ನೊಬೆಲ್ ಪುರಸ್ಕೃತ ಯುಎನ್ ವಿಶ್ವ ಆಹಾರ ಕಾರ್ಯಕ್ರಮದ ಯಶಸ್ಸಿನ ಹಿಂದಿನ ಒಡಿಶಾ ಮೂಲದ ವಿಜ್ಞಾನಿಯ ಕಥೆ!

ಈ ವರ್ಷ ಯುಎನ್ ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ)ಕ್ಕೆ ಶಾಂತಿ ನೊಬೆಲ್ ಪ್ರಶಸ್ತಿ ಘೋಷಣೆಯಾದಾಗ ಭಾರತದ ಸ್ಟೀಲ್ ಸಿಟಿ ರೂರ್ಕೆಲಾ ಜನರ ಸಂತಸಕ್ಕೆ ಪಾರವಿರಲಿಲ್ಲ. ಏಕೆಂದರೆ ಡಬ್ಲ್ಯುಎಫ್‌ಪಿ ವಿಶ್ವದಾತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದದ್ದರ ಹಿಂದೆ ಈ ನಗರದ ಕೊಡುಗೆ ಮಹತ್ವದ್ದಾಗಿದೆ.
ಪ್ರಣವ್ ಖೈತಾನ್
ಪ್ರಣವ್ ಖೈತಾನ್
Updated on

ರೂರ್ಕೆಲಾ: ಈ ವರ್ಷ ಯುಎನ್ ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ)ಕ್ಕೆ ಶಾಂತಿ ನೊಬೆಲ್ ಪ್ರಶಸ್ತಿ ಘೋಷಣೆಯಾದಾಗ ಭಾರತದ ಸ್ಟೀಲ್ ಸಿಟಿ ರೂರ್ಕೆಲಾ ಜನರ ಸಂತಸಕ್ಕೆ ಪಾರವಿರಲಿಲ್ಲ. ಏಕೆಂದರೆ ಡಬ್ಲ್ಯುಎಫ್‌ಪಿ ವಿಶ್ವದಾತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದದ್ದರ ಹಿಂದೆ ಈ ನಗರದ ಕೊಡುಗೆ ಮಹತ್ವದ್ದಾಗಿದೆ.

ಡಬ್ಲ್ಯುಎಫ್‌ಪಿಯ ಸಲಹಾ ಮಂಡಳಿಯ ಸದಸ್ಯ ಮತ್ತು ಅದರ ಕೃತಕ ಬುದ್ಧಿಮತ್ತೆ (ಎಐ) ಕಾರ್ಯಾಚರಣೆಗಳ ಮುಖ್ಯಸ್ಥ ಪ್ರಣವ್ ಖೈತಾನ್ ಅವರ ಜನ್ಮಸ್ಥಳ ಇದೇ ರೂರ್ಕೆಲಾವಾಗಿದೆ, ಅವರು ತಂತ್ರಜ್ಞಾನ-ಆವಿಷ್ಕಾರಗಳ ಜಾರಿಗೆ ತಂದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಈ ಕಾರಣಕ್ಕೆ  ಕಾರ್ಯಕ್ರಮವನ್ನು ಹೆಚ್ಚು ಪರಿಣಾಮಕಾರಿ ಮತ್ತು ಅಂತರ್ಗತವಾಗಿ ಜಾರಿ ಮಾಡಲು ಸಹಕಾರಿಯಾಗಿತ್ತು. ಮಾನವೀಯ ಸೇವಾಕಾರ್ಯದಲ್ಲಿ ಕ್ರಾಂತಿಯುಂಟುಮಾಡಲು ಎಐ ಬಳಕೆಯನ್ನು ಜಾರಿಗೊಳಿಸಿದ ಪ್ರಣವ್ ಅವರ ನಾಯಕತ್ವಕ್ಕೆ ಡಬ್ಲ್ಯುಎಫ್‌ಪಿ ಧನ್ಯವಾದ ಅರ್ಪಿಸಿದೆ, ಇದು ಲಕ್ಷಾಂತರ ಜನರನ್ನು ಹಸಿವಿನಿಂದ ದೂರವಿಡಲು ಸಹಾಯ ಮಾಡಿತು.

’ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ನೊಂದಿಗೆ ಫೋನ್‌ನಲ್ಲಿ ಮಾತನಾಡಿದ ಪ್ರಣವ್ "ಮಾನವೀಯತೆ ಸುಧಾರಣೆಗಾಗಿ ಡಬ್ಲ್ಯುಎಫ್‌ಪಿಗೆ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನನಗೆ ತುಂಬಾ ಸಂತೋಷವಾಗಿದೆ ಮತ್ತು ಇದು ನನ್ನ ಪಾಲಿನ ಅದೃಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದರು.

ಪ್ರಣವ್ ನಗರದಲ್ಲಿ ಜನಿಸಿದರೂ ಅವರ ಕುಟುಂಬ ಕೋಲ್ಕತ್ತಾದಲ್ಲಿ ನೆಲೆಸಿದೆ. ಅವರ ತಂದೆ ಪವನ್ ಖೈತಾನ್ ಚಾರ್ಟರ್ಡ್  ಅಕೌಂಟೆಂಟ್. ಅವ ರ ತಾಯಿ ಉಷಾ ರೂರ್ಕೆಲಾಕ್ಕೆ ಸೇರಿದವರಾಗಿದ್ದು, ಪ್ರಣವ್ ರಜೆ ಇರುವಾಗ  ಮನೆಗೆ ಬಂದಿದ್ದರು. ಅವರ ಕಿರಿಯ ಸಹೋದರ ಪರಾಸ್ ಐಐಟಿ-ಖರಗ್‌ಪುರದಿಂದ ಎಂಜಿನಿಯರಿಂಗ್ ಮತ್ತುಬ್ಯುಸಿನೆಸ್ ಮ್ಯಾನೇಜ್ ಮೆಂಟ್ ನಲ್ಲಿ ಪದವಿಗಳಿಸಿದ್ದಾರೆ. 

ಪ್ರಣವ್ ಅವರು 2009 ರಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ರೂರ್ಕೆಲಾ (ಎನ್‌ಐಟಿ-ಆರ್) ನಿಂದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಲು ರೂರ್ಕೆಲಾಕ್ಕೆ ಆಗಮಿಸಿದ್ದರು. ಅವರು  ನಂತರ ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.

ಅವರು ಎನ್‌ಐಟಿ-ಆರ್ ಕ್ಯಾಂಪಸ್‌ನಲ್ಲಿಉತ್ತಮ ಸ್ನೇಹಿತರೊಂದಿಗೆ ಕಳೆದ ಸಮಯದ ನೆನಪುಗಳ ಕುರಿತು ಮಾತನಾಡಿದರು. "ಯುಎಸ್ ನಲ್ಲಿ ಸೆಕ್ಟರ್ ಏರಿಯಾಗಳಲ್ಲಿ  ಬೈಸಿಕಲ್ ಗಳಲ್ಲಿ  ಮಾರಾಟವಾಗುವ ಆಲೂ ದಮ್ ಮತ್ತು ದಾಹಿಬರಾ ಮತ್ತು ಬಂಡಿಗಳ ಮೇಲೆ ಸವಾರಿಯನ್ನು ನಾನು ಬಹಳವಾಗಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ".

ಇನ್ನು ಪ್ರಣವ್ ತಂದೆ ಪವನ್ ತಮ್ಮ ಮಗನ ಬಗ್ಗೆ ಮಾತನಾಡುವಾಗ ಹೆಮ್ಮೆಯಿಂದ ಇದ್ದರು. "ಜಾಗತಿಕ ಹಸಿವಿನ ನಿರ್ಮೂಲನೆ ಮಾಡುವ ಈ ಉದಾತ್ತ ಧ್ಯೇಯಕ್ಕೆ ಪ್ರಣವ್ ಕೊಡುಗೆ ನೀಡಿದ್ದಕ್ಕೆ ಹೆತ್ತವರಾದ ನಾವು ತುಂಬಾ ಹೆಮ್ಮೆ ಹಾಗೂ ಸಂಭ್ರಮಪಡುತ್ತೇವೆ. ಬಾಲ್ಯದಿಂದಲೂ ನಮ್ಮ ಇಬ್ಬರು ಪುತ್ರರು ವಿಜ್ಞಾನ ಕ್ಷೇತ್ರದಲ್ಲಿ ಬಹಳ ಆಕರ್ಷಿತರಾಗಿದ್ದರು. ಮಾನವೀಯ ಸಮಾಜಕ್ಕೆ  ಅನುಕೂಲವಾಗುವಂತೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸುವುದು ಅವರ ಉದ್ದೇಶವಾಗಿತ್ತು"ಅವರು ಹೇಳಿದರು.

ಕಳೆದ ಕೆಲವು ವರ್ಷಗಳಿಂದ ಭಾರತದ ತಾಂತ್ರಿಕ ಸಾಮರ್ಥ್ಯಗಳು ಹಲವು ಪಟ್ಟು ಹೆಚ್ಚಾಗಿದೆ ಮತ್ತು ದೇಶವನ್ನು ಈಗ ಜಾಗತಿಕ ಮಟ್ಟದಲ್ಲಿ ಗೌರವದಿಂದ ನೋಡಲಾಗುತ್ತಿದೆ. ಎಂದು ಪ್ರಣವ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಜನಸಂಖ್ಯೆಯ ಸುಧಾರಣೆಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಗೂಗಲ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಚರ್ಚೆ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. 

ಎನ್ಐಟಿ-ಆರ್ ನಿರ್ದೇಶಕ ಅನಿಮೆಶ್ ಬಿಸ್ವಾಸ್, "ಕ್ಯಾಂಪಸ್ ಪ್ರಣವ್ ಬಗ್ಗೆ ಹೆಮ್ಮೆಪಡುತ್ತದೆ ಮತ್ತು ಅವಕಾಶವನ್ನು ನೀಡಿದರೆ, ಸಂಸ್ಥೆಯ ಹಳೆ ವಿದ್ಯಾರ್ಥಿಗಳುಅದ್ಭುತವನ್ನೇ ಸಾಧಿಸುತ್ತಾರೆನ್ನಲು ಇದು ಸಾಕ್ಷಿ" ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com