ವಿಶ್ವ ಗುಬ್ಬಚ್ಚಿ ದಿನ: ಕಾಂಕ್ರೀಟ್ ಕಾಡಿನಲ್ಲಿ ಪುಟ್ಟ ಮರಿಗುಬ್ಬಿಗಾಗಿ ಅರಸುತ್ತಾ....

ಆಧುನಿಕ ಜೀವನಶೈಲಿ , ಮೊಬೈಲ್ ಗೋಪುರಗಳು, ಅಥವಾ ಸ್ಥಳಾವಕಾಶದ ಕೊರತೆ ಕಾರಣ ಬೆಂಗಳೂರು ನಗರ ಹಾಗೂ ರಾಜ್ಯಾದ್ಯಂತ ನಮ್ಮ ಬಾಲ್ಯದ ಸ್ನೇಹಿತರಾಗಿದ್ದ ಗುಬ್ಬಚ್ಚಿಗಳು ಕಾಣದಂತಾಗಿವೆ. ಪುಟ್ಟ ಹಕ್ಕಿಗೆ ಗೂಡು ಕಟ್ಟಲು ಅನುಕೂಲಕರವಾಗುವಂತೆ ಪೆಟ್ಟಿಗೆಗಳ ನಿರ್ಮಾಣ, ವಾತಾವರಣ ಸೃಷ್ಟಿ ಮಾಡಿದ್ದರೂ ಸಹ ಗುಬ್ಬಚ್ಚಿಗಳ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ.

Published: 20th March 2020 12:38 PM  |   Last Updated: 20th March 2020 12:38 PM   |  A+A-


ಗುಬ್ಬಚ್ಚಿ

Posted By : Raghavendra Adiga
Source : The New Indian Express

ಬೆಂಗಳೂರು: ಆಧುನಿಕ ಜೀವನಶೈಲಿ , ಮೊಬೈಲ್ ಗೋಪುರಗಳು, ಅಥವಾ ಸ್ಥಳಾವಕಾಶದ ಕೊರತೆ ಕಾರಣ ಬೆಂಗಳೂರು ನಗರ ಹಾಗೂ ರಾಜ್ಯಾದ್ಯಂತ ನಮ್ಮ ಬಾಲ್ಯದ ಸ್ನೇಹಿತರಾಗಿದ್ದ ಗುಬ್ಬಚ್ಚಿಗಳು ಕಾಣದಂತಾಗಿವೆ. ಪುಟ್ಟ ಹಕ್ಕಿಗೆ ಗೂಡು ಕಟ್ಟಲು ಅನುಕೂಲಕರವಾಗುವಂತೆ ಪೆಟ್ಟಿಗೆಗಳ ನಿರ್ಮಾಣ, ವಾತಾವರಣ ಸೃಷ್ಟಿ ಮಾಡಿದ್ದರೂ ಸಹ ಗುಬ್ಬಚ್ಚಿಗಳ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ.

ಈ ವರ್ಷ 2,020 ಆವಾಸಸ್ಥಾನಗಳನ್ನು ಸ್ಥಾಪಿಸುವ ಮೂಲಕ ಈ ಪುಟ್ಟ ಜೀವಿಗಳಿಗೆ ಪರಿಸರವನ್ನು ಹೆಚ್ಚು ಅನುಕೂಲಕರವಾಗಿಸಲು ಪಕ್ಷಿವಿಜ್ಞಾನಿಗಳು ತಮ್ಮ ಅಭಿಯಾನವನ್ನು ಆಯೋಜಿಸಿದ್ದಾರೆ.ನೇಚರ್ ಫಾರೆವರ್ ಸೊಸೈಟಿಯ ಸಂಸ್ಥಾಪಕ ಮತ್ತು ಅಧ್ಯಕ್ಷ ಮೊಹಮ್ಮದ್ ದಿಲಾವರ್ ಅವರು ಈ ಸಂಬಂಧ ಪತ್ರಿಕೆಗೆ ತಿಳಿಸಿದ್ದು ತಮ್ಮ ಆವರಣದಲ್ಲಿ ಗೂಡಿನ ಪೆಟ್ಟಿಗೆಗಳು, ಪಕ್ಷಿಗಳಿಗೆ ಅಗತ್ಯವಾದ ಹುಳ ಹುಪ್ಪಟೆಗಳು, ನೀರಿನ  ತಾಣಗಳ ಸ್ಥಾಪಿಸಲು ಅನುಕೂಲವಾಗುವಂತೆ  ಗುಬ್ಬಚ್ಚಿಗಳಿಗೆ ಸೂಕ್ತವಾದ ಜೀವನ ನಡೆಸಲು ಅನುಕೂಲಕರ ಪ್ರದೇಶದ ರಚನೆಗಾಗಿ ಸಿಎಸ್ಆರ್ ಹಣವನ್ನು ಪಡೆಯಲು ಮಾತುಕತೆ ನಡೆಸಲಾಗುತ್ತಿದೆ ಎಂದರು.

ಸೊಸೈಟಿ ಕಳೆದ 13 ವರ್ಷಗಳಿಂದ ಗೂಡಿನ ಪೆಟ್ಟಿಗೆಗಳು ಮತ್ತು ಪಕ್ಷಿಗಳಿಗೆ ಬೇಕಾದ ಆಹಾರ (ಹುಳದ ಸಾಮಗ್ರಿ) ಗಳನ್ನು ಉಚಿತವಾಗಿ ವಿತರಿಸಿದೆ. ಆದಾಗ್ಯೂ, ಈ ವರ್ಷದ ಸಾಮೂಹಿಕ ಜಾಗೃತಿ ಚಾಲನೆ ಮತ್ತು  ಪೆಟ್ಟಿಗೆಗಳ ವಿತರಣೆ ಮುಖ್ಯವಾಗಿದೆ. 

ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನಾಚರಣೆಯಾಗಿದ್ದು ಈ ವರ್ಷ ಕೊರೋನಾವೈರಸ್ ಹಾವಳಿಯಿಂದ ಸಭೆ, ಸಮಾರಂಭಗಳು ರದ್ದಾಗಿದೆ. ಎಂದು ಸ್ಪ್ಯಾರೋ ಮ್ಯಾನ್ ಆಫ್ ಇಂಡಿಯಾ ಎಂದು ಜನಪ್ರಿಯವಾಗಿರುವ ದಿಲಾವರ್ ಹೇಳುತ್ತಾರೆ ಈಗ ಸ್ವಂತವಾಗಿ ಜಾಗೃತಿ ಕಾರ್ಯಕ್ರಮ ಉಪಕ್ರಮ ತೆಗೆದುಕೊಳ್ಳಬೇಕಿದೆ ಎಂದು ಅವರು ಹೇಳಿದರು.

ಕಳೆದ 15 ವರ್ಷಗಳಿಂದ ಗುಬ್ಬಚ್ಚಿಗಳ ಬಗ್ಗೆ ಜಾಗೃತಿ ಮೂಡಿಸಿರುವ ದಿಲಾವರ್, ಮಲ್ಲೇಶ್ವರಂ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಸದಾಶಿವನಗರ, ಹಳೆಯ ಬೆಂಗಳೂರಿನ ಕೆಲವು ಭಾಗಗಳು ಮತ್ತು ನಗರದ ಹೊರವಲಯದಲ್ಲಿರುವ ಸಣ್ಣ ಪ್ರಮಾಣದ ಹಸಿರಿನ ಪ್ರದೇಶಗಳಲ್ಲಿ ಗುಬ್ಬಚ್ಚಿಗಳನ್ನು ಕಾಣುತ್ತಿರುವುದಾಗಿ ಹೇಳೀದರು.ಆದರೆ ಈ ಪ್ರದೇಶಗಳ ಸಂಖ್ಯೆ ಹೆಚ್ಚಾಗಿಲ್ಲ.

"ಇಂದು ಜನರು ಬಳಸುವ ವೈಫೈ ಮತ್ತು ಮೊಬೈಲ್ ನೆಟ್‌ವರ್ಕ್‌ಗಳು ಮತ್ತು ಮೊಬೈಲ್ ಟವರ್‌ಗಳ ಸ್ಥಾಪನೆಯ ಹೆಚ್ಚಳವು ಗುಬ್ಬಚ್ಚಿಗಳ ಸಂಖ್ಯೆಯ ಕುಸಿತಕ್ಕೆ ಕಾರಣವಾಗಿದೆ. ಆದರೆ ದುರದೃಷ್ಟವಶಾತ್ ಜನರಲ್ಲಿ ಜಾಗೃತಿ ಮೂಡಿಲ್ಲ"

ಸುಮಾರು 90 ಪ್ರತಿಶತದಷ್ಟು ಗೂಡಿನ ಪೆಟ್ಟಿಗೆಗಳು ಗುಬ್ಬಚ್ಚಿಗಳನ್ನು ಆಕರ್ಷಿಸುತ್ತವೆ  ಆದರೆ ಅಳಿಲುಗಳಂತಹ ಇತರ ಜೀವಿಗಳು ಅಲ್ಲಿ ನೆಲೆಸುತ್ತವೆ. . ಹಳ್ಳಿಗಳು ಮತ್ತು ಕೃಷಿ ಕ್ಷೇತ್ರಗಳಲ್ಲಿಯೂ ಗುಬ್ಬಚ್ಚಿಗಳ ಸಂಖ್ಯೆ ಕ್ಷೀಣವಾಗಿದೆ.  ಪಕ್ಷಿ ವೀಕ್ಷಕ ಎಂಬಿ ಕೃಷ್ಣ ಅವರು ಗುಬ್ಬಚ್ಚಿಗಳು , ಮ್ಯಾಗ್ಪಿ ರಾಬಿನ್ಸ್ ಮತ್ತು ಮಚ್ಚೆಯುಳ್ಳ ಪಾರಿವಾಳದಂತಹಾ ಪಕ್ಷಿಗಳಿಗೆ ಜೀವಿಸಲು ಯಾವುದೇ ಸೂಕ್ತ ಕಾಡಿನಂತಹಾ ಹಸಿರು ಪ್ರದೇಶ ಉಳಿದಿಲ್ಲ, ಅವುಗಳು ಉಳಿವಿಗಾಗಿ ಸಣ್ಣ ಹಸಿರು ಹುಲ್ಲು ಗಳ ಅಗತ್ಯವಿದೆ. .ಆದರೆ ನಗರವು ಮನೆಗಳ, ಕಟ್ಟಡಗಳ ಕಾಂಕ್ರೀಟ್ ಕಾಡಾಗಿದೆ. ಮನೆಗಳಲ್ಲಿ ಹಿತ್ತಲ ಪ್ರಶ್ನೆಯೇ ಇಲ್ಲ. ಗುಬ್ಬಚ್ಚಿಗಳು ಇನ್ನು ಮುಂದೆ ಕಾಣಿಸದಿರಲು ನಗರದ  ಆರ್ಕಿಟೆಕ್ಚರ್ ನ ಬದಲಾವಣೆಯು ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳುತ್ತಾರೆ

Stay up to date on all the latest ವಿಶೇಷ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp