'ನಾನು ನನ್ನ ಜೀವನ ಅನುಭವಿಸಿದ್ದೇನೆ': ಕಿರಿಯ ರೋಗಿಗಾಗಿ ತನ್ನ ಬೆಡ್ ಬಿಟ್ಟುಕೊಟ್ಟ 85 ವರ್ಷದ ಕೋವಿಡ್ ಸೋಂಕಿತ!

"ನಾನು ನನ್ನ ಜೀವನ ಸಾಕಷ್ಟು ಅನುಭವಿಸಿದ್ದೇನೆ." ಎಂದ 85 ವರ್ಷದ ಕೋವಿಡ್ -19 ರೋಗಿಯೊಬ್ಬರು ತಾವಿದ್ದ ಬೆಡ್ ಅನ್ನು ಯುವ ಕೋವಿಡ್ ರೋಗಿಗೆ ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟಿದ್ದು ಅವರು ಮಂಗಳವಾರ ತಮ್ಮ ಸ್ವಗೃಹದಲ್ಲಿ ನಿಧನರಾದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ನಾರಾಯಣ್ ದಾಭಲ್ಕರ್
ನಾರಾಯಣ್ ದಾಭಲ್ಕರ್
Updated on

"ನಾನು ನನ್ನ ಜೀವನ ಸಾಕಷ್ಟು ಅನುಭವಿಸಿದ್ದೇನೆ." ಎಂದ 85 ವರ್ಷದ ಕೋವಿಡ್ -19 ರೋಗಿಯೊಬ್ಬರು ತಾವಿದ್ದ ಬೆಡ್ ಅನ್ನು ಯುವ ಕೋವಿಡ್ ರೋಗಿಗೆ ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟಿದ್ದು ಅವರು ಮಂಗಳವಾರ ತಮ್ಮ ಸ್ವಗೃಹದಲ್ಲಿ ನಿಧನರಾದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯ ನಾರಾಯಣ್ ದಾಭಲ್ಕರ್ ಅವರಿಗೆ ಕೆಲ ದಿನಗಳ ಹಿಂದೆ ಕೋವಿಡ್ ಕಾಣಿಸಿಕೊಂಡಿದೆ. ಅವರನ್ನು ಚಿಕಿತ್ಸೆಗಾಗಿ ನಾಗ್ಪುರದ ಇಂದಿರಾಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರು ಸಾಕಷ್ಟು ಪ್ರಯತ್ನ ಮಾಡಿದ ಬಳಿಕ ಬೆಡ್ ಪಡೆದಿದ್ದರು. ಆದರೆ ಅದೇ ವೇಳೆ ತನ್ನ 40 ವರ್ಷದ ಕೋವಿಡ್ ಸೋಂಕಿತ ಪತಿಯನ್ನು ಉಳಿಸಲು ಓರ್ವ ಮಹಿಳೆ ಬೆಡ್ ಗಾಗಿ ಹುಡುಕುತ್ತಿದ್ದಳು. ಇದು ದಾಭಲ್ಕರ್ ಅವರ ಗಮನಕ್ಕೆ ಬಂದಿದೆ.

ಆದರೆ ಖಾಲಿ ಬೆಡ್ ಗಳಿರದ ಕಾರಣ ಆಸ್ಪತ್ರೆಯ ಅಧಿಕಾರಿಗಳು ಮಾತ್ರ ಆ ಮಹಿಳೆಯ ಪತಿಯನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವುದಕ್ಕೆ ಒಪ್ಪುತ್ತಿರಲಿಲ್ಲ. ಈ ವೇಳೆ ದಾಭಲ್ಕರ್ ಆ ಮಹಿಳೆಯತ್ತ ಕರುಣೆ ತುಂಬಿದ ನೋಟ ಬೀರಿದ್ದು ಅವಳ ಪತಿಗಾಗಿ ತಾವಿದ್ದ ಬೆಡ್ ಖಾಲಿ ಮಾಡಲು ತೀರ್ಮಾನಿಸಿದ್ದಾರೆ. ಈ ವೇಳೆ ಅವರು "ನನಗೀಗ 85 ವರ್ಷ. ನಾನು ನನ್ನ ಜೀವನದಲ್ಲಿ ಎಲ್ಲಾ ಅನುಭವಿಸಿದ್ದೇನೆ. ಈ ಯುವಕನ ಜೀವ ಉಳಿಸುವುದು ಹೆಚ್ಚು ಮುಖ್ಯ. ಅವರ ಮಕ್ಕಳು ಚಿಕ್ಕವರು ... ದಯವಿಟ್ಟು ನನ್ನ ಬೆಡ್ ಅವರಿಗೆ ನೀಡಿ" ಎಂದು ಹೇಳಿದ್ದಾರೆ.

ಆಸ್ಪತ್ರೆಯ ಆಡಳಿತ ದಾಭಲ್ಕರ್ ಅವರಿಂದ ಲಿಖಿತ ಹೇಳಿಕೆ ಕೇಳಿದೆ. ಅದರಂತೆ "ನಾನು ಇನ್ನೊಬ್ಬ ರೋಗಿಗೆ ಸ್ವಯಂಪ್ರೇರಣೆಯಿಂದ ನನ್ನ ಬೆಡ್ ನೀಡುತ್ತಿದ್ದೇನೆ." ಎಂದು ಬರೆದು ಕೊಟ್ಟಿದ್ದಾರೆ. 

ಆಮ್ಲಜನಕದ ಮಟ್ಟ ಕಡಿಮೆಯಾಗಿದ್ದರೂ ದಾಭಲ್ಕರ್ ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಮನೆಗೆ ಹಿಂತಿರುಗಿದ್ದಾರೆ. "ಏಪ್ರಿಲ್ 22 ರಂದು ಅವರ ಆಮ್ಲಜನಕದ ಮಟ್ಟವು ಕಡಿಮೆಯಾದಾಗ ನಾವು ಅವರನ್ನು ಐಜಿಆರ್ ಗೆ ಕರೆದೊಯ್ದೆವು. ಹೆಚ್ಚಿನ ಪ್ರಯತ್ನದ ನಂತರ ನಮಗೆ ಬೆಡ್ ಸಿಕ್ಕಿತು ಆದರೆ ಅವರು ಒಂದೆರಡು ಗಂಟೆಗಳಲ್ಲಿ ಮನೆಗೆ ಮರಳಿದರು. ನನ್ನ ಕೊನೆಯ ಕ್ಷಣಗಳನ್ನು ನಮ್ಮೊಂದಿಗೆ ಕಳೆಯಲು ಆದ್ಯತೆ ನೀಡುವುದಾಗಿ ನನ್ನ ತಂದೆ ಹೇಳಿದರು. ಅಲ್ಲದೆ ಯುವ ರೋಗಿಯ ಪ್ರಾಣ ಕಾಪಾಡುವುದು ಮುಖ್ಯವೆಂದರು." ದಾಭಲ್ಕರ್ ಪುತ್ರಿ ಹೇಳಿಕೆ ನೀಡಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ನಾರಾಯಣ್ ದಾಭಲ್ಕರ್ ಅವರ ಉದಾತ್ತ ಕೆಲಸವನ್ನು ಶ್ಲಾಘಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com