ಸುಪ್ರೀಂ ಕೋರ್ಟ್ ಹಲವಾರು ಗಮನಾರ್ಹ ತೀರ್ಪುಗಳ ಭಾಗವಾಗಿದ್ದ ಹೆಮ್ಮೆಯ ಕನ್ನಡಿಗ, ನ್ಯಾಯಮೂರ್ತಿ ಶಾಂತನಗೌಡರ್

ಶನಿವಾರ ತಡರಾತ್ರಿ ನಿಧನರಾದ ನ್ಯಾಯಮೂರ್ತಿ ಮೋಹನ್ ಎಂ ಶಾಂತನಗೌಡರ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ನಾಲ್ಕು ವರ್ಷಗಳ ಕಾಲ ಸಲ್ಲಿಸಿದ ಸೇವಾವಧಿಯಲ್ಲಿ ಭೂಸ್ವಾಧೀನ ವಿಷಯದಲ್ಲಿಸಾಕಷ್ಟು ಜನಪ್ರಿಯವಾಗಿದ್ದ ವಿವಾದ ಸೇರಿದಂತೆ ಹಲವಾರು ಗಮನಾರ್ಹ ತೀರ್ಪುಗಳನ್ನು ನೀಡಿ ಹೆಸರಾಗಿದ್ದರು.
ನ್ಯಾಯಮೂರ್ತಿ ಮೋಹನ್ ಎಂ ಶಾಂತನಗೌಡರ್
ನ್ಯಾಯಮೂರ್ತಿ ಮೋಹನ್ ಎಂ ಶಾಂತನಗೌಡರ್
Updated on

ನವದೆಹಲಿ: ಶನಿವಾರ ತಡರಾತ್ರಿ ನಿಧನರಾದ ನ್ಯಾಯಮೂರ್ತಿ ಮೋಹನ್ ಎಂ ಶಾಂತನಗೌಡರ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ನಾಲ್ಕು ವರ್ಷಗಳ ಕಾಲ ಸಲ್ಲಿಸಿದ ಸೇವಾವಧಿಯಲ್ಲಿ ಭೂಸ್ವಾಧೀನ ವಿಷಯದಲ್ಲಿಸಾಕಷ್ಟು ಜನಪ್ರಿಯವಾಗಿದ್ದ ವಿವಾದ ಸೇರಿದಂತೆ ಹಲವಾರು ಗಮನಾರ್ಹ ತೀರ್ಪುಗಳನ್ನು ನೀಡಿ ಹೆಸರಾಗಿದ್ದರು.

ಕರ್ನಾಟಕದ ನ್ಯಾಯಮೂರ್ತಿ ಶಾಂತನಗೌಡರ್ ಅವರು ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠದ ಭಾಗವಾಗಿದ್ದರು, ಕಳೆದ ವರ್ಷ ಫೆಬ್ರವರಿ 10 ರಂದು ಸುಪ್ರೀಂಕೋರ್ಟ್‌ನ ಐದು ನ್ಯಾಯಾಧೀಶರ ಪೀಠವು  ಶಬರಿಮಲೆ ದೇವಾಲಯ ಪ್ರಕರಣದಲ್ಲಿ ತನ್ನ ಸೀಮಿತ ಅಧಿಕಾರವನ್ನು ಚಲಾಯಿಸುವಾಗ ಕಾನೂನಿನ ಪ್ರಶ್ನೆಗಳನ್ನು ಉನ್ನತ ನ್ಯಾಯಪೀಠಕ್ಕೆ ಉಲ್ಲೇಖಿಸಬಹುದು ಎಂದು ಅಭಿಪ್ರಾಯಪಟ್ಟಿದ್ದರು.. 

ಫೆಬ್ರವರಿ 8, 2018 ರಂದು, ಉನ್ನತ ನ್ಯಾಯಾಲಯದ ನ್ಯಾಯಾಧೀಶರಲ್ಲಿ ಹಿರಿತನದಲ್ಲಿ ಪ್ರಸ್ತುತ ಒಂಬತ್ತನೇ ಸ್ಥಾನದಲ್ಲಿದ್ದ ನ್ಯಾಯಮೂರ್ತಿ ಶಾಂತನಗೌಡರ್, ನ್ಯಾಯಮೂರ್ತಿಗಳ ಬಹುಮತದ ದೃಷ್ಟಿಯಿಂದ ಮುಖ್ಯವಾಗಿದ್ದರು. ಇವರೂ ಸೇರಿದಂತೆ ಅರುಣ್ ಮಿಶ್ರಾ ಮತ್ತು ಎ.ಕೆ.ಗೋಯೆಲ್, ಮೂವರು ನ್ಯಾಯಾಧೀಶರ ಪೀಠ ಭೂಸ್ವಾಧೀನ ವಿಷಯದಲ್ಲಿ ನೀಡಿದ್ದ  2018 ರ ತೀರ್ಪುಮಹತ್ವದ್ದಾಗಿತ್ತು, 2: 1 ಬಹುಮತದಿಂದ ಅಂಗೀಕರಿಸಲ್ಪಟ್ಟ 2018 ರ ತೀರ್ಪು, 2014 ರ ಪುಣೆ ಮಹಾನಗರ ಪಾಲಿಕೆ ಪ್ರಕರಣವನ್ನು ಕಾನೂನನ್ನು ಪರಿಗಣಿಸದೆ ಅಂಗೀಕರಿಸಲಾಗಿದೆ ಎಂದು ಹೇಳಿದೆ, ಐದು ವರ್ಷಗಳಲ್ಲಿ ಪರಿಹಾರವನ್ನು ಸ್ವೀಕರಿಸುವಲ್ಲಿ ಭೂಮಾಲೀಕರ ವಿಳಂಬದಿಂದಾಗಿ ದಾವೆ ಅಥವಾ ಇತರ ಕಾರಣಗಳಿಂದಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ರದ್ದುಗೊಳಿಸಲಾಗುವುದಿಲ್ಲ ಎಂದು ಹೇಳಿದೆ.

ನ್ಯಾಯಮೂರ್ತಿ ಶಾಂತನಗೌಡರ್, 2018 ರ ತೀರ್ಪಿನಲ್ಲಿ ತಮ್ಮ ಭಿನ್ನಾಭಿಪ್ರಾಯದ ದೃಷ್ಟಿಯಿಂದ , 2014 ರಲ್ಲಿ ಮತ್ತೊಂದು ಮೂರು ನ್ಯಾಯಾಧೀಶರ ಪೀಠವು ನಿಗದಿಪಡಿಸಿದ ಪೂರ್ವನಿದರ್ಶನವನ್ನು ರದ್ದುಗೊಳಿಸುವ ಬದಲು ಸಮಸ್ಯೆಯನ್ನು ಉನ್ನತ ನ್ಯಾಯಪೀಠಕ್ಕೆ ಉಲ್ಲೇಖಿಸುವುದು ಸರಿಯಾದ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಮತ್ತೊಂದು ಮೂರು ನ್ಯಾಯಾಧೀಶರ ಪೀಠವು "ನ್ಯಾಯಾಂಗ ಅಸಮರ್ಪಕತೆ" ಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಭೂಸ್ವಾಧೀನ ಪ್ರಕರಣವನ್ನು ಅಂತಿಮವಾಗಿ ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಉಲ್ಲೇಖಿಸಲಾಯಿತು.

ಐದು ನ್ಯಾಯಾಧೀಶರ ನ್ಯಾಯಪೀಠವು 2019 ರ ನವೆಂಬರ್ 14 ರಂದು ನೀಡಿದ ತೀರ್ಪಿನಲ್ಲಿ, ಉನ್ನತ ನ್ಯಾಯಪೀಠವನ್ನು ಉಲ್ಲೇಖಿಸುವಲ್ಲಿ ತಪ್ಪಾಗಿದೆ ಎಂಬ ತೀರ್ಪ, ಕೇರಳದ ಬೆಟ್ಟದ ಮೇಲಿನ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ 2018 ರ ತೀರ್ಪನ್ನು ಪ್ರಶ್ನಿಸಿ ಪರಿಶೀಲನಾ ಅರ್ಜಿಗಳನ್ನು ನಿರ್ಧರಿಸುವ ನಿಟ್ಟಿನಲ್ಲಿ ಇವರ ಪಾತ್ರವೂ ಇತ್ತು.

ಫೆಬ್ರವರಿ 2017 ರ ಸುಪ್ರೀಂ ಕೋರ್ಟ್ ಗೆ ವರ್ಗವಾದ ಲವೇ ತಿಂಗಳುಗಳಲ್ಲಿ, ನ್ಯಾಯಮೂರ್ತಿ ಶಾಂತನಗೌಡರ್ ಅವರು ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠದ ಭಾಗವಾಗಿದ್ದರು, ಇದು ಮಕ್ಕಳ ಪಾಲನೆ ವಿಷಯದಲ್ಲಿ, ಹೇಬಿಯಸ್ ಕಾರ್ಪಸ್ ನ ರಿಟ್ ಪರಿಹಾರಕ್ಕೆ ಮಾತ್ರ ಜಾರಿಗೆ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಫೆಬ್ರವರಿಯಲ್ಲಿ, ನ್ಯಾಯಮೂರ್ತಿ ಶಾಂತನಗೌಡರ್ ನೇತೃತ್ವದ ನ್ಯಾಯಪೀಠವು ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಲಾಕರ್ ಸೌಲಭ್ಯ / ಸುರಕ್ಷಿತ ಠೇವಣಿ ಸೌಲಭ್ಯ ನಿರ್ವಹಣೆಗಾಗಿ ಬ್ಯಾಂಕುಗಳು ಕೈಗೊಳ್ಳಬೇಕಾದ ಕ್ರಮಗಳನ್ನು ಕಡ್ಡಾಯವಾಗಿ ಸಮಗ್ರ ನಿರ್ದೇಶನಗಳನ್ನು ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ನಿರ್ದೇಶಿಸಿತು ಅಲ್ಲದೆ ಗ್ರಾಹಕರ ಮೇಲೆ ಏಕಪಕ್ಷೀಯ ಮತ್ತು ಅನ್ಯಾಯದ ನಿಯಮಗಳನ್ನು ಹೇರುವ ಸ್ವಾತಂತ್ರ್ಯ ಬ್ಯಾಂಕುಗಳಿಗೆ ಇರಬಾರದು ಎಂದು ಅಭಿಪ್ರಾಯಪಟ್ಟಿದೆ. ಬ್ಯಾಂಕುಗಳು ತಮ್ಮತಪ್ಪನ್ನು ಮರೆಮಾಚಲು ಸಾಧ್ಯವಿಲ್ಲಮತ್ತು ಲಾಕರ್ ಕಾರ್ಯಾಚರಣೆಗಾಗಿ ತಮ್ಮ ಗ್ರಾಹಕರ ಬಗ್ಗೆ ಯಾವುದೇ ಹೊಣೆಗಾರಿಕೆಯನ್ನು ಹೊಂದುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ನ್ಯಾಯಮೂರ್ತಿ ಶಾಂತನಗೌಡರ್ ಅವರು ಕಳೆದ ವರ್ಷ ಹೊರಡಿಸಿದ ಮಹತ್ವದ ತೀರ್ಪಿನ ಒಂದು ಭಾಗವಾಗಿದ್ದು, ಅದರಂತೆ ತನಿಖೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದಿದ್ದರೂ ಸಹ ಆರೋಪಿಗೆ ‘ಡೀಫಾಲ್ಟ್ ಜಾಮೀನು’ ನೀಡುವ ಹಕ್ಕಿದೆ ಮತ್ತು ನಂತರ ಚಾರ್ಜ್‌ಶೀಟ್ ಅಥವಾ ಹೆಚ್ಚುವರಿ ಸಲ್ಲಿಕೆ ಮೂಲಕ ಪ್ರಾಸಿಕ್ಯೂಟರ್ ತನ್ನ ಅನಿರ್ದಿಷ್ಟ ಹಕ್ಕನ್ನು ಮುರಿಯಲು ಬರುವುದಿಲ್ಲ.

ನ್ಯಾಯಮೂರ್ತಿ ಶಾಂತನಗೌಡರ್ ಅವರು ನ್ಯಾಯಪೀಠದ ನೇತೃತ್ವ ವಹಿಸಿ  ಕಳೆದ ವರ್ಷ ಅಂಗೀಕರಿಸಿದ ಇತರ ಪ್ರಮುಖ ತೀರ್ಪುಗಳ ಪೈಕಿ, ನ್ಯಾಯಾಲಯದಲ್ಲಿ ಆರೋಪಿಯೊಬ್ಬರನ್ನು ಯಾರೂ ಪ್ರತಿನಿಧಿಸದಿದ್ದರೆ, ನ್ಯಾಯಾಲಯವು ಅಮಿಕಸ್ ಅನ್ನು ನೇಮಿಸಬೇಕು ಅಥವಾ ಕಾನೂನು ಸೇವಾ ಸಮಿತಿಗಳಿಂದ ವಕೀಲರ ನೇಮಕವನ್ನು ಮಾಡಬೇಕು ಎನ್ನುವುದು ಪ್ರಮುಖವಾಗಿದೆ.

"ನ್ಯಾಯಮೂರ್ತಿ ಶಾಂತನಗೌಡರ್ ಅವರನ್ನು ಫೆಬ್ರವರಿ 17, 2017 ರಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಉನ್ನತ ಹುದ್ದೆಗೇರಿದರು. ಅವರು ಮೇ 5, 2023 ರವರೆಗೆ ಅಧಿಕಾರಾವಧಿ ಹೊಂದಿದ್ದರು..

ಅವರು ಮೇ 5, 1958 ರಂದು ಕರ್ನಾಟಕದಲ್ಲಿ ಜನಿಸಿದರು ಮತ್ತು ಸೆಪ್ಟೆಂಬರ್ 5, 1980 ರಂದು ವಕೀಲ ವೃತ್ತಿಗೆ ಸೇರಿದ್ದರು. ಅವರು ಮೇ 12, 2003 ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು ಸೆಪ್ಟೆಂಬರ್ 2004 ರಲ್ಲಿ ನ್ಯಾಯಾಲಯದಲ್ಲಿ ಖಾಯಂ ನ್ಯಾಯಾಧೀಶರಾದರು. ನಂತರ, ನ್ಯಾಯಮೂರ್ತಿ ಶಾಂತನಗೌಡರ್ ಅವರನ್ನು ಕೇರಳ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು, ಅಲ್ಲಿ ಅವರು ಆಗಸ್ಟ್ 1, 2016 ರಂದು ಕಾರ್ಯಕಾರಿ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕವಾಗುವ ಮೊದಲು 2016 ರ ಸೆಪ್ಟೆಂಬರ್ 22 ರಂದು ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದರು.

ಮೃತರ ಅಂತ್ಯಕ್ರಿಯೆ ಇಂದು ಅಂದರೆ 2021 ಏಪ್ರಿಲ್ 25 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com