ರಂಜಾನ್ ಮಾಸದಲ್ಲಿ ಜನಸೇವೆ: ಜಗತ್ತೇ ನಿದ್ದೆ ಮಾಡುವಾಗ ಹಸಿದವರಿಗೆ ಊಟ ನೀಡುವ ಬೆಂಗಳೂರಿನ ವಕೀಲ!

ಅನೇಕರು ರಾತ್ರಿ 11.30 ಕ್ಕೆಎಲ್ಲ ಬಿಟ್ಟು ಮಲಗಲು ಅಣಿಯಾದರೆ ಸದ್ದಾಂ ಬೇಗ್ ಎಂಬ ವಕೀಲರು ಮಾತ್ರ ರಂಜಾನ್ ಪ್ರಾರಂಭವಾದಾಗಿನಿಂದ, ಪಾದರಾಯನಪುರದಲ್ಲಿನ 500 ಕ್ಕೂ ಹೆಚ್ಚು ಜನರಿಗೆ ಊಟದ ಪೊಟ್ಟಣವನ್ನು ಸ್ವಯಂಪ್ರೇರಣೆಯಿಂದ ವಿತರಿಸುತ್ತಿದ್ದಾರೆ.
ವಕೀಲ  ಸದ್ದಾಂ ಬೇಗ್
ವಕೀಲ ಸದ್ದಾಂ ಬೇಗ್
Updated on

ಬೆಂಗಳೂರು: ಅನೇಕರು ರಾತ್ರಿ 11.30 ಕ್ಕೆಎಲ್ಲ ಬಿಟ್ಟು ಮಲಗಲು ಅಣಿಯಾದರೆ ಸದ್ದಾಂ ಬೇಗ್ ಎಂಬ ವಕೀಲರು ಮಾತ್ರ ರಂಜಾನ್ ಪ್ರಾರಂಭವಾದಾಗಿನಿಂದ,ಪಾದರಾಯನಪುರದಲ್ಲಿನ 500 ಕ್ಕೂ ಹೆಚ್ಚು ಜನರಿಗೆ ಸೆಹ್ರಿ (ಮುಸ್ಲಿಮರು ಪವಿತ್ರ ತಿಂಗಳಲ್ಲಿ ಉಪವಾಸವನ್ನು ಪ್ರಾರಂಭಿಸುವ ಮೊದಲು ಮುಂಜಾನೆ ಸೇವಿಸುವ) ಊಟದ ಪೊಟ್ಟಣವನ್ನು ಸ್ವಯಂಪ್ರೇರಣೆಯಿಂದ ವಿತರಿಸುತ್ತಿದ್ದಾರೆ.

ಸ್ಥಳೀಯ ನಿವಾಸಿ, ಬೇಗ್ ಹೇಳುವಂತೆ "ಸುತ್ತಲೂ ಅನೇಕ ಕೊಳೆಗೇರಿಗಳಿವೆ ಮತ್ತು ದೈನಂದಿನ ಕೂಲಿ ಕಾರ್ಮಿಕರು ಈ ದಿನಗಳಲ್ಲಿ ಊಟಕ್ಕಾಗಿ ಹೆಣಗಾಡುತ್ತಿದ್ದಾರೆ. ಕಳೆದ ವರ್ಷವೂ ನಾನು ಈ ಉಪಕ್ರಮದಲ್ಲಿ ಪಾಲ್ಗೊಂಡಿದ್ದೆ,ಆದರೆ ನಂತರ, ಕೋರಮಂಗಲ ಮತ್ತು ಆರ್.ಟಿ.ನಗರದಂತಹ ನಗರದ ವಿವಿಧ ಪ್ರದೇಶಗಳಿಗೆ ವಿವಿಧ ಗುಂಪುಗಳು ಈ ಬಗೆಯಲ್ಲಿ ಸೇವೆ ಸಲ್ಲಿಸಿವೆ." ಈ ವರ್ಷ ಒಳ್ಳೆಯ ಕಾರ್ಯವನ್ನು ಬಿಟ್ಟುಕೊಡಲು ಇಷ್ಟಪಡದ 28 ವರ್ಷದ ಯುವ ವಕೀಲ ಮತ್ತೊಮ್ಮೆ ಅಂತಹದೇ ಕಾರ್ಯಕ್ಕಿಳಿದಿದ್ದಾರೆ.. ಈ ಉಪಕ್ರಮವನ್ನು ಆಯಿನಾ ಟ್ರಸ್ಟ್ ಎಂಬ ಚಾರಿಟಬಲ್ ಸಂಸ್ಥೆ ಪ್ರಾರಂಭಿಸಿದೆ, ಆದರೆ ಟ್ರಸ್ಟ್ ಹೊರಗಿನ ಸ್ವಯಂಸೇವಕರನ್ನು ಒಳಗೊಂಡಿದೆ. ಪ್ರತಿದಿನ, ತಂಡವು ಅಗತ್ಯವಿರುವವರಿಗೆ ಊಟವನ್ನು ತಲುಪಿಸುತ್ತಿದೆ ಇದಕ್ಕೆ ದೇಣಿಗೆಯಿಂದ ಬಂದ ಹಣ ಬಳಸಲಾಗುತ್ತಿದೆ.

“ಈ ಸಮಯದಲ್ಲಿ ನಾವು ಅನೇಕ ಜನರು ತಮ್ಮ ಪ್ರೀತಿ, ಅಭಿಮಾನವನ್ನು ತೋರಿದ್ದೇವೆ.. ಉದಾಹರಣೆಗೆ, ನಮ್ಮ ಅಡುಗೆ ತಂಡವು ಮೂರು ಜನರನ್ನು ಹೊಂದಿದೆ, ಇದರಲ್ಲಿ 100 ಕೆಜಿ ಅಕ್ಕಿಯಿಂದ ಒಂದು ರೀತಿಯ ಚಕ್ನಾ ಮತ್ತು ಒಂದು ಗ್ರೇವಿಯನ್ನು ತಯಾರಿಸಲು ಮುಖ್ಯ ಬಾಣಸಿಗ ದಿನಕ್ಕೆ 1,000 ರೂಗಳನ್ನು ಮಾತ್ರ ತೆಗೆದುಕೊಳ್ಳುತ್ತಾನೆ ”ಎಂದು ಆಯಿನಾ ಟ್ರಸ್ಟ್‌ನ ಟ್ರಸ್ಟಿಯಾಗಿರುವ ಬೇಗ್ ಹೇಳುತ್ತಾರೆ.

ರಾತ್ರಿ 11.30 ರ ವೇಳೆಗೆ ಆಹಾರವನ್ನು ಸಿದ್ಧಪಡಿಸಿದ ನಂತರ, ತಂಡವು ಅದನ್ನು ಪ್ಯಾಕ್ ಮಾಡುವ ಕೆಲಸಕ್ಕೆ ಇಳಿಯುತ್ತದೆ ಮತ್ತು ನಂತರ 3 ಗಂಟೆಯ ಸಮಯದಲ್ಲಿ ವಿತರಣೆ ಮಾಡಲು ಹೊರಡುತ್ತದೆ. ಈ ನಡುವೆ ನಿದ್ರೆಯ ಸಮಯವೂ ಇರುವುದಿಲ್ಲ. "ನಾನುನಿದ್ರೆ ಮಾಡುವುದಿಲ್ಲ ಏಕೆಂದರೆ ನಮ್ಮನ್ನು ಅವಲಂಬಿರುವ ಜನರಿದ್ದಾರೆ.ಒಂದು ದಿನ, ನಾವು ತಲುಪುವುದು 10-15 ನಿಮಿಷ ತಡವಾಗಿತ್ತು ಆದರೆ ನಾವು ತಲುಪಿದಾಗ, ಕೆಲವು ಕುಟುಂಬಗ ಸದಸ್ಯರು ನಮ್ಮ ನಿರೀಕ್ಷೆಯಲ್ಲಿದ್ದರು. ಅವರ ಕಣ್ಣಲ್ಲಿ ನೀರು ಕಂಡಿತ್ತು, . ಆ ದಿನ ಅವರುತಮಗೆ ಊಟ ಸಿಕ್ಕುವುದಿಲ್ಲ ಎಂದು ಭಾವಿಸಿದ್ದರು, ”ಬೇಗ್ ನೆನಪಿಸಿಕೊಳ್ಳುತ್ತಾರೆ, ಅಗತ್ಯವಿರುವ ಜನರಿಗೆ ಊಟದ ವಿತರಣೆ ಮುಗಿದ ನಂತರ ತಂಡವು ತಮ್ಮದೇ ಆದ ಸೆಹ್ರಿಗಾಗಿ ಕುಳಿತುಕೊಳ್ಳುತ್ತದೆ. "ನಾನು ಈ ದಿನಗಳಲ್ಲಿ ಕಡಿಮೆ ನಿದ್ರೆ ಮಾಡುತ್ತೇನೆ ಆದರೆ ಅದು ಶಾಂತಿಯುತ ನಿದ್ರೆ. ಮತ್ತು ಇತರರಿಗೆ ಸಹಾಯ ಮಾಡುವುದರಿಂದ ಆಯಾಸವನ್ನು ಸಂಭಾಳಿಸುವ ಶಕ್ತಿ ನನಗೆ ಒದಗುತ್ತದೆ."ಅವರು ಹೇಳುತ್ತಾರೆ.

ಟ್ರಸ್ಟ್‌ನ ಅಧ್ಯಕ್ಷರಾಗಿರುವ ಇರ್ಫಾನ್ ಅಹಮದ್ ಝಡ್. ಹೇಳುವಂತೆ ಈ ನೆರವು ರಂಜಾನ್‌ಗೆ ಸೀಮಿತವಾಗಿರಲು ಬಯಸುವುದಿಲ್ಲ "ಲಾಕ್ ಡೌನ್ ಮುಂದುವರಿದರೆ, ಆ ಸಮಯದಲ್ಲಿ ನಾವು ಸಹಾಯ ಮಾಡಲು ಬಯಸುತ್ತೇವೆ" ಎಂದು ಅವರು ಹೇಳುತ್ತಾರೆ. , “ಇಲ್ಲಿಯವರೆಗೆ, ನಿರ್ಬಂಧಗಳ ಹೊರತಾಗಿಯೂ ನಾವು ಯಾವುದೇ ತೊಂದರೆಗಳನ್ನು ಎದುರಿಸಲಿಲ್ಲ. ನಮ್ಮ ಪ್ರದೇಶದ ಪೊಲೀಸ್ ಸಿಬ್ಬಂದಿಗೆ ಸಹ ನಮ್ಮ ಕೆಲಸದ ಬಗ್ಗೆ ತಿಳಿದಿದೆ ಮತ್ತು ಅವರು ನಮಗೆ ಅಡ್ಡಿಯುಂಟು ಮಾಡಿಲ್ಲ.. ನಾವು ನಮ್ಮನ್ನು ಎರಡು ತಂಡಗಳಾಗಿ ವಿಂಗಡಿಸಿಕೊಂಡಿದ್ದೇವೆ. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ” ಬೇಗ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com