'ಶಾರದಾ-ಗಣಪತಿ' ಶಾಲೆಯಲ್ಲಿ 11 ಮಂದಿ ಅವಳಿ-ಜವಳಿ ಮಕ್ಕಳು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಒಂದು ವಿಶಿಷ್ಟ ವಿದ್ಯಾಸಂಸ್ಥೆ!

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲಿ ಒಂದು ಅಪರೂಪದ ಶಾಲೆಯಿದೆ. ತಾಲ್ಲೂಕಿನ ಕೈರಂಗಳ ಗ್ರಾಮದ ಬಾಳೆಪುಣಿ ಗ್ರಾಮಪಂಚಾಯತ್ ವಲಯದ ಪುಣ್ಯಕೋಟಿ ನಗರದಲ್ಲಿ ಶಾರದಾ ಗಣಪತಿ ವಿದ್ಯಾಕೇಂದ್ರವಿದ್ದು, ಇಲ್ಲಿ 11 ಮಂದಿ ಅವಳಿ-ಜವಳಿ ಮಕ್ಕಳು ಓದುತ್ತಿದ್ದಾರೆ.
ಶಾರದಾ-ಗಣಪತಿ ಶಾಲೆಯ ಅವಳಿ-ಜವಳಿ ಮಕ್ಕಳು
ಶಾರದಾ-ಗಣಪತಿ ಶಾಲೆಯ ಅವಳಿ-ಜವಳಿ ಮಕ್ಕಳು
Updated on

ಬಂಟ್ವಾಳ(ಮಂಗಳೂರು): ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada) ಬಂಟ್ವಾಳ ತಾಲ್ಲೂಕಿನಲ್ಲಿ ಒಂದು ಅಪರೂಪದ ಶಾಲೆಯಿದೆ. ತಾಲ್ಲೂಕಿನ ಕೈರಂಗಳ ಗ್ರಾಮದ ಬಾಳೆಪುಣಿ ಗ್ರಾಮಪಂಚಾಯತ್ ವಲಯದ ಪುಣ್ಯಕೋಟಿ ನಗರದಲ್ಲಿ ಶಾರದಾ ಗಣಪತಿ ವಿದ್ಯಾಕೇಂದ್ರವಿದ್ದು, ಇಲ್ಲಿ 11 ಮಂದಿ ಅವಳಿ-ಜವಳಿ(Twins children) ಮಕ್ಕಳು ಓದುತ್ತಿದ್ದಾರೆ. ಈ ಅವಳಿ ಮಕ್ಕಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿ ಶಾಲೆ ಸುದ್ದಿಯಾಗಿದೆ.

ಶಾಲೆಯಲ್ಲಿ ಓದುತ್ತಿರುವ ಅವಳಿ-ಜವಳಿ ಮಕ್ಕಳು ತಮಗೆ ಯಾವ ರೀತಿ ಅನುಭವವಾಗುತ್ತಿದೆ, ಜನರು ಹೇಗೆ ತಮ್ಮನ್ನು ನೋಡುತ್ತಿದ್ದಾರೆ ಎಂಬ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹೀಗೆ ಶಾಲೆಗೆ ದಾಖಲಾದ ಅವಳಿ ಮಕ್ಕಳಲ್ಲಿ ಒಬ್ಬರಿಂದ ಮಾತ್ರ ಶುಲ್ಕವನ್ನು ಶಾಲಾ ಆಡಳಿತ ಮಂಡಳಿ ಪಡೆಯುತ್ತಿರುವುದು ವಿಶೇಷವಾಗಿದೆ. ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಸಹ ಆದ್ಯತೆ ನೀಡಲಾಗುತ್ತದೆ.

''ನಮ್ಮ ಶಾರಾದಾ ಗಣಪತಿ(Sharada Ganapati school) ವಿದ್ಯಾಕೇಂದ್ರದ ಹೆಸರು ವಿಶಿಷ್ಟವಾಗಿ ಅವಳಿ-ಜವಳಿ ಹೆಸರಿನಂತೆ ಕೇಳುತ್ತದೆ, ಬಹುಶಃ ಅದಕ್ಕೆ ಇರಬಹುದು ನಮ್ಮ ಶಾಲೆಯಲ್ಲಿ ಇಷ್ಟೊಂದು ಅವಳಿ-ಜವಳಿ ಮಕ್ಕಳಿರುವುದು, ವರ್ಷದಿಂದ ವರ್ಷಕ್ಕೆ ಅವಳಿ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ ಎನ್ನುತ್ತಾರೆ ಶಾಲೆಯ ಸಂಸ್ಥಾಪಕ ಟಿ ಜಿ ರಾಜರಾಮ್ ಭಟ್. 

ಈ ಶಾಲೆ 2008ರಲ್ಲಿ ಆರಂಭವಾಗಿದ್ದು, ಯಾವುದೇ ಒತ್ತಡವಿಲ್ಲದೆ ಸುಮಾರು 900 ಮಕ್ಕಳು ಮುಕ್ತವಾಗಿ ಹಳ್ಳಿಯ ವಾತಾವರಣದಲ್ಲಿ ಶಿಕ್ಷಣ ಪಡೆಯುತ್ತಾರೆ ಎನ್ನುತ್ತಾರೆ ರಾಜಾರಾಮ್ ಭಟ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com