಿಗಳು ಮತ್ತು ಆಹಾರ ಪದಾರ್ಥಗಳನ್ನಿಟ್ಟು ತಿರುಗುತ್ತಿದ್ದೇನೆ. ಕಳೆದ 69 ದಿನಗಳಲ್ಲಿ, 250 ಹಳ್ಳಿಗಳ ಬಡ ಕುಟುಂಬಗಳಿಗೆ ಸೇವೆ ಸಲ್ಲಿಸಿದ್ದೇನೆ. ನಾನು ಅವರ ಮನೆಗಳಿಗೆ  ತರಕಾರಿಗಳು, ಆಹಾರ ಪದಾರ್ಥಗಳನ್ನು ನೀಡುತ್ತೇನೆ. "

2018 ರಲ್ಲಿ ಮನೀಶಾ ಕುಮಾರಿಯನ್ನು ಮದುವೆಯಾಗಿದ್ದ ರಾಯ್ ತಾವು ಸಮಾಜ ಸೇವೆಗಾಗಿ ಯುವ ಜನಶಕ್ತಿ" ಎಂಬ ಸಾಮಾಜಿಕ ಸಂಘಟನೆಯನ್ನು ರಚಿಸಿದ್ದಾರೆ.ಇಲ್ಲಿಯವರೆಗೆ, ರಾಯ್ 7 ರಿಂದ 8 ಲಕ್ಷಕ್ಕಿಂತ ಹೆಚ್ಚಿನ ಆಹಾರ ಮತ್ತು ಔಷಧಿಗಳು, ಮಾಸ್ಕ್ ಗಳು, ಸ್ಯಾನಿಟೈಜರ್‌ಗಳನ್ನು ವಿತರಿಸಿದ್ದಾರೆ."ನಾನು 3 ಲಕ್ಷ ರೂ.ಗಿಂತ ಹೆಚ್ಚಿನ ಸಾಲವನ್ನು ಹೊಂದಿದ್ದೇನೆ. ಆದರೆ ಜನರಿಗೆ ಸೇವೆ ಸಲ್ಲಿಸುವಲ್ಲಿ ಸಂತೋಷವನ್ನು ಪಡೆಯುತ್ತಿದ್ದೇನೆ, ಅವರು ಯಾವುದೇ ತಪ್ಪು ಮಾಡಿಲ್ಲ. ಆದರೆ ಬಡವರಾಗಿದ್ದಾರೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com