ಕ್ಯಾರೋಲಿಂಗ್ (ಸಂಗ್ರಹ ಚಿತ್ರ)
ಕ್ಯಾರೋಲಿಂಗ್ (ಸಂಗ್ರಹ ಚಿತ್ರ)

ಕ್ಯಾರೋಲಿಂಗ್, ಅದರ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು...?

ಕ್ಯಾರೋಲಿಂಗ್. ಕ್ರಿಸ್ ಮಸ್ ಆಚರಣೆಯ ಭಾಗವಾಗಿ ರಜೆಯ ದಿನಗಳಲ್ಲಿ ಜಗತ್ತಿನಾದ್ಯಂತ ಅವಿಭಾಜ್ಯವಾಗಿರುವ ಆಚರಣೆಯಾಗಿದೆ.
Published on

ಕ್ಯಾರೋಲಿಂಗ್. ಕ್ರಿಸ್ ಮಸ್ ಆಚರಣೆಯ ಭಾಗವಾಗಿ ರಜೆಯ ದಿನಗಳಲ್ಲಿ ಜಗತ್ತಿನಾದ್ಯಂತ ಅವಿಭಾಜ್ಯವಾಗಿರುವ ಆಚರಣೆಯಾಗಿದೆ. 

ಈ ಆಚರಣೆಗಳ ವಿಧಾನವನ್ನು ಸಾಮಾನ್ಯವಾಗಿ ಟಿ.ವಿ ಶೋ ಗಳಲ್ಲಿ, ಸಿನಿಮಾಗಳಲ್ಲಿ ನೋಡಿಯೇ ಇರುತ್ತೀರಿ.. ಒಂದಷ್ಟು ಮಂದಿ ಮನೆ ಮನೆಗಳಿಗೆ ತೆರಳಿ ಕ್ರಿಸ್ ಮಸ್ ನ ಹಾಡುಗಳನ್ನು ಹಾಡುತ್ತಾ ಸಂತೋಷದ ಕ್ಷಣಗಳನ್ನು ಕಳೆಯುತ್ತಾರೆ. 

ಈ ಪದ್ಧತಿ ನೂರಾರು ವರ್ಷಗಳಿಂದ ನಡೆದುಬಂದಿದ್ದು, ಐತಿಹಾಸಿಕ ಘಟನೆಗಳಿಗೂ ಸಾಕ್ಷಿಯಾಗಿದೆ. ಇಂದಿಗೂ ಹಲವಾರು ಗುಂಪುಗಳು ಕ್ಯಾರೋಲಿಂಗ್ ಪದ್ಧತಿಯನ್ನು ಜೀವಂತವಾಗಿಡುವುದಕ್ಕೆ ಯತ್ನಿಸುತ್ತಿದ್ದಾರೆ.
 
ವರ್ಚ್ಯುಯಲ್ ಹಾಗೂ ಡ್ರೈವ್ ಬೈ ಕ್ಯಾರೋಲಿಂಗ್ ಅತ್ಯಂತ ಸೃಜನಾತ್ಮಕ ಹಾಗೂ ಸಾಂಕ್ರಾಮಿಕದ ಅವಧಿಯಲ್ಲಿ ಅತ್ಯಂತ ಸುರಕ್ಷಿತ ವಿಧವಾದ ಆಚರಣೆಯಾಗಿದೆ. 

ಹಾಗಾದರೆ ಕ್ಯಾರೋಲಿಂಗ್ ನ ಇತಿಹಾಸ ಏನು? ಹೇಗೆ ಪ್ರಾರಂಭವಾಯಿತು ಎಂಬುದನ್ನು ನೋಡೋಣ

  1. 16 ನೇ ಶತಮಾನದವರೆಗೂ ಕ್ಯಾರೋಲ್ಸ್ ಗಳನ್ನು ಮೌಖಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ತಲುಪಿಸುತ್ತಿದ್ದರು. ಅತ್ಯಂತ ಪುರಾತನವಾದ ಕ್ಯಾರೋಲಿಂಗ್ ನ ಉಲ್ಲೇಖ 4 ನೇ ಶತಮಾನದಲ್ಲಿ ಸಿಗುತ್ತದೆ.  ಕ್ಯಾರೋಲಿಂಗ್ ನ್ನು ಎಂದಿಗೂ ಬರೆದಿಟ್ಟಿಲ್ಲ ಅಥವಾ ದಾಖಲುಮಾಡಿರಲಿಲ್ಲ.
  2. ಕ್ಯಾರೋಲ್ಸ್ ಗಳು ಪ್ರಾಥಮಿಕವಾಗಿ ಕ್ರಿಸ್ ಮಸ್ ನೊಂದಿಗೆ ಯಾವುದೇ ನಂಟನ್ನೂ ಹೊಂದಿಲ್ಲ. ಆದರೆ ಕ್ಯಾರೋಲ್ಸ್ ಗಳ ಇತಿಹಾಸಕ್ಕೆ ಕರಾಳ ಅಧ್ಯಾಯವೇ ಇದೆ. ಬಡಜನತೆ ಶ್ರೀಮಂತರೆದುರು ಹಾಡು ಹಾಡಿ ಆಹಾರ ಮತ್ತು ಪಾನೀಯಗಳನ್ನು ಸ್ವೀಕರಿಸಲು ಕ್ಯಾರೋಲ್ ಗಳನ್ನು ಬಳಕೆ ಮಾಡುತ್ತಿದ್ದರು. ಈ ಹಾಡುಗಳು ರಜೆಯ ಋತುಗಳಿಗೆ ಸಂಬಂಧಿಸಿದ್ದಾಗಿತ್ತು ಹಾಗೂ ಎಲ್ಲರಿಗೂ ಒಳ್ಳೆಯದನ್ನು ಬಯಸಿ, ಪ್ರೋತ್ಸಾಹಿಸುತ್ತಿದ್ದವು.
  3. ಒಂದು ಹಂತದಲ್ಲಿ ಕ್ಯಾರೋಲ್ ಗಳಿಗೆ ನೃತ್ಯವನ್ನೂ ಸಂಯೋಜಿಸಲಾಯಿತು. 
  4. ಇಂಗ್ಲೆಂಡ್ ನಲ್ಲಿ 17 ನೇ ಶತಮಾನದ ಉತ್ತರಾರ್ಧದಲ್ಲಿ ಕ್ರಿಸ್ ಮಸ್ ಆಚರಣೆ ವೇಳೆ ಕ್ಯಾರೋಲ್ ಗಳನ್ನು ಬಳಕೆ ಮಾಡಲು ಪ್ರಾರಂಭಿಸಿದರು. 
  5. ಚಾರ್ಲ್ಸ್ ಡಿಕನ್ಸ್ ಕ್ರಿಸ್ ಮಸ್ ಕಾರೋಲ್ ನ್ನು ಸಂಭ್ರಮಾಚರಣೆಗಳನ್ನು ಮರುಸ್ಥಾಪಿಸುವುದಕ್ಕಾಗಿ ಭಾಗಃಶ ಬರೆದಿಟ್ಟರು. ಜೀವನದಲ್ಲಿ ಮತ್ತೆ ಸಂಭ್ರಮಾಚರಣೆಗಳನ್ನು ತರುವುದರಲ್ಲಿ ಕ್ಯಾರೋಲ್ ಗಳು ಮಹತ್ವದ ಪಾತ್ರ ವಹಿಸಿದ್ದರು. ಹಾಗೂ ಈ ಹಂತದಲ್ಲೇ ಹಲವು ಕ್ಯಾರೋಲ್ ಗಳು ಪ್ರಕಟಗೊಂಡು ಕ್ರಿಸ್ ಮಸ್ ಸಂದರ್ಭದಲ್ಲಿ ಚೈತನ್ಯಪೂರ್ಣ ಆಚರಣೆಗೆ ಹಾಡುಗಳಾಗಿ ಪರಿವರ್ತನೆಗೊಂಡವು.
  6. ಸಾಂಕ್ರಾಮಿಕದ ಅವಧಿಗೂ ಮುನ್ನ ಕ್ಯಾರೋಲಿಂಗ್ ಪದ್ಧತಿಯಲ್ಲಿ ಇಳಿಕೆಯಾಗಿತ್ತು. ಆದರೆ ಈಗ ಸಾಂಕ್ರಾಮಿಕದ ಬಳಿಕ ಮತ್ತೆ ಅಮೆರಿಕಾದಂತಹ ರಾಷ್ಟ್ರಗಳಲ್ಲಿ ಕ್ಯಾರೋಲಿಂಗ್ ಪದ್ಧತಿಯನ್ನು ಮರಳಿ ಜೀವಂತವಾಗಿರಿಸುವುದಕ್ಕೆ ಸಾಧ್ಯವಾಗಿರುವುದನ್ನು ಜನತೆ ಮಾಡುತ್ತಿದ್ದಾರೆ. ಒಂದು ಗುಂಪು ನೆಚ್ಚಿನ ಮಂದಿಗೆ ವರ್ಚ್ಯುಯಲ್ ಟೆಲಿಗ್ರಾಮ್ ಗಳಿಸಿದರೆ, ಮತ್ತೊಂದು ಕ್ಯಾರೋಲಿಂಗ್ ಕಂಟೆಸ್ಟ್ಸ್ ಗಳನ್ನು ಕಳಿಸುತ್ತಿದೆ. ಈ ರೀತಿಯಲ್ಲಿ ಭಿನ್ನ ಸ್ವರೂಪದಲ್ಲಿ ಕ್ಯಾರೋಲಿಂಗ್ ನ್ನು ಜೀವಂತವಾಗಿರಿಸುವ ಪ್ರಯತ್ನ ನಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com