ಎಸ್ಎಸ್ಎಲ್ ಸಿ ಪರೀಕ್ಷೆ ಫೇಲಾದ ಕೇರಳದ ವಿದ್ಯಾರ್ಥಿಗಳಿಗೆ ಯುವ ಉದ್ಯಮಿ ಯಿಂದ ಹೀಗೊಂದು ಆಫರ್!

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದೀರ, ಖಿನ್ನತೆ, ಬೇಸರವಾಗುತ್ತಿದೆಯೇ, ಮಕ್ಕಳೇ ಬೇಸರ ಮಾಡಿಕೊಳ್ಳಬೇಡಿ, ರಿಲ್ಯಾಕ್ಸ್ ಆಗಲು ಅಪ್ಪ-ಅಮ್ಮ ಕುಟುಂಬದವರ ಜೊತೆ ಕೊಡೈಕನಾಲ್ ಗೆ ಟ್ರಿಪ್ ಹೋಗಿಬನ್ನಿ.
ಕೊಡೈಕನಾಲ್ ಲೇಕ್ ನ ವಿಹಂಗಮ ನೋಟ
ಕೊಡೈಕನಾಲ್ ಲೇಕ್ ನ ವಿಹಂಗಮ ನೋಟ
Updated on

ತಿರುವನಂತಪುರ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದೀರ, ಖಿನ್ನತೆ, ಬೇಸರವಾಗುತ್ತಿದೆಯೇ, ಮಕ್ಕಳೇ ಬೇಸರ ಮಾಡಿಕೊಳ್ಳಬೇಡಿ, ರಿಲ್ಯಾಕ್ಸ್ ಆಗಲು ಅಪ್ಪ-ಅಮ್ಮ ಕುಟುಂಬದವರ ಜೊತೆ ಕೊಡೈಕನಾಲ್ ಗೆ ಟ್ರಿಪ್ ಹೋಗಿಬನ್ನಿ.

10ನೇ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಖಿನ್ನತೆ, ಒತ್ತಡದಿಂದ ಹೊರಬರಲು ಹೀಗೊಂದು ಅವಕಾಶವನ್ನು ನೀಡುತ್ತಿದ್ದಾರೆ ಕೊಡೈಕನಾಲ್ ನಲ್ಲಿ ಹೋಂ ಸ್ಟೇ ನಡೆಸುತ್ತಿರುವ ಕೇರಳದ ಕೋಝಿಕ್ಕೋಡು ಮೂಲದ ಸುಧೀರ್ ಎಂಬ ಉದ್ಯಮಿ.

ಕೊಡೈಕನಾಲ್ ನಲ್ಲಿರುವ ತಮ್ಮ ಹೋಂ ಸ್ಟೇಯಲ್ಲಿ ವಿದ್ಯಾರ್ಥಿಗಳು ತಮ್ಮ ಕುಟುಂಬದವರ ಜೊತೆ ಬಂದು ಉಚಿತವಾಗಿ ಎರಡು ದಿನ ಕಳೆಯಬಹುದು. ಮಕ್ಕಳಿಗೆ ನೈತಿಕ ರೂಪದಲ್ಲಿ ನೆರವು ನೀಡುವ ಪ್ರಯತ್ನ ಎಂದು ಸುಧೀರ್ ಹೇಳುತ್ತಾರೆ.

ಸುಧೀರ್ ಕೇರಳ ರಾಜ್ಯದ ವಿದ್ಯಾರ್ಥಿಗಳಿಗೆ ಈ ಅನುಕೂಲ ಒದಗಿಸಿಕೊಟ್ಟಿದ್ದಾರೆ, ಅವರು ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಹಂಚಿಕೊಂಡ ನಂತರ ಅವರ ಮೊಬೈಲ್ ಗೆ ಕರೆಗಳ ಸುರಿಮಳೆಯೇ ಹರಿದುಬರುತ್ತಿವೆಯಂತೆ. ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಕರೆ ಮಾಡಿ ಮಾಹಿತಿ ಪಡೆಯುತ್ತಲೇ ಇದ್ದಾರಂತೆ. ಕೇರಳದಲ್ಲಿ 10ನೇ ತರಗತಿ ಫಲಿತಾಂಶ ಪ್ರಕಟವಾದ ಕೂಡಲೇ ಹಲವು ವಿದ್ಯಾರ್ಥಿಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಅಂತವರು ಖಿನ್ನತೆ, ಒತ್ತಡದಿಂದ ಹೊರಬರಲು ಮಾಡುತ್ತಿರುವ ಒಂದು ವಿನೂತನ ಪ್ರಯತ್ನವಿದು ಎನ್ನುತ್ತಾರೆ.

ಸುಧೀರ್ ಅವರು ಕೇರಳದ ಕೋಝಿಕ್ಕೋಡಿನ ವಡಕರದವರು. 2006ರಿಂದ ಕೊಡೈಕನಾಲ್ ನಲ್ಲಿ ವಾಸವಾಗಿದ್ದಾರೆ. 2003ರಲ್ಲಿ ಹೊಟೇಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮುಗಿಸಿ ರೆಸಾರ್ಟ್ ಬ್ಯುಸಿನೆಸ್ ನ್ನು ಆರಂಭಿಸಿದರು. ಈ ಜಾಗ ನಯನ ಮನೋಹರವಾಗಿದ್ದು, ಜನಜಂಗುಳಿ, ನಗರದ ಕಿರಿಕಿರಿಯಿಂದ ದೂರವಾಗಿ ಪ್ರಶಾಂತವಾಗಿದೆ. ಮನಸ್ಸಿನ ಚಿಂತೆ, ಬೇಸರ, ಒತ್ತಡ ಕಳೆಯಲು ಪ್ರಶಸ್ತ ಸ್ಥಳ ಎನ್ನುತ್ತಾರೆ.

ಕೇರಳದ ಸಾಮಾಜಿಕ ಸನ್ನಿವೇಶದಲ್ಲಿ, ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸುತ್ತಾರೆ, ಆ ಮೂಲಕ ಮಕ್ಕಳಿಗೆ ಒತ್ತಡ ನೀಡುತ್ತಾರೆ, ಮಕ್ಕಳು ಪರೀಕ್ಷೆಯಲ್ಲಿ ಪಾಸ್, ಫೇಲ್ ಆದದ್ದರ ಮೇಲೆ ಅವರ ಬುದ್ದಿವಂತಿಕೆ, ಭವಿಷ್ಯವನ್ನು ಅಳೆಯಲು ಸಾಧ್ಯವಿಲ್ಲ, ಎಲ್ಲಾ ಮಕ್ಕಳು ತಮ್ಮದೇ ಆದ ಪ್ರತಿಭೆಯನ್ನು ಹೊಂದಿರುತ್ತಾರೆ, ದುರದೃಷ್ಟವಶಾತ್, ಹತ್ತನೇ ತರಗತಿಯ ಪರೀಕ್ಷೆಗಳು ಸಾಮಾಜಿಕ ಮೌಲ್ಯಮಾಪನದ ಒಂದು ಭಾಗವಾಗಿದೆ. ಶಿಕ್ಷಣವು ವ್ಯಕ್ತಿಯ ಯಶಸ್ಸು ಅಥವಾ ಜೀವನದಲ್ಲಿ ವೈಫಲ್ಯವನ್ನು ವ್ಯಾಖ್ಯಾನಿಸುವುದಿಲ್ಲ. ನಾವು ಮಕ್ಕಳಲ್ಲಿ ಮೌಲ್ಯ ಆಧಾರಿತ ಜಾಗೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸುಧೀರ್ ಅವರ ಈ ಯೋಜನೆಯನ್ನು ಬೆಂಬಲಿಸಿ ಮಾತನಾಡುತ್ತಾರೆ ಮನಃಶಾಸ್ತ್ರಜ್ಞ ನಿತಿನ್ ಎ ಎಫ್.

ಕೇರಳದ ವಿದ್ಯಾರ್ಥಿಗಳಿಗೆ ಈ ತಿಂಗಳಾಂತ್ಯದವರೆಗೆ ಈ ಅವಕಾಶವಿದೆ. ತಮ್ಮ ಪೋಷಕರೊಂದಿಗೆ ವಿದ್ಯಾರ್ಥಿಗಳು ಹೋಂ ಸ್ಟೇಗೆ ಬರಬೇಕಷ್ಟೆ. ವಿದ್ಯಾರ್ಥಿಗಳು ಬರುವಾಗ 10 ನೇ ತರಗತಿಯ ಪ್ರಮಾಣಪತ್ರವನ್ನು ಅವರು ಫೇಲ್ ಆಗಿದ್ದಾರೆ ಎಂದು ತೋರಿಸಬೇಕು. ನಾನು ಒಬ್ಬಂಟಿಯಾಗಿ ಅಥವಾ ಸ್ನೇಹಿತರೊಂದಿಗೆ ಬರಬಹುದೇ ಎಂದು ವಿದ್ಯಾರ್ಥಿಗಳಿಂದ ನನಗೆ ಕರೆಗಳು ಬರುತ್ತಿವೆ. ಇವರು ತುಂಬಾ ಚಿಕ್ಕ ಮಕ್ಕಳು ಮತ್ತು ಆದ್ದರಿಂದ ಅವರು ತಮ್ಮ ಕುಟುಂಬದೊಂದಿಗೆ ಇದ್ದರೆ ಮಾತ್ರ ನಾವು ಅವರನ್ನು ಒಳಗೆ ಬಿಡುತ್ತೇವೆ. ಇಂದು ನನಗೆ ಕರೆ ಮಾಡಿದ ಇಬ್ಬರು ಮಕ್ಕಳು ಅವರು ಎಷ್ಟು ಖಿನ್ನತೆಗೆ ಒಳಗಾಗಿದ್ದಾರೆಂದು ಹಂಚಿಕೊಂಡರು. ಚಿಂತಿಸಬೇಡಿ, ಇದು ಪ್ರಪಂಚದ ಅಂತ್ಯವಲ್ಲ ಎಂದು ನಾನು ಅವರಿಗೆ ಹೇಳಿದ್ದೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com