ಹೆಂಡತಿಯ ಚಿನ್ನದ ಸರ ಮಾರಿ ತನ್ನ ಆಟೋವನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿದ ಆಟೋ ಡ್ರೈವರ್!

ದೇಶದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತರ ಪರಿಸ್ಥಿತಿಯಲ್ಲಿ 34 ವರ್ಷದ ಆಟೋರಿಕ್ಷಾ ಚಾಲಕ ತನ್ನ ಜೀವನೋಪಾಯದ ಆಟೋವನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿ ಉಚಿತ ಸೇವೆ ನೀಡುತ್ತಿದ್ದಾರೆ. 
ಜಾವೇದ್ ಖಾನ್
ಜಾವೇದ್ ಖಾನ್
Updated on

ಭೋಪಾಲ್: ದೇಶದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತರ ಪರಿಸ್ಥಿತಿಯಲ್ಲಿ 34 ವರ್ಷದ ಆಟೋರಿಕ್ಷಾ ಚಾಲಕ ತನ್ನ ಜೀವನೋಪಾಯದ ಆಟೋವನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿ ಉಚಿತ ಸೇವೆ ನೀಡುತ್ತಿದ್ದಾರೆ. 

ಭೋಪಾಲ್ ನ ಐಶ್‌ಬ್ಯಾಗ್ ನಿವಾಸಿ ಜಾವೇದ್ ಖಾನ್ ಅವರು ಉಚಿತ ಆ್ಯಂಬುಲೆನ್ಸ್ ಸೇವೆ ಮೂಲಕ ಕಳೆದ ಮೂರು ದಿನಗಳಿಂದ ನಗರದ ವಿವಿಧ ಆಸ್ಪತ್ರೆಗಳಿಗೆ ರವಾನಿಸಿ ಕನಿಷ್ಠ 15 ಜನರನ್ನು ಉಳಿಸಿದ್ದಾರೆ. ಮಧ್ಯಪ್ರದೇಶ ಅಗ್ರ ಎರಡು ಕೋವಿಡ್ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ.

ಮೂರು ಮಕ್ಕಳ ತಂದೆಯಾಗಿರುವ(ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ) ಜಾವೇದ್ ಖಾನ್ ಆಟೋ ಓಡಿಸಿ ತಮ್ಮ ಸಂಸಾರವನ್ನು ಪೋಷಿಸುತ್ತಿದ್ದರು. ಕೊರೋನಾ ಕರ್ಫ್ಯೂ ಕಾರಣದಿಂದಾಗಿ ಅವರಿಗೆ ಉದ್ಯೋಗವಿಲ್ಲ. ಹೀಗಾಗಿ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಬದಲು ಕೊರೋನಾ ರೋಗಿಗಳಿಗೆ ನೆರವಾಗಲು ತನ್ನ ಹೆಂಡತಿಯ ಚಿನ್ನದ ಹಾರವನ್ನು 5,000 ರೂ.ಗೆ ಮಾಜಿ ರಿಕ್ಷಾವನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿದ್ದಾರೆ.

'ನನ್ನ ಕುಟುಂಬಕ್ಕೆ ಮೂರು ತಿಂಗಳಿಗೆ ಬೇಕಾಗುವಷ್ಟು ರೇಷನ್ ಅನ್ನು ಸಂಗ್ರಹಿಸಿದ್ದೇನೆ. ಸದ್ಯಕ್ಕೆ ಮನೆಯ ಯೋಜನೆ ಇಲ್ಲ. ಹೀಗಾಗಿ ತನ್ನ ಹೆಂಡತಿಯ ಚಿನ್ನದ ಹಾರವನ್ನು ಮಾರಿ ಆಟೋ-ರಿಕ್ಷಾವನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿದ್ದೇನೆ. ಆಟೋರಿಕ್ಷಾದಲ್ಲಿ ಅಳವಡಿಸಲಾಗಿರುವ 7 ಕೆಜಿ ಆಮ್ಲಜನಕ ಸಿಲಿಂಡರ್ ಅನ್ನು ಸಾಮಾಜಿಕ ಕಾರ್ಯಕರ್ತ ಭಾರ್ತಿ ಜೈನ್ ಉಡುಗೊರೆಯಾಗಿ ನೀಡಿದ್ದಾರೆ ಎಂದು ಜಾವೀದ್ ಖಾನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 

ನನ್ನ ಮೊಬೈಲ್ ನಂಬರ್ 7999909494 ಅನ್ನು ಡಯಲ್ ಮಾಡುವ ಮೂಲಕ ಯಾರಾದರೂ ಈ ಸೇವೆಯನ್ನು ಪಡೆಯಬಹುದು ಎಂದು ಜಾವೀದ್ ಖಾನ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com