ಸಂಕಷ್ಟದ ಸಮಯದಲ್ಲಿ ಸಮಾಜಸೇವೆ: 27 ವರ್ಷದ ವ್ಯಕ್ತಿಯಿಂದ 110 ಕೊರೋನಾ ಸೋಂಕಿತರ ಶವಸಂಸ್ಕಾರ!

ಜಾತಿ ಧರ್ಮ ಯಾವುದನ್ನು ಲೆಕ್ಕಿಸದೇ 27 ವರ್ಷದ ಯುವಕನೊಬ್ಬ ಇದುವರೆಗೂ ಸುಮಾರು 110 ಕೊರೋನಾ ಸೋಂಕಿತ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಮಲ್ಲಿಶೆಟ್ಟಿ ಭರತ್ ರಾಘವ
ಮಲ್ಲಿಶೆಟ್ಟಿ ಭರತ್ ರಾಘವ

ರಾಜಮಹೇಂದ್ರವರಂ: ಜಾತಿ ಧರ್ಮ ಯಾವುದನ್ನು ಲೆಕ್ಕಿಸದೇ 27 ವರ್ಷದ ಯುವಕನೊಬ್ಬ ಇದುವರೆಗೂ ಸುಮಾರು 110 ಕೊರೋನಾ ಸೋಂಕಿತ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಆಂಧ್ರಪ್ರದೇಶದ  ರಾಜಮಹೇಂದ್ರವರಂ ನ ಬೊಮ್ಮೂರು ನಿವಾಸಿ ಮಲ್ಲಿಶೆಟ್ಟಿ ಭಾರತ್ ರಾಘವ್ ತನ್ನ ಸ್ನೇಹಿತರ ಜೊತೆ ಸೇರಿ 110 ಶವಗಳ ಸಂಸ್ಕಾರ ನಡೆಸಿದ್ದಾರೆ.

ನಾನು ಕಾಲೇಜಿನಲ್ಲಿದ್ದಾಗಗ ನನ್ನ ತಂದೆ ವಿಶಾಖಪಟ್ಟಣಂ ನಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ರಾಜಮಹೇಂದ್ರವರಂ ಗೆ ಶಿಫ್ಟ್ ಮಾಡಲು ನಮ್ಮ ಬಳಿ ಹಣವಿಲ್ಲದೇ ಒಂದು ದಿನ ಕಾಯಬೇಕಾಯಿತು. ಅಗತ್ಯವಿದ್ದವರಿಗೆ ಸಹಾಯ ಮಾಡಿ ಗೌರವದಿಂದ ಕಳುಹಿಸಿಕೊಡಬೇಕೆಂದು ನಾನು ನಿರ್ಧರಿಸಿದೆ ಎಂದು ರಾಘವ ಹೇಳಿದ್ದಾರೆ.

ಎಂಬಿಎ ಪದವೀಧರರಾಗಿರುವ ರಾಘವ ಜೀವನೋಪಾಕ್ಕಾಗಿ ಸರಕು ಸಾಗಣೆ ಟ್ರಕ್ ಇಟ್ಟುಕೊಂಡಿದ್ದಾರೆ. ಶವ ಸಂಸ್ಕಾರದ ಸಮಯದಲ್ಲಿ ಹಣಕ್ಕಾಗಿ ಬೇಡಿಕೆ ಇಡುವುದಿಲ್ಲ. ಅವರಾಗಿಯೇ ಹಣ ನೀಡಿದರೆ ಅದನ್ನು ಪಡೆದುಕೊಂಡು ಪಿಪಿಇ ಕಿಟ್ ಮತ್ತು ಇಂಧನಕ್ಕಾಗಿ ಹಾಗೂ ಅಂತ್ಯ ಸಂಸ್ಕಾರದ ಸಾಮಾಗ್ರಿ ಕೊಳ್ಳಲು ಬಳಸಿಕೊಳ್ಳುತ್ತೇನೆ ಎಂದು ವಿವರಿಸಿದ್ದಾರೆ.

ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಅನೇಕರು ತಮ್ಮ ರಕ್ತ ಸಂಬಂಧಿಗಳನ್ನು ಕಳೆದುಕೊಂಡರು, ಅವರ ಸಂಬಂಧಿಕರು ಭಯದಿಂದಾಗಿ ಶವಗಳನ್ನು ಬಿಟ್ಟು ಬಂದರು, ಆಸ್ಪತ್ರೆಯವರು ನನ್ನನ್ನ ಕರೆದು ಶವಸಂಸ್ಕಾರ ಮಾಡುವಂತೆ ಕೇಳಿದರು. 

ಆರಂಭದಲ್ಲಿ ನೆರೆಹೊರೆಯವರಿಂದ ವಿರೋಧ ವ್ಯಕ್ತವಾಯಿತು, ಆದರೆ ನಂತರದ ದಿನಗಳಲ್ಲಿ ಜನರು ಕೊರೋನಾ ವೈರಸ್ ಅಪಾಯವನ್ನು ತಿಳಿದು ಸುಮ್ಮನಾದರು.

ಕೊರೋನಾ ವೈರಸ್ ಗೆ ತುತ್ತಾಗಿ ಸಾವನ್ನಪ್ಪಿದವರ ಕುಟುಂಬಸ್ಥರು ಶವ ಸಂಸ್ಕಾರ ಮಾಡಲು ನಿರಾಕರಿಸುತ್ತಿದ್ದರು. ಹೀಗಾಗಿ ನಾನು ಶವ ಸಂಸ್ಕಾರದ ವ್ಯವಸ್ಥೆ ಮಾಡುತ್ತಿದ್ದೇನೆ, ಸತ್ತವರಿಗೆ ವಿದಾಯ ಹೇಳುವ ಸ್ಥಿತಿಯಲ್ಲಿ ಸಂಬಂಧಿಕರು ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com