ಕರ್ನಾಟಕ ಲಾಕ್‌ಡೌನ್ ಸಂಕಷ್ಟ: ಮಗನ ಔಷಧಿಗಾಗಿ 300 ಕಿ.ಮೀ. ಸೈಕಲ್ ತುಳಿದ ತಂದೆ!

ತನ್ನ ಮಗ 18 ವರ್ಷದವನಾಗುವವರೆಗೂ ಪ್ರತಿದಿನ ತಪ್ಪಿಸದಂತೆ ಔಷಧಿ ತೆಗೆದುಕೊಂಡರೆ ಅವನು ಇತರ ಹುಡುಗರಂತೆ ಸಾಮಾನ್ಯನಂತಾಗುತ್ತಾನೆ ಎಂದು ವೈದ್ಯರು ನೀಡಿದ ಭರವಸೆಯಿಂದಾಗಿ ಎರಡನೇ ಆಲೋಚನೆ ಮಾಡದೆ ತಂದೆ ಬರೋಬ್ಬರಿ 300 ಕಿ.ಮೀ ಸೈಕಲ್ ತಿಳಿದು ಔಷಧಿ ಖರೀದಿಸಿದ್ದಾರೆ. 
ಆನಂದ ಕುಟುಂಬ
ಆನಂದ ಕುಟುಂಬ
Updated on

ಮೈಸೂರು: ತನ್ನ ಮಗ 18 ವರ್ಷದವನಾಗುವವರೆಗೂ ಪ್ರತಿದಿನ ತಪ್ಪಿಸದಂತೆ ಔಷಧಿ ತೆಗೆದುಕೊಂಡರೆ ಅವನು ಇತರ ಹುಡುಗರಂತೆ ಸಾಮಾನ್ಯನಂತಾಗುತ್ತಾನೆ ಎಂದು ವೈದ್ಯರು ನೀಡಿದ ಭರವಸೆಯಿಂದಾಗಿ ಎರಡನೇ ಆಲೋಚನೆ ಮಾಡದೆ ತಂದೆ ಬರೋಬ್ಬರಿ 300 ಕಿ.ಮೀ ಸೈಕಲ್ ತಿಳಿದು ಔಷಧಿ ಖರೀದಿಸಿದ್ದಾರೆ. 

ಕೊರೋನಾ ಎರಡನೇ ಅಲೆ ಜೋರಾಗಿದ್ದರಿಂದ ಕರ್ನಾಟಕದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಹೀಗಾಗಿ 45 ವರ್ಷದ ಆನಂದ್ ತನ್ನ ಮಾನಸಿಕ ವಿಶೇಷ ಚೇತನ ಮಗನಿಗಾಗಿ ಮೈಸೂರಿನ ಟಿ. ನರಸಿಪುರದಿಂದ ಬೆಂಗಳೂರಿಗೆ ಸೈಕಲ್ ನಲ್ಲಿ ಬಂದಿದ್ದಾರೆ. ಲಾಕ್‌ಡೌನ್‌ನ ನಿಂದಾಗಿ ತನ್ನ ಹಳ್ಳಿಯಿಂದ ಬೆಂಗಳೂರಿಗೆ ಯಾವುದೇ ಸಾರ್ವಜನಿಕ ಸಾರಿಗೆ ಮತ್ತು ನಗರದಿಂದ ಔಷಧಿ ಪಡೆಯಲು ಖಾಸಗಿ ವಾಹನವನ್ನು ಕಾಯ್ದಿರಿಸಲು ಹಣವಿಲ್ಲದ ಕಾರಣ ದಿನಕೂಲಿ ಕೆಲಸಗಾರ ಆನಂದ್ ಅವರು ಈ ನಿರ್ಧಾರ ಕೈಗೊಂಡಿದ್ದರು. 

ಮೈಸೂರಿನ ಟಿ ನರಸೀಪುರ ತಾಲ್ಲೂಕಿನ ಗಣಿಗಾನ ಕೊಪ್ಪಲು ಗ್ರಾಮದ ಆನಂದ್ ಅಲ್ಲಿಂದ ಬೆಂಗಳೂರಿಗೆ 130-140 ಕಿ.ಮೀ. ದೂರ ಸೈಕಲ್ ನಲ್ಲಿ ಬಂದು ನಗರದ ನಿಮ್ಹಾನ್ಸ್‌ನಿಂದ ಔಷಧಿ ಖರೀದಿಸಿ, ಮತ್ತೆ ಊರಿಗೆ ತೆರಳಿದ್ದಾರೆ.  

ಬೌದ್ಧಿಕ ಅಂಗವೈಕಲ್ಯದಿಂದ ಬಳಲುತ್ತಿರುವ 10 ವರ್ಷದ ಮಗ ಭಿರೇಶ್ ಆರು ತಿಂಗಳ ಮಗುವಾಗಿದ್ದಾಗ ಆತನಲ್ಲಿ ಈ ಸಮಸ್ಯೆ ಇರುವುದನ್ನು ಗುರುತಿಸಲಾಯಿತು. ಅಂದಿನಿಂದ ದಿನಂಪ್ರತಿ ಔಷಧವನ್ನು ನೀಡುತ್ತಾ ಬರಲಾಗಿತ್ತು. ಆದರೆ ಔಷಧಗಳು ಖಾಲಿಯಾಗುತ್ತಾ ಬಂದಿದ್ದರಿಂದ ಆತಂಕಗೊಂಡು ಸೈಕಲ್ ನಲ್ಲೇ ಬೆಂಗಳೂರಿಗೆ ಬರುವ ದೃಢ ನಿರ್ಧಾರ ಕೈಗೊಂಡಿದ್ದಾಗಿ ಆನಂದ್ ಹೇಳಿದ್ದಾರೆ. 

ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಈ ಔಷಧಗಳನ್ನು ಉಚಿತವಾಗಿ ನೀಡುತ್ತಾರೆ. ಹೀಗಾಗಿ ಪ್ರತಿ ಎರಡು ತಿಂಗಳಿಗೊಮ್ಮೆ ನಾನು ಬೆಂಗಳೂರಿಗೆ ಬಂದು ಪಡೆಯುತ್ತಿದೆ. ಇನ್ನು ಬುಧವಾರ ವೇಳೆಗೆ ಔಷಧಗಳು ಖಾಲಿಯಾಗುತ್ತೆ ಎಂದು ತಿಳಿದು ನಾನು ಭಾನುವಾರ ನನ್ನ ಪ್ರಯಾಣವನ್ನು ಆರಂಭಿಸಿದೆ. ರಾತ್ರಿ ವೇಳೆ ದೇವಾಲಯದ ಬಳಿ ಮಲಗುತ್ತಿದ್ದೆ. ಇನ್ನು ಔಷಧವನ್ನು ಪಡೆದು ಮಂಗಳವಾರ ಊರು ಸೇರಿದೆ ಎಂದು ಆನಂದ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com